ರುದ್ರಭೂಮಿ ಬಳಿ ಶವ ಬಿಟ್ಟು ಪರಾರಿ

ಬೆಂಗಳೂರು, ಏ.೨೮-ಚಾಮರಾಜಪೇಟೆಯ ಟಿಆರ್ ಮಿಲ್ ಬಳಿಯ ರುದ್ರಭೂಮಿಯ ಬಳಿ ಮೃತದೇಹವನ್ನು ಬಿಟ್ಟು ಸಂಬಂಧಿಕರು ಪರಾರಿಯಾಗಿದ್ದಾರೆ.
ರುದ್ರಭೂಮಿಯ ಬಳಿ ಕೊರೊನಾ ಸೋಂಕು ತಗುಲಿ ಮೃತಪಟ್ಟವರ ಶವಗಳ ಪೂಜೆ ನಡೆಸಲಾಗುತ್ತಿದ್ದು ಅವುಗಳ ಬಳಿ ಅನಾಥ ಶವ ಕಂಡುಬಂದಿದೆ.
ಮೃತದೇಹದ ಕಡೆ ಯಾರೂ ಗಮನ ಹರಿಸದೇ ತಮ್ಮ ಪಾಡಿಗೆ ತಾವೂ ಎನ್ನುವಂತೆ ಅಂತ್ಯಕ್ರಿಯೆ ನಡೆಸುತ್ತಿದ್ದರು.ಈ ಸಂಬಂಧ ಮಾಹಿತಿ ತಿಳಿದು ಪೊಲೀಸರು ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತದೇಹವು ಕೊರೊನಾ ತಗುಲಿಮೃತಪಟ್ಟಿದೆಯೋ ಇನ್ಯಾವುದೇ ಕಾರಣಕ್ಕೆ ಸಾವು ಸಂಭವಿಸಿದೆಯೋ ಎನ್ನುವುದು ಗೊತ್ತಾಗಿಲ್ಲ.

ನಗರದ ಚಾಮರಾಜಪೇಟೆಯ ರುದ್ರಭೂಮಿಗೆ ಪ್ರತಿನಿತ್ಯ ೪೦ – ೫೦ ಹೆಣಗಳು ಬರುತ್ತಿದ್ದು, ಯಾವುದೋ ಅನಾಥ ಹೆಣವನ್ನು ರುದ್ರಭೂಮಿಯಲ್ಲಿಯೇ ಬಿಟ್ಟು ಪರಾರಿಯಾಗಿರುವುದು.