ರೆಡಿಯಾಗಿ ಹದಿನೈದು ದಿನ,
ಜನರಿಗೆ ಉಪಯೋಗವಾಗದ ವಾಟರ್ ಫಿಲ್ಟರ್.


ಕೂಡ್ಲಿಗಿ. ಆ. 4 :- ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ  ಅನುಕೂಲವಾಗಲೆಂದು  ಕೂಡ್ಲಿಗಿ ಶಾಸಕರು ಜನಪರ ಕಾಳಜಿ ಇಟ್ಟುಕೊಂಡು 3.33 ಲಕ್ಷ ರೂ ಅನುದಾನದಲ್ಲಿ ವಾಟರ್ ಫಿಲ್ಟರ್ ನಿರ್ಮಿಸಿ ಹದಿನೈದು ಕಳೆದರೂ  ಜನರ ಉಪಯೋಗಕ್ಕೆ ಇನ್ನು ಮುಂದಾಗದೆ  ಸಾರಿಗೆ ಸಂಸ್ಥೆ ಅಧಿಕಾರಿಗಳು  ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ಎಷ್ಟರಮಟ್ಟಿಗೆ ಸರಿ.
ಕೂಡ್ಲಿಗಿ ಬಸ್ ಘಟಕ ಹಾಗೂ ನಿಲ್ದಾಣ ಅನೇಕ ಸಮಸ್ಯೆಗಳ ಆಗರವನ್ನೇ ಹೊತ್ತಿದ್ದು ಬಸ್ಸುಗಳ ಕೊರತೆ,  ಸಿಬ್ಬಂದಿ ಕೊರತೆ, ನಿರ್ವಾಕರಿಲ್ಲದೆ ಮ್ಯಾಕಾನಿಕ್ ಗಳು ಟಿಕೇಟ್ ಮಿಷೆನ್ ಹಿಡಿದುಕೊಂಡು ಹೋಗುವ ನಿಕೃಷ್ಟ ಪರಿಸ್ಥಿತಿ ಹಾಗೂ ಮಣಿಪಾಲ ಸೇರಿದಂತೆ ಅನೇಕ ಜನರ ಉಪಯೋಗದ ಆದಾಯದ ಮಾರ್ಗಗಳನ್ನು ರದ್ದು ಮಾಡಿ ಕಳಪೆ ಸಾಧನೆ ಕಿರೀಟ ತಂದಿಟ್ಟ ಸಾರಿಗೆ ಸಂಸ್ಥೆ ಅಧಿಕಾರಿಗಳು ಕೂಡ್ಲಿಗಿ ಘಟಕವನ್ನು ಮೂಲೆಗುಂಪು ಮಾಡುತ್ತಿರುವುದು ಒಂದು ಕಡೆಯಾದರೆ ಬಸ್ ನಿಲ್ದಾಣದ ಗೋಳು ಒಂದೆಡೆ ಗ್ರಾಮೀಣ ಬಸ್ ಗಳು ಹೋಗುವ ನಿಲ್ದಾಣ ಮಾಡಿ ವರ್ಷಗಳೇ ಕಳೆದರೂ ರಾತ್ರಿಯಾದರೆ ಆ ನಿಲ್ದಾಣ ಕರೆಂಟ್ ವ್ಯವಸ್ಥೆ ಇಲ್ಲದ ಕತ್ತಲೆ ಗೂಡು, ನಿಲ್ದಾಣದ ಕಂಟ್ರೋಲರ್ ಇರುವ ರೂಂ ನಲ್ಲಿ ರಾತ್ರಿ 10 ರ ನಂತರ ಕರೆಂಟ್ ಹೋದರೆ ಸಾಕು ಕತ್ತಲಲ್ಲಿ ಕಂಟ್ರೋಲ್ ರೂಂ ಅದರಲ್ಲಿ  ಕಂಟ್ರೋಲರ್ ಹುಡುಕುವ ಪ್ರಸಂಗ ಕಂಡುಬರುತ್ತದೆ, ಕುಡಿಯುವ ನೀರಿನ ಪರಿಸ್ಥಿತಿ ಪ್ರಯಾಣಿಕರ ದಿನನಿತ್ಯದ ಗೋಳು ಎಂದರೆ ತಪ್ಪಾಗದು ಇದನ್ನು ಅರಿತ ಶಾಸಕ ಎನ್ ವೈ ಗೋಪಾಲಕೃಷ್ಣ ಕೂಡ್ಲಿಗಿ ಬಸ್ ನಿಲ್ದಾಣಕ್ಕೆ ಫಿಲ್ಟರ್ ವ್ಯವಸ್ಥೆ ಕಲ್ಪಿಸಿದ್ದಾರೆ ಆದರೆ ದೇವರು ವರ ಕೊಟ್ಟರೂ  ಪೂಜಾರಿ ವರ ಕೊಟ್ಟಿಲ್ಲ ಎಂಬಂತೆ ಶಾಸಕರು ಉದ್ಘಾಟನೆ ಮಾಡುವ ತನಕ ಫಿಲ್ಟರ್ ನೀರು ಜನರಿಗೆ ಬಿಡುವುದಿಲ್ಲ ಎನ್ನುತ್ತಾರೆ ಘಟಕದ ಅಧಿಕಾರಿಗಳು ಶಾಸಕರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದಂತೆ ಕಳಪೆ ಸಾಧನೆಗೆ ತಂದುನಿಲ್ಲಿಸಿದ ಕೂಡ್ಲಿಗಿ ಘಟಕದ ಅಧಿಕಾರಿಗಳನ್ನು ಬದಲಾಯಿಸಿ ಬೇರೊಬ್ಬ ಘಟಕದ ಅಧಿಕಾರಿಯನ್ನು ನಿಯೋಜನೆ ಮಾಡಿಸಿ ಆದಾಯದ ಮಾರ್ಗಗಳಾದ ಅನೇಕ ರೋಗಿಗಳಿಗೆ ಅನುಕೂಲವಾಗಿರುವ ಕೂಡ್ಲಿಗಿ ಘಟಕದ ದೋಣಿಮಲೈ ಮಣಿಪಾಲ, ಧರ್ಮಸ್ಥಳ, ಮಂತ್ರಾಲಯ ಸೇರಿದಂತೆ ಅನೇಕ ಮಾರ್ಗಗಳನ್ನು ಪುನರಾರಂಭಿಸುವಂತೆ ಮೇಲಧಿಕಾರಿಗಳಿಗೆ ಒತ್ತಾಯಿಸಿ  ಕೂಡ್ಲಿಗಿ ಘಟಕಕ್ಕೆ ಹೆಚ್ಚಿನ  ಬಸ್ ವ್ಯವಸ್ಥೆ ಕಲ್ಪಿಸಿ ಶಾಲಾಮಕ್ಕಳಿಗೂ ಅನುಕೂಲವಾಗುವ ರೀತಿ  ಮುಂದಾಗಿ ಕೂಡ್ಲಿಗಿ  ಸಾರಿಗೆ ಸಂಸ್ಥೆಯ  ಅಭಿವೃದ್ಧಿಗೂ ಒಂದು ಹೆಜ್ಜೆ ಇಡುವಂತೆ ಅಭಿವೃದ್ಧಿ ಹರಿಕಾರರಾದ ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಮುಂದಾಗುತ್ತಾರೆಂಬ ಭರವಸೆ ನಿಟ್ಟಿನಲ್ಲಿ ಕೂಡ್ಲಿಗಿ  ಪ್ರಜ್ಞಾವಂತ ಜನತೆ ಮನವಿ ಮಾಡುತ್ತಿದೆ.