ರೂಪನಗುಡಿಯಲ್ಲಿ ವಿಶ್ವ ಮಲೇರಿಯಾ ಕಾರ್ಯಕ್ರಮ ಆಚರಣೆ


ಬಳ್ಳಾರಿ,ಏ.27: ಮಲೇರಿಯಾ ರೋಗವು ಸೋಂಕಿತ ಸೊಳ್ಳೆಯ ಕಡಿತದಿಂದ ಹರಡುವ ಗಂಭೀರ ಖಾಯಿಲೆಯಾಗಿದ್ದು, ಒಬ್ಬ ವ್ಯಕ್ತಿಗೆ ಜ್ವರ ಮತ್ತು ಶೀತವನ್ನು ಉಂಟು ಮಾಡಬಹುದು. ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಹೊಂದಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ಣೇಕರ್ ಅವರು ಹೇಳಿದರು.
ವಿಶ್ವ ಮಲೇರಿಯಾ ಅಂಗವಾಗಿ ರೂಪನಗುಡಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು. ರಾತ್ರಿ ವೇಳೆ ಮಲಗುವಾಗ ಫ್ಯಾನ್ ಮತ್ತು ಸೊಳ್ಳೆ ಪರದೆ ಉಪಯೋಗಿಸಿ,  ಮುಸ್ಸಂಜೆ ವೇಳೆ ಸೊಳ್ಳೆಗಳು ಹೆಚ್ಚು ಇರುವ ಸಮಯದಲ್ಲಿ ಸೊಳ್ಳೆ ಬತ್ತಿಗಳು ಹಾಗೂ ಸೊಳ್ಳೆ ನಿವಾರಕಗಳನ್ನು ಬಳಸಿ ಸೊಳ್ಳೆಗಳಿಂದ ಸುರಕ್ಷಿತವಾಗಿರಿ ಹಾಗೂ ಮಲೇರಿಯಾ ತಡೆಗಟ್ಟಲು ಸಹಕರಿಸಿ ಎಂದು ತಿಳಿಸಿದರು.
ಆಯುಷ್ ವೈದ್ಯಾಧಿಕಾರಿ ಡಾ.ನಾರಾಯಣಬಾಬು ಅವರು ಮಾತನಾಡಿ, ಮಲೇರಿಯ ರೋಗವು ಅನಾಫಿಲಿಸ್ ಹೆಣ್ಣು ಸೊಳ್ಳೆ ಕಡಿತದಿಂದ ಹರಡುತ್ತದೆ. ಮಲೇರಿಯ ರೊಗವು ತಗುಲಿದ ವ್ಯಕ್ತಿಗೆ ಅತೀ ಶೀಘ್ರವಾಗಿ ಚಿಕಿತ್ಸೆ ಕೊಡಿಸಬೇಕು ಇಲ್ಲದಿದ್ದರೆ ರೋಗವು ಉಲ್ಬಣಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಂತ ತಜ್ಞೆ ಡಾ.ಪ್ರಿಯಾಂಕಾ ರೆಡ್ಡಿ, ಆಯುಷ್ ವೈದ್ಯಾಧಿಕಾರಿ ಡಾ.ನಾರಾಯಣಬಾಬು ಹಾಗೂ ಪ್ರದಸ ವಿರೂಪಾಕ್ಷಸ್ವಾಮಿ ಸೇರಿದಂತೆ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

One attachment • Scanned by Gmail