ರೂಪಾಂತರ ಸೋಂಕು ದೇಶದಲ್ಲಿ 82 ಕ್ಕೆ ಏರಿಕೆ

ನವದೆಹಲಿ, ಜ.೮-ಇಂಗ್ಲೆಂಡ್ ನಿಂದ ಭಾರತಕ್ಕೆ ಬಂದವರಲ್ಲಿ ರೂಪಾಂತರ ಕೊರೋನೊ ಸೊಂಕು ಇಂದು ಹೊಸದಾಗಿ ೧೧ಮಂದಿಗೆ ಕಾಣಿಸಿಕೊಂಡಿದ್ದು ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ ೮೨ ಕ್ಕೆ ಏರಿಕೆಯಾಗಿದೆ.

ನೆನ್ನೆ ತನಕ ಈ ಮಾದರಿಯ ಸ್ವತ್ತಿನ ಸಂಖ್ಯೆ ೭೧ ಇತ್ತು ಇಂದು ೧೧ ಮಂದಿ ಹೊಸದಾಗಿ ಪತ್ತೆಯಾದ ಹಿನ್ನೆಲೆಯಲ್ಲಿ ಸಂಖ್ಯೆ ೮೨ ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಹೊಸದಾಗಿ ಸೋಂಕು ಪತ್ತೆಯಾದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಅವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಸಚಿವಾಲಯ ತನ್ನ ಮಾಹಿತಿಯಲ್ಲಿ ತಿಳಿಸಿದೆ.

ರೂಪಾಂತರ ಕೊರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೋಂಕಿತರ ಸಂಪರ್ಕದಲ್ಲಿರುವ ಸಹಪ್ರಯಾಣಿಕರು ಕುಟುಂಬದ ಸದಸ್ಯರು ಮತ್ತು ಅವರ ಸ್ನೇಹಿತರು ಸಂಪರ್ಕ ಪತ್ತೆ ಮಾಡುವ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಲಾಗಿದೆ.

ಇದುವರೆಗೂ ರೂಪಾಂತರ ಕರೋನೋ ಸೋಂಕು ಇಂಗ್ಲೆಂಡ್ನಿಂದ ಆರಂಭವಾಗಿ ಡೆನ್ಮಾರ್ಕ್, ನೆದರ್ಲ್ಯಾಂಡ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಟ್ಜರ್ಲ್ಯಾಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್, ಅಮೇರಿಕಾ ಮತ್ತು ಸಿಂಗಪುರ್ ದೇಶಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ