ರೂಮೀ ಜಾಫ್ರೀ ನಿರ್ದೇಶನದ ’ ಚೆಹರೇ’ ಫಿಲ್ಮ್ ನಿಂದ ರಿಯಾ ಚಕ್ರವರ್ತಿಯ ಪಾತ್ರ ತೆಗೆಯುವುದಿಲ್ಲವಂತೆ.

’ಚೆಹರೆ’ ಫಿಲ್ಮ್ ನ ನಿರ್ದೇಶಕ ರೂಮೀ ಜಾಫ್ರಿ ಒಂದು ಮಾತು ಸ್ಪಷ್ಟಪಡಿಸಿದ್ದಾರೆ- ಈ ಫಿಲ್ಮ್ ನಿಂದ ರಿಯಾ ಚಕ್ರವರ್ತಿಯ ಪಾತ್ರವನ್ನು ತೆಗೆಯುವುದಿಲ್ಲ ಎಂದು.ರಿಯಾ ಚಕ್ರವರ್ತಿ ಫಿಲ್ಮ್ ನ ಅವಿಭಾಜ್ಯ ಅಂಗ ಎಂದಿದ್ದಾರೆ.


“ಫಿಲ್ಮ್ ನಲ್ಲಿ ರಿಯಾಳ ಪಾತ್ರ ಬಹಳ ಚಿಕ್ಕದು. ಆದರೆ ಪ್ರಭಾವಿ ಪಾತ್ರವದು” ಎಂದಿದ್ದಾರೆ.
ಮೊನ್ನೆ ಫಿಲ್ಮ್ ನ ಟ್ರೈಲರ್ ಬಿಡುಗಡೆಯಾಗಿದೆ. ಇದರ ಪ್ರೊಡ್ಯೂಸರ್ ಆನಂದ್ ಪಂಡಿತ್ ಕೂಡ ಹೇಳುತ್ತಾರೆ- “ನಾನು ರಿಯಾ ಚಕ್ರವರ್ತಿಯನ್ನು ಪೂರ್ಣ ರೂಪದಿಂದ ಬೆಂಬಲಿಸುತ್ತೇನೆ” ಎಂದು.
ಸ್ಪಾಟ್ ಬಾಯ್ ವರದಿಯಂತೆ ನಿರ್ದೇಶಕ ರೂಮೀ ಜಾಫ್ರಿ ಹೇಳುತ್ತಾರೆ – “ರಿಯಾ ಚಕ್ರವರ್ತಿಯನ್ನು ಬಿಟ್ಟು ಬಿಡುವುದಾದರೂ ಹೇಗೆ ? ಟ್ರೇಲರ್ ನಲ್ಲಿ ರಿಯಾ ಕೇವಲ ಎರಡು ಸೆಕೆಂಡ್ ಕಾಣಿಸುತ್ತಾರೆ .ಇದನ್ನು ಮುಂದಿಟ್ಟು ಚರ್ಚೆಯ ಬಜಾರ್ ಜೋರಾಗಿರಬಹುದು” ಎಂದು.
ಫಿಲ್ಮ್ ನಲ್ಲಿ ಕೇವಲ ಒಂದು ಹಾಡು ಮಾತ್ರ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ರೂಮೀ ಜಾಫ್ರಿ ಹೇಳುತ್ತಾರೆ- “ನಾನು ಬಹಳ ಮೊದಲು ಕೇಳಿದ್ದೆ , ಬಿ ಆರ್ ಚೋಪ್ರಾ ಮತ್ತು ಅವರ ಸಹೋದರ ಯಶ್ ಚೋಪ್ರಾ ಸುಸ್ಪೆನ್ಸ್ ಥ್ರಿಲ್ಲರ್ ಫಿಲ್ಮ್ ಗಳಲ್ಲಿ ಹಾಡು ಇರಿಸುತ್ತಿರಲಿಲ್ಲ. ಯಶ್ ಚೋಪ್ರಾರ ಇತ್ತೇಫಾಕ್ ಫಿಲ್ಮ್ ನಲ್ಲಿ ಹಾಡು ಇರಲೇ ಇಲ್ಲ” ಎಂದು. ನಿರ್ದೇಶಕ ರೂಮೀ ಜಾಫ್ರೀ ಮತ್ತು ನಿರ್ಮಾಪಕ ಆನಂದ ಪಂಡಿತ್ ಅವರು ರಿಯಾ ಚಕ್ರವರ್ತಿಯ ಪಾತ್ರವನ್ನು ಯಾವುದೇ ರೀತಿಯಲ್ಲಿ ಕಟ್ ಮಾಡಿಲ್ಲ,ಮತ್ತು ಮೊಟಕುಗೊಳಿಸಿಲ್ಲ” ಎಂದಿದ್ದಾರೆ.

ಕೊರೊನಾ ಪಾಸಿಟಿವ್ ಮನೋಜ್ ಬಾಜಪೇಯಿ ಅವರಿಗೆ ಮಗಳ ಚಿಂತೆ

ಮುಂಬೈಯಲ್ಲಿ ಈಗ ಕೊರೋನಾ ಸೋಂಕು ರೋಗದ ಮತ್ತೆ ಹಾವಳಿ ಹೆಚ್ಚಿದೆ. ಬಾಲಿವುಡ್ ನ ಹಲವು ನಟರು ಈ ವೈರಸ್ಸಿನ ಸೋಂಕು ತಗಲಿ ಸಿಕೊಂಡಿದ್ದಾರೆ.
ಕಳೆದ ವಾರದ ಆರಂಭದಲ್ಲಿ ನಟ ಮನೋಜ್ ಬಾಜಪೇಯಿ ಕೊರೊನಾ ಪಾಸಿಟಿವ್ ಆಗಿದ್ದರು. ಈಗ ಅವರಿಗೆ ತನ್ನ ಮಗಳ ಚಿಂತೆ ಕಾಡುತ್ತಿದೆಯಂತೆ. ಒಂದೇ ಮನೆಯಲ್ಲಿದ್ದು ದೂರವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸಂಗತಿಯಾಗಿದೆ. ಕಾರಣ ಇವರ ಮಗಳು ಇನ್ನೂ ಚಿಕ್ಕವಳು.
ಮನೋಜ್ ಬಾಜಪೇಯಿ “ದ ಫ್ಯಾಮಿಲಿ ಮ್ಯಾನ್ ೨” ಮತ್ತು ’ಡಿಸ್ಪ್ಯಾಚ್’ ಫಿಲ್ಮ್ ನ ಡಬ್ಬಿಂಗ್ ಪೂರ್ಣಗೊಳಿಸಿದ್ದಾರೆ. ಹೊಸ ಗೈಡ್ ಲೈನ್ಸ್ ಅನ್ನು ಪಾಲನೆ ಮಾಡಿದ್ದರಂತೆ. ಆದರೆ ಬೇರೆಯವರ ನಿರ್ಲಕ್ಷದಿಂದಾಗಿ ತನಗೆ ಪಾಸಿಟಿವ್ ಬಂದ ಬಗ್ಗೆ ಅವರು ಸ್ವಲ್ಪ ಬೇಸರದಿಂದಲೇ ಹೇಳಿಕೊಳ್ಳುತ್ತಾರೆ. ಮನೋಜ್ ಬಾಜಪೇಯಿ ಅವರ ಬ್ಯಾಕ್ ಟು ಬ್ಯಾಕ್ ಫಿಲ್ಮ್ ಗಳು ಮತ್ತು ವೆಬ್ ಸೀರೀಸ್ ಬರುತ್ತಿವೆ .ಆದರೆ ಅವರ ಆರೋಗ್ಯ ಸ್ಥಿತಿ ಸರಿಯಾಗುವ ತನಕ ಅವರ ’ಡಿಸ್ಪ್ಯಾಚ್’ ಫಿಲ್ಮ್ ಅನ್ನು ತಡೆಹಿಡಿಯಲಾಗಿದೆ. ಹಾಗೂ ಅನ್ಯ ಡೇಟ್ಸ್ ಮತ್ತು ಪ್ರೋಗ್ರಾಮನ್ನು ಕೂಡ ಮುಂದೂಡಲಾಗಿದೆ.

ವೀಕೆಂಡ್ ಖುಷಿಯಲ್ಲಿ ಮಲೈಕಾರ ಹೀಗೊಂದು ಡ್ಯಾನ್ಸ್

ಲೈಕಾ ಅರೋರಾ ಜಿಮ್ ಒಂದರಲ್ಲಿ ಡ್ಯಾನ್ಸ್ ಮಾಡುತ್ತಿರುವ ವೀಡಿಯೋವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ವಿಶೇಷ ಭಂಗಿಯ ಡ್ಯಾನ್ಸ್ ಗಮನ ಸೆಳೆದಿದೆ. ಆಶ್ಚರ್ಯ ಅಂದರೆ ಈ ವಿಡಿಯೋ ಹಾಕಿದ ಒಂದು ಗಂಟೆಯೊಳಗೆ ಆರು ಲಕ್ಷಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದರು.
ಮಲೈಕಾರ ಬಾಯ್ಫ್ರೆಂಡ್ ಅರ್ಜುನ್ ಕಪೂರ್ ಕೂಡಾ ಡ್ಯಾನ್ಸ್ ವಿಡಿಯೋಗೆ ಲೈಕ್ ಕೊಟ್ಟಿದ್ದಾರೆ. ಮಲೈಕಾ ಈ ವಿಡಿಯೋದಲ್ಲಿ ಜಿಮ್ ನಲ್ಲಿ ವ್ಯಾಯಾಮದ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಮಲೈಕಾರ ಈ ಡ್ಯಾನ್ಸಿಗೆ ಅಭಿಮಾನಿಗಳು ಮಾತ್ರವಲ್ಲ ಬಾಲಿವುಡ್ ಡನ ಅನೇಕ ಫ್ರೆಂಡ್ಸ್ ಗಳು ಕೂಡ ಲೈಕ್ ಕೊಟ್ಟಿದ್ದಾರೆ.
ಹಲವರಿಗೆ ಮಲೈಕಾ ಉತ್ತರವನ್ನೂ ನೀಡಿದ್ದಾರೆ.
ಈ ವಿಡಿಯೋವನ್ನು ಶೇರ್ ಮಾಡುತ್ತಾ ಮಲೈಕಾ ಬರೆದಿದ್ದಾರೆ- ವೀಕೆಂಡಿಗೆ ಡ್ಯಾನ್ಸ್ ಮಾಡುವುದು ನನ್ನ ಒಂದು ಅಭ್ಯಾಸ ಎಂದು. ಇದರಲ್ಲಿ ಒಂದು ಇಂಗ್ಲಿಷ್ ಹಾಡನ್ನು ಸೇರಿಸಿದ್ದಾರೆ.