
ಮುಂಬೈ,ಮೇ.೨೨-ಕನಸುಗಳನ್ನು ಕಟ್ಟಿಕೊಳ್ಳುವುದು ಸುಲಭ. ಆದರೆ ಅದನ್ನು ನನಸುಗೊಳಿಸುವುದು ಅಷ್ಟೊಂದು ಸುಲಭದ ಕೆಲಸವೇನಲ್ಲ.ಕಲ್ಲುಮುಳ್ಳಿನ ದಾರಿಯಲ್ಲಿ ನಡೆದಷ್ಟು ಕಠಿಣ. ಹೀಗೆ ಕನಸು ಕಂಡ ಮುಂಬೈನ ಧಾರಾವಿ ಕೊಳೆಗೇರಿಯಿಂದ ಬಂದ ಹದಿನಾಲ್ಕು ವರ್ಷದ ಬಾಲಕಿಯೊಬ್ಬಳು ತನ್ನ ಕನಸನ್ನು ಸಾಕಾರಗೊಳಿಸಿಕೊಂಡ ಕಥೆ ಇದು. ಮುಂಬೈನ ಧಾರಾವಿ ಕೊಳೆಗೇರಿಯಿಂದ ಬಂದ, ಮಲೀಶಾ ಖರ್ವಾ ಜನಪ್ರಿಯ ಸೌಂದರ್ಯ ವರ್ಧಕ
ಬ್ರಾಂಡ್ ಫಾರೆಸ್ಟ್ ಎಸೆನ್ಷಿಯಲ್ಸ್‌ನ ’ಯುವತಿ ಕಲೆಕ್ಷನ್’ ಜಾಹೀರಾತಿನಲ್ಲಿ ಮಲೀಶಾ ಖರ್ವಾ ರೂಪದರ್ಶಿಯಾಗಿ ಮಿಂಚಲಿದ್ದಾರೆ.ಪ್ರತಿಭೆಯನ್ನು ಯಾವತ್ತೂ ಹತ್ತಿಕ್ಕಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಅದು ಬೆಳಕಿಗೆ ಬಂದೇ ಬರುತ್ತದೆ ಎಂಬುದಕ್ಕೆ ಮಲೀಶಾ ಸಾಕ್ಷಿ.
೨೦೨೦ರಲ್ಲಿ ಮುಂಬೈನ ಧಾರಾವಿ ಕೊಳಗೇರಿ ಪ್ರದೇಶದಲ್ಲಿ ವಿಡಿಯೊ ಚಿತ್ರೀಕರಣ ಮಾಡುತ್ತಿರುವ ಸಂದರ್ಭದಲ್ಲಿ ಹಾಲಿವುಡ್ ನಟ ರಾಬರ್ಟ್ ಹಾಪ್‌ಮನ್ ಕಣ್ಣಿಗೆ ಮಲೀಶ್ ಖರ್ವಾ ಅವರು ಬಿದ್ದ ಕೂಡಲೇ ರಾಬರ್ಟ್ ಹಾಪ್‌ಮನ್ ಅವರು ಮಲೀಶ್ ಖಾರ್ವಾ ಹೆಸರಿನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಖಾತೆಯೊಂದು ತೆರೆದರು. ಅಲ್ಲದೇ ಮಲೀಶಾ ಭವಿಷ್ಯಕ್ಕೆ ಸಹಾಯ ಮಾಡುವಂತೆ ’ಗೋಫಂಡ್‌ಮಿ’ ಎಂಬ ಹೆಸರಿನಲ್ಲಿ ಫಂಡ್ ಸಂಗ್ರಹ ಮಾಡಿದರು. ಇಂದು ಮಲೀಶಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು ೨.೫ ಲಕ್ಷ ಅನುಯಾಯಿಗಳು ಹೊಂದಿದ್ದಾರೆ. ಅಲ್ಲದೇ ಜಾಹೀರಾತು ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ.
ತಮ್ಮ ಬ್ರಾಂಡ್‌ನಲ್ಲಿ ಮಲೀಶಾ ಖರ್ವಾ ಕಾಣಿಸಿಕೊಂಡಿರುವುದಕ್ಕೆ ಬ್ಯೂಟಿ ಬ್ರಾಂಡ್ ’ಫಾರೆಸ್ಟ್ ಎಸೆನ್ಷಿಯಲ್ಸ್’ ಸಂತೋಷ ವ್ಯಕ್ತಪಡಿಸಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಕಂಡ ಕನಸು ಅವಳ ಕಣ್ಣೆದುರೆ ನನಸಾಗಿದಕ್ಕೆ ಆಕೆ ಖುಷಿಯಾಗಿದ್ದು, ಆಕೆಯ ಕಣ್ಣುಗಳೇ ಅದಕ್ಕೆ ಸಾಕ್ಷಿಯಾಗಿವೆ. ಕನಸು ನನಸಾಗಿದೆ ಎಂಬ ವಾಕ್ಯಕ್ಕೆ ಮಲೀಶಾ ಖರ್ವಾ ಕಥೆ ಸ್ಪೂರ್ತಿಯಾಗಲಿದೆ ಎಂದು ಬರೆದುಕೊಂಡಿದೆ.
ಕೊಳಗೇರಿಯಿಂದ ಬಂದು ಪ್ರತಿಷ್ಠಿತ ಬ್ರಾಂಡ್‌ವೊಂದರಲ್ಲಿ ಕಾಣಿಸಿಕೊಂಡಿರುವುದಕ್ಕೆ ನೆಟ್ಟಿಗರು ಮಲೀಶಾಗೆ ಅಭಿನಂದನೆ ತಿಳಿಸಿದ್ದಾರೆ. ನಿಮ್ಮ ಸಂತೋಷವನ್ನು ಕಂಡು ಖುಷಿಯಾಗಿದೆ ಎಂದು ಹೇಳಿದ್ದಾರೆ.