ರೂಪದರ್ಶಿ ಪೋಟೋ ‘ಲೈಕ್ ಮಾಡಿದ ಪೋಪ್..?!

ವ್ಯಾಟಿಕನ್ ಸಿಟಿ, ನ ೨೧- ಬಿಕಿನಿ ಧರಿಸಿದ ಬ್ರೆಜಿಲ್ ರೂಪದರ್ಶಿ ಪೋಟೋ ಗೆ ಪೋಪ್ ಫ್ರಾನ್ಸಿಸ್ ಮೆಚ್ಚಿ ಲೈಕ್ ಮಾಡಿರುವುದು ಈಗ ಭಾರಿ ವಿವಾದ ಸೃಷ್ಟಿಸಿದೆ.
ಈ ‘ಮೆಚ್ಚುಗೆ’ ಗೆ ಈ ಟೀಕೆಗಳು ವ್ಯಕ್ತವಾಗಿವೆ. ರೂಪದರ್ಶಿ ನಟಾಲಿಯೊ ಗಾರಿಬೊಟ್ಟೊ ಕಳೆದ ತಿಂಗಳು ಐದರಂದು ಬಿಕಿನಿ ಧರಿಸಿ ಶಾಲೆಯೊಂದರ ಲಾಕರ್ ಬಳಿ ನಿಂತಿರುವ ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ‘ನಾನು ನಿಮಗೆ ಒಂದೆರೆಡು ಎರಡು ವಿಷಯಗಳ ಕಲಿಸಬಲ್ಲೆ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾದ ಈ ಪೋಟೋ ೧.೫ ದಶಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದುಕೊಂಡಿದೆ. ಈ ಪೋಟೋವನ್ನು ಪೋಪ್ ಫ್ರಾನ್ಸಿಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ತಿಂಗಳ ೧೩ ರಂದು ’ಲೈಕ್ ಮಾಡಿದ್ದರು ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮರುದಿನ ಅನಿರೀಕ್ಷಿತವಾಗಿ ‘ಡಿಸ್ ಲೈಕ್ ಎಂದು ಕಾಣಿಸಿಕೊಂಡು ಮತ್ತಷ್ಟು ಗೊಂದಲ ಮೂಡಿಸಿದೆ.
ಈ ಮಧ್ಯೆ, ನಟಾಲಿಯಾ ಮ್ಯಾನೇಜ್ಮೆಂಟ್ ಕಂಪನಿ ಸಿಓವೈ.ಕೋ ಈ ವಿಷಯವನ್ನು ತನ್ನ ಪ್ರಚಾರಕ್ಕಾಗಿ ಬಳಸಲು ಉದ್ದೇಶಿಸಿದೆ. ಪೋಪ್ ಫ್ರಾನ್ಸಿಸ್ ಲೈಕ್ ಮಾಡಿರುವ ಸ್ಕ್ರೀನ್‌ಶಾಟ್ ಅನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಸಿಓವೈ. ಕೋಗೆ ‘ಪೋಪ್‌ನಿಂದ ಆಶೀರ್ವಾದ ಲಭಿಸಿದೆ. ನಮ್ಮ ಐಕಾನಿಕ್ ಕ್ವೀನ್ ನಟಾಲಿಯಾಗೆ ಧನ್ಯವಾದಗಳು ಎಂದು ಸ್ಕ್ರೀನ್‌ಶಾಟ್ ಹಂಚಿಕೊಂಡಿದೆ. ಇದರೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಂಗ್ ಆರಂಭವಾಗಿ, ಮುಂದುವರಿದ ನಂತರ ಎಚ್ಚೆತ್ತುಕೊಂಡ “ಹೋಲಿ ಸೀ” ಈ ಸುದ್ದಿಯನ್ನು ಖಂಡಿಸಿದೆ.
ಯಾವುದೋ ಸಿಬ್ಬಂದಿ ರೂಪದರ್ಶಿಯ ಫೋಟೋವನ್ನು ಲೈಕ್ ಮಾಡಿರಬಹುದು. ಈ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದೆ. ವ್ಯಾಟಿಕನ್ ವಕ್ತಾರ ಗಾರ್ಡಿಯನ್ ಮಾತನಾಡಿ “ಹೋಲಿ ಸೀ” ನಿಂದ “ಲೈಕ್’ ಬಂದಿದೆ ಎಂದು ಭಾವಿಸಿದ್ದೇವೆ. ವಿವರಣೆ ನೀಡುವಂತೆ ಇನ್ ಸ್ಟಾಗ್ರಾಮ್ ಅನ್ನು ಕೋರಿದ್ದೇವೆ ಎಂದು ತಿಳಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಫಾಲೋಯಿಂಗ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ಖಾತೆ ಯಲ್ಲಿ ಫ್ರಾನ್ಸಿಸ್ ೭.೪ ಮಿಲಿಯನ್ ಫಾಲೋವರ್ಸ್ ಹೊಂದಿದೆ.