ರೂಪನಗುಡಿಯಲ್ಲಿ “ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ” ನಿಮಿತ್ತ ಜಾಥಾ


ಬಳ್ಳಾರಿ,ಜು, 20ರಾಜ್ಯಾದಾದ್ಯಂತ ಜು.17 ರಿಂದ ಆ.02 ರವರೆಗೆ ನಡೆಯುವ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮದಡಿ ರೂಪನಗುಡಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರದಿಂದ ಬುಧವಾರದಂದು ಜಾಥಾ ನಡೆಯಿತು.
ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ಣೇಕರ್ ಅವರು ಜಾಥಾಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಎರಡು ವಾರಕ್ಕೂ ಹೆಚ್ಚು ದಿನ ಕೆಮ್ಮು ಇರುವವರು ಹಾಗೂ ಕ್ಷಯ ರೋಗದಿದಂದ ಗುಣಮುಖರಾದವರು ಸಹ ಮತ್ತೊಮ್ಮೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕಫ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಯುಷ್ ವೈದ್ಯಾಧಿಕಾರಿ ಡಾ.ನಾರಾಯಣಬಾಬು, ವೈದ್ಯಾಧಿಕಾರಿ ಪ್ರಜ್ವಲ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
ಜಾಥಾವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು.