ರೂ. 1 ಕೋಟಿ ಕಾಮಗಾರಿಗೆ ಚಾಲನೆ

ಬೀದರ್:ನ.16: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧ ಮಂಡಳಿಯ ರೂ. 1 ಕೋಟಿ ಅನುದಾನದಲ್ಲಿ ನಗರದ ವಿವಿಧ ವಾರ್ಡ್‍ಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಇಲ್ಲಿನ ನೌಬಾದ ಪ್ರದೇಶದಲ್ಲಿ ಮಂಗಳವಾರ ಕಾಮಗಾರಿಗೆ ಚಾಲನೆ ನೀಡಿದ ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಮಾತನಾಡಿ, ವಾರ್ಡ್ ಸಂಖ್ಯೆ 15, 16, 17 ಮತ್ತು 18ರ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಾಲ್ಕು ವಾರ್ಡ್‍ಗಳ ಜನರ ಬೇಡಿಕೆ ಮೇರೆಗೆ ಕೆಕೆಆರ್‍ಡಿಬಿ ಅನುದಾನದಿಂದ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿಯನ್ನು ಗುಣಮಟ್ಟದಿಂದ ಕೂಡಿರಬೇಕು ಹಾಗೂ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಸ್ಥಳೀಯರು ಕಾಮಗಾರಿ ಮೇಲೆ ನಿಗಾ ಇಡಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯರಾದ ರಾಜಾರಾಮ ಚಿಟ್ಟಾ, ಮಹಾದೇವಿ ಹುಮನಾಬಾದೆ, ಸಂಗಮೆಶ ಹುಮನಾಬಾದೆ, ಏಕನಾಥ, ವೈಜಿನಾಥ, ಸೂಯ9ಕಾಂತ, ಬಸವರಾಜ ಹುಮನಾಬಾದೆ ಇತರರಿದ್ದರು.