ರುದ್ರಪ್ಪ ಲಮಾಣಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಲು ಶೇಖರಪ್ಪ ಒತ್ತಾಯ

ಸಿರವಾರ,ಮೇ.೧೯- ಕಾಂಗ್ರೆಸ್‌ನಿಂದ ಗೆದ್ದ ಬಂಜಾರ ಸಮಾಜದ ಅಭ್ಯರ್ಥಿ ರುದ್ರಪ್ಪ ಲಮಾಣಿ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ ಜಿಲ್ಲಾದ್ಯಕ್ಷ ಶೇಖರಪ್ಪ ರಾಠೋಡ್ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿ, ಬಂಜಾರ ಸಮಾಜದಿಂದ ಸ್ಪರ್ಧಿಸಿದವರಲ್ಲಿ ಒಟ್ಟು ಏಳು ಅಭ್ಯರ್ಥಿಗಳು ವಿಜೇತರಾಗಿದ್ದಾರೆ. ಅವರಿಗೆ ಅಭಿನಂದನೆಗಳು. ಬಿಜೆಪಿಯಲ್ಲಿ ನಾಲ್ಕು ಜೆಡಿಎಸ್‌ನಲ್ಲಿ ಎರಡು ಮತ್ತು ಕಾಂಗ್ರೆಸ್ನಲ್ಲಿ ಒಬ್ಬರು ವಿಜೇತರಾಗಿದ್ದಾರೆ. ಕಾಂಗ್ರೆಸ್ನಿಂದ ಬಂಜಾರ ಸಮಾಜದ ಏಕೈಕ ಶಾಸಕರಾಗಿ ರುದ್ರಪ್ಪ ಲಮಾಣಿ ಆಯ್ಕೆಯಾಗಿದ್ದು, ಅವರಿಗೆ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನೇ ನೀಡಬೇಕು ಎಂದು ಒತ್ತಾಯಿಸಿದರು.
ಒಳಮೀಸಲಾತಿಗೆ ಸಂಬಂಧಿಸಿದಂತೆ ಹಿಂದಿನ ಸರ್ಕಾರ ದುಡುಕಿನ ನಿರ್ಧಾರ ತೆಗೆದುಕೊಂಡಿದೆ. ಆಡಳಿತಕ್ಕೆ ಬರುವ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು. ಆತುರದ ನಿರ್ಧಾರ ಕೈಗೊಳ್ಳಬಾರದು. ಲಂಬಾಣಿ ಸಮಾಜದ ಅಭಿವೃದ್ಧಿಗೆ ಮನ್ನಣೆ ನೀಡಬೇಕು. ಹಾಗೆಯೇ ಬಂಜಾರ ಸಮಾಜ ದವರೂ ಸೇರಿದಂತೆ ಹಿಂದುಳಿದ ಸಮಾಜದ ವರಿಗೆ ಅನುಕೂಲವಾಗುವಂತೆ ಮೆಡಿಕಲ್ ಕಾಲೇಜು ಆರಂಭಿ ಸಬೇಕ, ಬಂಜಾರ ಸಮುದಾಯದ ಏಕೈಕ ಧಾರ್ಮಿಕ ಕ್ಷೇತ್ರಬಾದ ಸೂರ ಗೊಂಡನಕೊಪ್ಪಕ್ಕೆ ಕೊಪ್ಪಳದ ಬಾದೂರ ಬಂಡಾ, ಕಲ್ಬುರ್ಗಿಯ ಲಾಲ್ ದಾರಿಯನ್ನು ಅನುದಾನ ನೀಡಿ ಅಭಿವೃದ್ಧಿ ಪಡಿಸಬೇಕು.
ನಗರ ಪ್ರದೇಶಗಳಿಗೆ ಗೂಳೆ ಹೋಗುವುದು ತಡೆಯಲು ಶಾಶ್ವತ ಕ್ರಮಕೈಗೊಳಬೇಕು ಹಾಗೂ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವುದು ಬೇಡ ಎಂದರು. ಮತ್ತಷ್ಟು ಅನುದಾನ ನೀಡಿ ಅಭಿವೃದ್ಧಿ ಪಡಿಸಬೇಕು. ಹಾಗೂ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವುದು ಬೇಡ ಎಂದರು.