ರೂಪಾಂತರಿ ಕೊರೋನ ಜಾಗೃತಿ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಂಡೂರು: ಎ: 02: ತಾಲೂಕಿನ ಕುರೇಕುಪ್ಪ ಗ್ರಾಮದ ಅಂಬೇಡ್ಕರ್ ಕಾಲೋನಿಯ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ರೂಪಾಂತರಿ ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಲಾಯಿತು, ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡುತ್ತಾ ಕೋವಿಡ್ ಪ್ರಕರಣಗಳು ಕಂಡು ಬರುತ್ತಿವೆ, ಈಗಾಗಲೇ ಪ್ರಕಾಷನ್ ಡೋಸ್ ಲಸಿಕೆ ನೀಡಲಾಗಿದೆ, ಭಯ ಬೀಳುವ ಅವಶ್ಯಕತೆ ಇರುವುದಿಲ್ಲ, ಆದರೂ ಎಚ್ಚರಿಕೆಯಿಂದ ಇರಬೇಕು, ಯಾರಿಗೆ ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳ ಇವೆ ಅವರು ವೈದ್ಯ ಬಳಿ ತಪಾಸಣೆಗೆ ಒಳಗಾಗಬೇಕು, ಅವರು ಕೋವಿಡ್ ಟೆಸ್ಟ್ ಗೆ ಸೂಚಿಸಿದರೆ ಪರೀಕ್ಷೆ ಮಾಡಿಸಿಕೊಳ್ಳಬೇಕು, ಐದು ದಿನಗಳ ಕಾಲ ಮನೆಯಲ್ಲೇ ಚಿಕಿತ್ಸೆಯೊಂದಿಗೆ ಮಾಸ್ಕ್ ಧರಿಸುವುದು, ಕೈಗಳಿಗೆ ಸ್ಯಾಟೈಸ್ ಮಾಡಿಕೊಳ್ಳುವುದು, ಇತರರಿಂದ ಅಂತರ ಕಾಪಾಡಿಕೊಳ್ಳುವುದು ಮಾಡಬೇಕು, ಗುಂಪು ಸೇರುವ ಸಂದರ್ಭದಲ್ಲಿ ತಮ್ಮ ಆರೋಗ್ಯದ ರಕ್ಷಣೆ ಬಗ್ಗೆ ಗಮನ ಹರಿಸಬೇಕು ಎಂದು ಅವರು ತಿಳಿಸಿದರು,
ಈ ಸಂದರ್ಭದಲ್ಲಿ ಗ್ರಾಮದ ನಾಗರೀಕರಾದ ಶಿವಣ್ಣ, ಕೆಂಚಪ್ಪ,ನಾಗೇಶ, ಮುದುಗಪ್ಪ, ಗುಡಿ ಎಲ್ಲಪ್ಪ,ಮೌಲಾ, ಮಾರೇಶ,ವೀರೇಶ,ರಾಮ್ ನರೇಶ್, ಆಶಾ ಕಾರ್ಯಕರ್ತೆ ಬಸಮ್ಮ, ನೀಲಮ್ಮ ಇತರರು ಉಪಸ್ಥಿತರಿದ್ದರು