
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಸೆ,16- ನಗರ ಟ್ರಾಫಿಕ್ ಠಾಣೆಯಲ್ಲಿ ನಿನ್ಮೆ ಸಂಜೆ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಅಯ್ಯನ ಗೌಡ ವಿ.ಪಾಟೀಲ್ ಅವರ ನೇತೃತ್ವದಲ್ಲಿ, ಜಿಲ್ಲಾ ಆಟೋ ಚಾಕ ಸಂಘದ ಸಭೆ ನಡೆದು. ಎಲ್ಲಾ ಆಟೋ ಚಾಲಕರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸ ಬೇಕು ಇಲ್ಲದಿದ್ದರೆ ನಾನು ಮುಲಾಜಿಲ್ಲದೆ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.
ಜಿಲ್ಲಾ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ತಾಯಪ್ಪ ಅವರ ನೇತೃತ್ವದಲ್ಲಿ ಸೇರಿದ್ದ ಆಟೋ ಚಾಲಕರು, ಆಟೋ ನಿಲ್ದಾಣದ ಲೀಡರ್ ಗಳು ಇದ್ದರು.
ಇವರನ್ನು ಉದ್ದೇಶಿಸಿ ಮಾತನಾಡಿದ ಅಯ್ಯನಗೌಡ ಅವರು ಈ ಹಿಂದೆ ಏನಿತ್ತು, ಹೇಗಿತ್ತು ನನಗೆ ಬೇಡ. ಈಗ ನೀವೆಲ್ಲ ನಿಯಮದ ಪ್ರಕಾರ
ಸಮವಸ್ತ್ರ ಧರಿಸಬೇಕು, ಬಿಟಿಪಿ ಸಂಖ್ಯೆಯನ್ನು ಹೊಂದಬೇಕು. ಪ್ರಯಾಣಿಕರ ಬಳಿ ಸಂಯಮದಿಂದ ವರ್ತಿಸಬೇಕು ಎಂದರು.
ನನಗೆ ಒಂದಿಷ್ಟು ಮಾಹಿತಿ ಬಂದಿದೆ. ಡೂಪ್ಲಿಕೇಟ್ ಇನ್ಸುರೆನ್ಸ್ ಕಾಪಿ ಮಾಡಿಸಿರುವುದು. ಅದನ್ನೆಲ್ಲ ಬಿಡಿ. ತನಿಖೆ ಮಾಡಿದಾಗ ಸಿಕ್ಕಿಬಿದ್ದರೆ ಶಿಸ್ತುಕ್ರಮ ಜರುಗಲಿದೆಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಚಾಲಕ ಮುಖಂಡರಾದ ಮಜೀದ್, ಶೇಕ್ಷಾವಲಿ, ಗಾದಿಲಿಂಗಪ್ಪ, ಮಲ್ಲಿಕಾರ್ಜುನ, ಜಮೀರ್, ನಾಗರಾಜ್ ನಾಯ್ಕ, ಸರ್ದಾರ್, ಯೂನಸ್ ಮೊದಲಾದವರು ಉಪಸ್ಥಿತರಿದ್ದರು.