ರೂಪನಗುಡಿಯಲ್ಲಿ  ಗಂಗಾಮತಸ್ಥರ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ನಾಗೇಂದ್ರ ಭೂಮಿಪೂಜೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜ,19- ತಾಲೂಕಿನ ರೂಪನಗುಡಿ ಗ್ರಾಮದಲ್ಲಿ ಗ್ರಾಮೀಣ  ಶಾಸಕ ಬಿ.ನಾಗೇಂದ್ರ ಅವರ ಅನುದಾನದ ಅಡಿಯಲ್ಲಿ 10 ಲಕ್ಷ ರೂ, ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಅವರ ಅನುದಾನದ ಅಡಿಯಲ್ಲಿ 15 ಲಕ್ಷ ರೂ. ಹಾಗೂ ರಾಜ್ಯಸಭಾ ಸದಸ್ಯ ಜಿ.ಸಿ ಚಂದ್ರಶೇಖರ ಅವರ ಅನುದಾನದ ಅಡಿಯಲ್ಲಿ 15 ಲಕ್ಷ ರೂ.  ಶೆರಿದಂತೆ ಒಟ್ಟು 40 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಗಂಗಾಮತಸ್ಥರ ಸಮುದಾಯ ಭವನ ಕಾಮಗಾರಿಗೆ ಶಾಸಕ ಬಿ.ನಾಗೇಂದ್ರ ಅವರು ಭೂಮಿ ಪೂಜೆ  ನೆರವೇರಿಸಿದರು.
ನಂತರ ಮಾತನಾಡಿದ ಅವರು ನನ್ನ  ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಮತ್ತು ಉದ್ಯೋಗ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ಜಯಣ್ಣ, ಗಂಗಪ್ಪ, ಕೃಷ್ಣಪ್ಪ, ಗಂಗಣ್ಣ, ಎರ್ರಿಸ್ವಾಮಿ, ಬಿ.ರಾಮಾಂಜಿನಿ, ಮುಕ್ಕಣ್ಣ, ದೊಡ್ಡ ನಾಗರಾಜ್, ಗ್ರಾಮ ಪಂಚಾಯತಿ ಸದಸ್ಯರಾದ ನಿಂಗಪ್ಪ, ಶಿವಶಂಕರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು