ರುದ್ರಭೂಮಿಯಲ್ಲಿ ನೂತನ ಶಡ್ ನಿರ್ಮಾಣ

ಕಲಬುರಗಿ ಜು 31: ನಗರದ
ನ್ಯೂ ರಾಘವೇಂದ್ರ ಕಾಲೊನಿ ರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಬರುವ ಜನರಿಗೆ ಮಳೆ,ಬಿಸಿಲಿನ
ರಕ್ಷಣೆಗಾಗಿ ನೂತನ ಶಡ್ ನಿರ್ಮಿಸಲಾಗಿದೆ.
ಈ ಕುರಿತು ನಗರದ ಬ್ರಾಹ್ಮಣ ಸಮಾಜ ಹಾಗೂ ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದವರು ಕೆಕೆಅರ್ ಡಿಬಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮತ್ತು ಕುಡಾ ಮಾಜಿ ಅಧ್ಯಕ್ಷ
ದಯಾಘನ ಧಾರವಾಡಕರ ಅವರಿಗೆ ಮನವಿ ಮಾಡಿದ್ದರು .ಅದರಂತೆ ಅಲ್ಲಿ ಸುಸಜ್ಜಿತ ವ್ಯವಸ್ಥೆ ಜನರಿಗೆ ಕುಳಿತು ಕೊಳ್ಳಲು ಒಂದು ಶಡ್ ಹಾಗೂ ವಿಶಾಲ ಚಿತಾಗಾರದ ಮೇಲೆ ಶಡ್ ಮಾಡಿ ಜನರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ.
ಶನಿವಾರ ಬ್ರಾಹ್ಮಣ ಸಮಾಜದ ಹಿರಿಯರು ಅಲ್ಲಿಗೆ ಭೇಟಿದರು. ಇನ್ನೂ ಕೆಲವು ಸಣ್ಣಪುಟ್ಟ ಸೌಲಭ್ಯಕ್ಕೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ರಾಮಾಚಾರ್ಯ ಘಂಟಿ, ರವಿ ಲಾತೂರಕರ,ಆನಂದ ತೀರ್ಥ ಆಚಾರ್ಯ ಜೋಷಿ,ಪ್ರಹ್ಲಾದ ಪೂಜಾರಿ,ಪಾಂಡುರಂಗ ದೇಶಮುಖ,ಮಲ್ಹಾರ ರಾವ್ ಗಾರಂ ಪಳ್ಳಿ, ಗಿರೀಶ ಗಲಗಲಿ,ಗುಂಡಾಚಾರ್ಯ ಜೋಶಿ ನರಿಬೋಳ,ಶ್ರೀನಿವಾಸ್ ನೆಲೋಗಿ,ರಘು ಘಂಟಿ, ಲಕ್ಷ್ಮಣ ಆಚಾರ್ಯ ಗಂಗಾವತಿ,ಭೀಮರಾವ್ ಕುಲ್ಕರ್ಣಿ ಉಪಸ್ಥಿತರಿದ್ದರು.