ರೂಪಾಂತರ ಸೋಂಕು ದೇಶದಲ್ಲಿ 71ಕ್ಕೇ ಏರಿಕೆ

ನವದೆಹಲಿ, ಜ. ೬- ಇಂಗ್ಲೆಂಡ್‌ನಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿರುವ ರೂಪಾಂತರ ಕೊರೋನಾ ಸೋಂಕು ಸಂಖ್ಯೆ ಭಾರತದಲ್ಲಿ ೭೧ಕ್ಕೆ ಏರಿಕೆಯಾಗಿದೆ.ಕಳೆದ ೨೪ ಗಂಟೆಗಳಲ್ಲಿ ೧೩ ರೂಪಾಂತರವನ್ನು ಸೋಂಕು ಕಾಣಿಸಿಕೊಳ್ಳುವ ಮೂಲಕ ಈ ಸಂಖ್ಯೆ ೭೧ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ನೆನ್ನೆಯವರೆಗೂ ದೇಶದಲ್ಲಿ ರೂಪಾಂತರ ಸೋಂಕಿನ ಸಂಖ್ಯೆ ೫೮ ಇತ್ತು. ದಿನದಿಂದ ದಿನಕ್ಕೆ ದೇಶದಲ್ಲಿ ರೂಪಾಂತರ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮತ್ತಷ್ಟು ಆತಂಕಕ್ಕೆ ಸಿಲುಕಿಸಿದೆ.ರೂಪಾಂತರ ಸೋಂಕು ಪತ್ತೆಯಾದ ಎಲ್ಲ ಸೋಂಕಿತರನ್ನು ನಿಗದಿತ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಇಂಗ್ಲೆಂಡ್ ನಿಂದ ಭಾರತಕ್ಕೆ ಬಂದ ಜನರಲ್ಲಿ ಡಿಸೆಂಬರ್ ೨೯ರಂದು ಆರು ಮಂದಿಗೆ ಮೊದಲ ಬಾರಿಗೆ ೬ ಮಂದಿಗೆ ರೂಪಾಂತರ ಕಾಣಿಸಿಕೊಂಡಿತ್ತು. ಅದಾದ ಬಳಿಕ ದಿನದಿಂದ ದಿನಕ್ಕೆ ಈ ಸೋಂಕಿನ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಲೇ ಇದೆ.ಇಂಗ್ಲೆಂಡ್ ನಿಂದ ಭಾರತಕ್ಕೆ ನವಂಬರ್ ೨೫ ರಿಂದ ಡಿಸೆಂಬರ್ ೨೩ ತನಕ ಸರಿ ಸುಮಾರು ೩೩ ಸಾವಿರಕ್ಕೂ ಹೆಚ್ಚು ಜನರು ವಿವಿಧ ರಾಜ್ಯಗಳಿಗೆ ಆಗಮಿಸಿದ್ದಾರೆ.

ದೇಶಕ್ಕೆ ಆಗಮಿಸಿದ ಎಲ್ಲಾ ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಲಾಗಿದೆ ಅಲ್ಲದೆ ಅವರ ಮಾಹಿತಿಯನ್ನು ಸಂಗ್ರಹಿಸಿ ಕೆಲವರನ್ನು ಪರೀಕ್ಷೆ ಮಾಡಲಾಗಿದ್ದು ಇನ್ನೂ ಕೆಲವರನ್ನು ಪರೀಕ್ಷೆ ಮಾಡಬೇಕಾಗಿದೆ ಎಂದು ಸಚಿವಾಲಯ ತಿಳಿಸಿದೆ.ಕೊರೊನಾ ಸೋಂಕು ಇಳಿಕೆ:

ದೇಶದಲ್ಲಿ ಕೊರೋನೋ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ ಆದರೆ ಈ ನಡುವೆ ಇಂಗ್ಲೆಂಡ್ನಿಂದ ಬಂದ ಪ್ರಯಾಣಿಕರಲ್ಲಿ ರೂಪಾಂತರ ಹೆಚ್ಚುತ್ತಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆತಂಕಕ್ಕೆ ದೂಡಿದೆ