(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು6: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಹಿಂದೂ ರುದ್ರ ಭೂಮಿಯ ಶುದ್ಧೀಕರಣ ಕಾರ್ಯ ಜರುಗಿತು.
ಈ ಸಂದರ್ಭದಲ್ಲಿ ಅಡ್ನೂರು ಗದಗದ ಅಭಿನವ ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಗ್ರಾಮಸ್ಥರು ಮತ್ತು ಸರ್ಕಾರದ ನೆರವಿನಿಂದ ಭೂಮಿಯನ್ನು ಖರೀದಿಸಿ ರುದ್ರ ಭೂಮಿಯನ್ನಾಗಿ ಮಾಡಿರುವುದು ಅತ್ಯಂತ ಶ್ಲಾಘನೀಯ.
ಪ್ರತಿಯೊಬ್ಬರು ಪರೋಪಕಾರ ದಾನ ಧರ್ಮಗಳ ಮುಖಾಂತರ ಪುಣ್ಯವನ್ನು ಸಂಪಾದಿಸಬೇಕು ಜೀವನದಲ್ಲಿ ಪ್ರತಿಯೊಬ್ಬರು ಸಮಾಜ ನಮಗೆ ಏನು ಮಾಡಿದೆ ಎಂದು ಎನ್ನುವ ಬದಲು ಸಮಾಜಕ್ಕಾಗಿ ನಾವೇನು ಮಾಡಿದ್ದೇವೆ ಆತ್ಮ ವಿಮರ್ಶೆ ಅವಶ್ಯ ಎಂದರು.
ಈ ಸಂದರ್ಭದಲ್ಲಿ ಶಂಕರಗೌಡ ನಿಂಗನಗೌಡರ ಆರ್ ಬಿ ಅಜ್ಜನಗೌರ, ಬಿಸಿ ಪಿಡ್ಡನಗೌಡರ, ಸಿಕೆ ಪಾಟೀಲ್ ಶಿವಯೋಗಿ ಹೊಸಕೇರಿ, ಬಸವರಾಜ್ ಚಿಣಗಿ, ಶಿವಣ್ಣ ಗಾಣ್ಗೇರ, ಎನ್‍ಎಂ ಮೇಟಿ, ಕೆ ಎಸ್ ಶಿಗ್ಲಿ, ಬಸಯ್ಯ ಗುರುಮಠ, ಕಲ್ಲಯ್ಯ ಗುರುಮಠ, ಹೇಮಣ್ಣ ಕನಕರೆಡ್ಡಿ, ಮುದುಕಣ್ಣ ಅಕ್ಕಿ, ಆರ್ ಟಿ ಭರಮಗೌಡ್ರ, ಎಸ್ ಕೆ ಮಠಪತಿ, ಮುತ್ತು ನವಲಗುಂದ, ಚೆನ್ನಯ್ಯ ಗುರುಮಠ, ಸೇರಿದಂತೆ ಅನೇಕರಿದ್ದರು.