ರುತು ದೇಸಾಯಿ ಜೆಇಇ ಟಾಪರ್

ಕಲಬುರಗಿ ಮಾ 27: ನಗರದ ಅಪ್ಪಾ ಪಬ್ಲಿಕ್ ಶಾಲೆ (ಸಿಬಿಎಸ್‍ಇ) 12 ನೆಯ ತರಗತಿ ವಿದ್ಯಾರ್ಥಿನಿ ರುತು ಎಸ್ ದೇಸಾಯಿ sಶೇ 90.41 ಅಂಕ ಗಳಿಸಿ ಅಗ್ರಶ್ರೇಯಾಂಕದಲ್ಲಿ ಉತ್ತೀರ್ಣಳಾಗುವ ಮೂಲಕ ಜೆಇಇ ( ಮೇನ್ಸ್ – ಫೇಸ್ 2) ನಲ್ಲಿ ಶಾಲೆಗೆ ಟಾಪರ್ ಆಗಿದ್ದಾರೆ.
ವಿದ್ಯಾರ್ಥಿನಿ ಸಾಧನೆಗೆ ಶರಣಬಸವ ವಿವಿ ಕುಲಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಶುಭ ಹಾರೈಸಿ ಆಶೀರ್ವದಿಸಿದ್ದಾರೆ.ಶಾಲೆಯ ಮಾಗದರ್ಶಕ ಮತ್ತು ವ್ಯವಸ್ಥಾಪಕ ಎನ್.ಎಸ್ ದೇವರಕಲ್ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.