ರಿಷಿ ಕಪೂರ್ ರ ಪ್ರಥಮ ಪುಣ್ಯತಿಥಿ: ಭಾವುಕರಾದ ಪತ್ನಿ ನೀತೂ ಸಿಂಗ್

ಬಾಲಿವುಡ್ ದಿಗ್ಗಜ ನಟ ರಿಷಿ ಕಪೂರ್ ಅವರು ನಮ್ಮನ್ನಗಲಿ ಒಂದು ವರ್ಷವಾಗಿದೆ .ಬ್ಲಡ್ ಕ್ಯಾನ್ಸರ್ ನಿಂದ ಅವರು ಕಳೆದ ೨೦೨೦ ರ ಏಪ್ರಿಲ್ ೩೦ ರಂದು ನಿಧನರಾಗಿದ್ದರು.
ಅವರ ನಿಧನದ ಪ್ರಥಮ ಪುಣ್ಯತಿಥಿಯಂದು ಬಾಲಿವುಡ್ ನ ಅನೇಕ ಗಣ್ಯರು ತಮ್ಮ ತಮ್ಮ ರೀತಿಯಲ್ಲಿ ರಿಷಿ ಕಪೂರ್ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ. ರಿಷಿ ಕಪೂರ್ ಅವರ ಪತ್ನಿ ನೀತೂ ಸಿಂಗ್ ಕೂಡ ತಮ್ಮದೇ ರೀತಿಯಲ್ಲಿ ಒಂದು ಇಮೋಷನಲ್ ಬರಹವನ್ನು ಶೇರ್ ಮಾಡಿದ್ದಾರೆ.
ನೀತೂ ಸಿಂಗ್ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ತನ್ನ ಮತ್ತು ರಿಷಿ ಕಪೂರ್ ಅವರ ಕಪ್ಪು-ಬಿಳುಪಿನ ಒಂದು ಹಳೆಯ ಚಿತ್ರವನ್ನು ಶೇರ್ ಮಾಡಿದ್ದಾರೆ .ಇದರ ಜೊತೆಗೆ ಬರೆದಿದ್ದಾರೆ-


“ಕಳೆದ ವರ್ಷ ಇಡೀ ವಿಶ್ವವೇ ದುಃಖದಲ್ಲಿ ಮುಳುಗಿತ್ತು. ಆದರೆ ನಮಗೆ ಅದಕ್ಕಿಂತಲೂ ಹೆಚ್ಚು ಕೆಟ್ಟ ದಿನಗಳಾಗಿದ್ದವು. ಯಾಕೆಂದರೆ ನಾವು ರಿಷಿ ಕಪೂರ್ ಅವರನ್ನು ಕಳೆದುಕೊಂಡಿದ್ದೆವು. ಅವರ ವಿಷಯವಾಗಿ ನಾವು ಮಾತನಾಡದ ದಿನವೇ ಇರಲಿಲ್ಲ. ಅವರ ಜ್ಞಾನಪೂರ್ಣ ಸಲಹೆಗಳು ನಮಗೆ ಸದಾ ಸಿಗುತ್ತಿದ್ದವು. ಅದನ್ನೇ ನೆನಪಿಟ್ಟುಕೊಂಡು ವರ್ಷವನ್ನು ಕಳೆದೆವು. ಯಾಕೆಂದರೆ ಅವರು ಸದಾ ನಮ್ಮ ಹೃದಯದಲ್ಲಿ ಇರುತ್ತಾರೆ .ಅವರು ಇಲ್ಲದೆ ನಮ್ಮ ಬದುಕು ಮೊದಲಿನಂತೆ ಕಳೆಯಲು ಎಂದೂ ಸಾಧ್ಯವೇ ಇಲ್ಲ . ಹಾಗಿದ್ದರೂ ಬದುಕು ಮುನ್ನಡೆಯುತ್ತಾ ಇರುತ್ತದೆ”.


ರಿಷಿ ಕಪೂರ್ ಅವರ ಮಗಳು ರಿದ್ಧಿಮಾ ಕಪೂರ್ ಸಾಹನಿ ಅವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ತಂದೆಯವರ ಕುರಿತು ಕೆಲ ಮಾತುಗಳನ್ನು ಶೇರ್ ಮಾಡಿದ್ದಾರೆ. ತಂದೆಯವರ ಜೊತೆಗೆ ಬಾಲ್ಯದ ಕೆಲವು ಫೋಟೋಗಳನ್ನು ಕೂಡಾ ಶೇರ್ ಮಾಡಿದ್ದಾರೆ. “ನೀವು ಮತ್ತೊಮ್ಮೆ ಸಿಗುವತನಕ ನಿಮ್ಮ ವಿಷಯವಾಗಿ ನಾವು ಮಾತನಾಡುತ್ತಾ ಇರುತ್ತೇವೆ, ಯೋಚಿಸುತ್ತಿರುತ್ತೇವೆ .ನಿಮ್ಮನ್ನು ಎಂದೂ ಮರೆಯುವಂತಿಲ್ಲ .ನೀವು ಕೂಡ ಎಂದೂ ನಮ್ಮನ್ನು ಮರೆಯುವುದಿಲ್ಲ .ನೀವು ನಮಗೆ ಸದಾ ದಾರಿಯನ್ನು ತೋರಿಸುತ್ತಾ ಇರುವಿರಿ. ಎಲ್ಲಿಯವರೆಗೆ ಅಂದರೆ ಮತ್ತೊಮ್ಮೆ ನಾವು ಭೇಟಿಯಾಗುವ ತನಕ. ನಾವು ಸದಾ ನಿಮ್ಮನ್ನು ಪ್ರೀತಿಸುತ್ತೇವೆ.”ಎಂದು ಹೇಳಿದ್ದಾರೆ.
ರಿಷಿ ಕಪೂರ್ ಜೊತೆಗೆ ಪ್ರೇಮ್ ರೋಗ್, ಜಮಾನೆ ಕೊ ದಿಖಾನ ಹೈ, ಪ್ಯಾರ್ ಮೆ ಕಾಬಿಲ್…. ಇಂತಹ ಫಿಲ್ಮ್ ಗಳಲ್ಲಿ ಅಭಿನಯಿಸಿರುವ ನಟಿ ಪದ್ಮಿನಿ ಕೊಲ್ಲಾಪುರೆ ಅವರು ರಿಷಿಕಪೂರ್ ರ ಪ್ರಥಮ ಪುಣ್ಯತಿಥಿಯಂದು ತಮ್ಮ ಪ್ರತಿಕ್ರಿಯೆಯಲ್ಲಿ- “ರಿಷಿ ಕಪೂರ್ ಅವರ ಜೊತೆ ಅಭಿನಯಿಸುವ ಮೊದಲೇ ನಾನು ಅವರ ದೊಡ್ಡ ಫ್ಯಾನ್ ಆಗಿದ್ದೆ. ನಾನು ಶಾಲೆಗೆ ಚಕ್ಕರ್ ಹೊಡೆದು ಅವರ ಫಿಲ್ಮ್ ಗಳನ್ನು ನೋಡುತ್ತಿದ್ದೆ. ಅವರ ಜೊತೆ ಅಭಿನಯಿಸುವುದು ಅಂದರೆ ನನಗೆ ಕನಸು ಎಂಬಂತಿತ್ತು. ನಾನು ಚಿಕ್ಕ ಪ್ರಾಯದಲ್ಲೇ ಅಭಿನಯ ಕ್ಷೇತ್ರಕ್ಕೆ ಬಂದಿದ್ದೆ. ನನ್ನ ಶಿಫಾರಸ್ಸನ್ನು ರಿಷಿ ಅವರು ನಾಸಿರ್ ಹುಸೈನ್ ಬಳಿ ಮಾಡಿದ್ದರು. ಇದಕ್ಕಾಗಿ ನಾನು ಇಂದಿಗೂ ರಿಷಿ ಅವರಿಗೆ ಋಣಿಯಾಗಿದ್ದೇನೆ. ಅವರು ಕೇವಲ ಉತ್ತಮ ನಟ ಮಾತ್ರ ಅಲ್ಲ ಉತ್ತಮ ಮನುಷ್ಯರೂ ಆಗಿದ್ದರು. ಫಿಲ್ಮ್ ಇಂಡಸ್ಟ್ರಿ ಒಬ್ಬ ಉತ್ತಮ ವ್ಯಕ್ತಿಯನ್ನು ಕಳಕೊಂಡಿದೆ” ಎಂದಿದ್ದಾರೆ.

’ನಾಯಕ್’ ಮತ್ತು ’ಖಾಕೀ’ ಇಂತಹ ಫಿಲ್ಮ್ ಗಳ ಕ್ಯಾಮರಾಮೆನ್ ಕೆ.ವಿ. ಆನಂದ್ ನಿಧನ

ನಟ, ಡೈರೆಕ್ಟರ್ ಮತ್ತು ನ್ಯಾಷನಲ್ ಅವಾರ್ಡ್ ವಿನ್ನರ್ ಸಿನಿಮಾಟೋಗ್ರಾಫರ್ ಕೆ.ವಿ. ಆನಂದ್ ನಿಧನರಾಗಿದ್ದಾರೆ .೫೪ ವರ್ಷದ ಅವರು ಚೆನ್ನೈಯಲ್ಲಿ ನಿಧನರಾದರು. ಅವರಿಗೆ ಹೃದಯಾಘಾತವಾಗಿತ್ತು .


ಅವರು ತಮಿಳು ತೆಲುಗು ಮಲಯಾಳಂ ಫಿಲ್ಮ್ ಗಳ ಜೊತೆಗೆ ಅನೇಕ ಹಿಂದಿ ಫಿಲ್ಮ್ ಗಳ ಸಿನೆಮಾಟೋಗ್ರಾಫಿ ಕೂಡಾ ಮಾಡಿದ್ದರು. ಕೆ ವಿ ಆನಂದ್ ಅವರು ಹಿಂದಿಯಲ್ಲಿ ಅಕ್ಷಯ್ ಖನ್ನಾ ಅಭಿನಯದ ’ ಡೋಲೀ ಸಜಾ ಕೆ ರಖ್ ನಾ’, ಶಾರುಖ್ ಖಾನ್ ಅಭಿನಯದ ಜೋಶ್, ಅನಿಲ್ ಕಪೂರ್ ಅಭಿನಯದ

ನಾಯಕ್: ದ ರಿಯಲ್ ಹೀರೋ, ಅಜಯ್ ದೇವಗನ್ ಅಭಿನಯದ ದ ಲೆಜೆಂಡ್ ಆಫ್ ಭಗತ್ ಸಿಂಗ್, ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ಅಜಯ್ ದೇವಗನ್ ಅಭಿನಯದ ’ಖಾಕಿ’ ಇಂತಹ ಫಿಲ್ಮ್ ಗಳ ಸಿನೆಮಾಟೋಗ್ರಾಫಿ ಮಾಡಿದ್ದರು.

ಕೊರೊನಾ ವಿರುದ್ಧದ ಭಾರತದ ಹೋರಾಟದಲ್ಲಿ ವಿಶ್ವಾದ್ಯಂತದ ಜನರ ಸಹಾಯವನ್ನು ಕೇಳಿದ ಪ್ರಿಯಾಂಕಾ ಚೋಪ್ರಾ: ಒಂದು ದಿನದಲ್ಲೇ ೨.೫೦ ಕೋಟಿ ರೂಪಾಯಿ ಸಂಗ್ರಹ

ಭಾರತ ದೇಶ ಇಂದು ಕೊರೊನಾದ ಎರಡನೇ ಅಲೆಯಲ್ಲಿ ತತ್ತರಿಸುತ್ತಿದೆ.ಮಿತಿಮೀರಿದ ರೋಗಿಗಳ ಸಂಖ್ಯೆಯನ್ನು ಮುಂದಿಟ್ಟು ದೇಶದ ಆರೋಗ್ಯ ಪ್ರಣಾಳಿಕೆಯ ಚರ್ಚೆ ಜೋರಾಗುತ್ತಿದೆ. ಇದೀಗ ನಟಿ ಪ್ರಿಯಾಂಕಾ ಚೋಪ್ರಾ ಅವರು ಒಂದು ವೀಡಿಯೋವನ್ನು ಶೇರ್ ಮಾಡುತ್ತಾ “ನಮಗೆ ಜನರ ಆರೋಗ್ಯದ ವಿಷಯವಾಗಿ ಯಾಕೆ ಚಿಂತಿಸಬೇಕು? ನಾನು ಲಂಡನ್ ನಲ್ಲಿ ಕೂತಿದ್ದೇನೆ. ಭಾರತದಲ್ಲಿರುವ ನನ್ನ ಕುಟುಂಬ ಮತ್ತು ಫ್ರೆಂಡ್ಸ್ ಅವರ ಮಾತುಗಳನ್ನು ಕೇಳುತ್ತಿದ್ದೇನೆ. ಅಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಇರಿಸುವ ಸಾಮರ್ಥ್ಯ ಸಮಾಪ್ತಿ ಆಗಿದೆ. ಐಸಿಯು ಖಾಲಿ ಇಲ್ಲ. ಅಂಬ್ಯುಲೆನ್ಸ್ ಗಳು ಮಿತಿಮೀರಿ ಓಡಾಡುತ್ತಿವೆ.ಆಕ್ಸಿಜನ್ ಪೂರೈಕೆ ಕಡಿಮೆಯಾಗಿದೆ. ಸ್ಮಶಾನದಲ್ಲಿ ಅಂತಿಮ ಸಂಸ್ಕಾರಕ್ಕಾಗಿ ಶವಗಳ ಜೊತೆ ಜನ ಕ್ಯೂ ನಿಂತಿದ್ದಾರೆ.

ಯಾಕೆಂದರೆ ಸತ್ತವರ ಸಂಖ್ಯೆ ಹೆಚ್ಚುತ್ತಿದೆ. ಭಾರತ ನನ್ನ ಮನೆ, ಈ ಸಮಯ ಅದು ಗಾಯಗೊಂಡಿದೆ. ಎಲ್ಲಿಯವರೆಗೆ ಎಲ್ಲರೂ ಸುರಕ್ಷಿತವಾಗಿಲ್ಲವೋ ಅಲ್ಲಿಯ ತನಕ ನಾವೂ ಸುರಕ್ಷಿತವಾಗಿಲ್ಲ. ಹಾಗಾಗಿ ನಿಮ್ಮ ನಿಮ್ಮ ಎನರ್ಜಿಯನ್ನು ಈ ಮಹಾಮಾರಿಯನ್ನು ತಡೆಯುವಲ್ಲಿ ಬಳಸಿಕೊಳ್ಳಬೇಕು. ಪ್ಲೀಸ್ ಡೊನೇಟ್ ಮಾಡಿರಿ. ನಿಮ್ಮಲ್ಲಿರುವ ದಾನಮಾಡುವ ಶಕ್ತಿಯನ್ನು ಸದುಪಯೋಗಪಡಿಸಿರಿ” ಎಂದು ವಿನಂತಿಸಿದ್ದರು.
ವೀಡಿಯೋದ ಕ್ಯಾಪ್ಟನ್ ನಲ್ಲಿ ಪ್ರಿಯಾಂಕಾ ಚೋಪ್ರಾ ಇನ್ನೂ ಕೆಲವು ಸಂಗತಿ ತಿಳಿಸಿದ್ದರು.
’ಗೀವ್ ಇಂಡಿಯಾ ಫೌಂಡೇಶನ್’ ಜೊತೆಗೂಡಿ ಪ್ರಿಯಾಂಕಾ ದಂಪತಿ ಅವರು ನಿಧಿ ಸಂಗ್ರಹದ ಕಾರ್ಯವನ್ನು ಆರಂಭಿಸಿದ್ದಾರೆ .ಅದರಲ್ಲಿ ಬರೆದಿದ್ದಾರೆ-
” ನನ್ನ ದೇಶ ಭಾರತ ಕೋವಿಡ್ ನಿಂದ ಪ್ರಭಾವಿತಗೊಂಡಿದೆ. ಎಲ್ಲರಿಗೂ ಸಹಾಯ ಮಾಡೋ ಅವಶ್ಯಕತೆ ಇಂದು ಹೆಚ್ಚಿಗಿದೆ. ಜನರು ದಾಖಲೆ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ನಾವು ಗೀವ್ ಇಂಡಿಯಾ ಫೌಂಡೇಶನ್ ಜೊತೆಗೂಡಿ ಒಂದು ನಿಧಿ ಸಂಗ್ರಹದ ಕೆಲಸ ಆರಂಭಿಸಿದ್ದೇನೆ. ಗೀವ್ ಇಂಡಿಯಾ ಬಹಳ ದೊಡ್ಡ ಆರ್ಗನೈಸೇಶನ್. ಅದು ಭಾರತಕ್ಕೆ ಕೋವಿಡ್ ರಿಲೀಫ್ ಪ್ರದಾನ ಮಾಡುತ್ತದೆ .ನೀವು ಏನನ್ನೂ ಅದಕ್ಕೆ ದಾನ ಮಾಡಬಹುದು. ೬೩ ಮಿಲಿಯನ್ ಜನ ಸೋಶಲ್ ಮೀಡಿಯಾದಲ್ಲಿ ನನ್ನನ್ನು ಫಾಲೋ ಮಾಡುತ್ತಾರೆ. ನೀವೆಲ್ಲ ಒಂದು ಲಕ್ಷ ಜನರಾದರೂ ೧೦ ಡಾಲರ್ ನಂತೆ ದಾನ ಮಾಡಿದರೂ ಇದರ ಟೋಟಲ್ ಒಂದು ಮಿಲಿಯನ್ ಡಾಲರ್ ಆಗುವುದು. ಮತ್ತು ಇದು ಒಂದು ದೊಡ್ಡ ಮೊತ್ತವಾಗಲಿದೆ. ನಿಮ್ಮ ಈ ದಾನವು ನೇರವಾಗಿ ಹೆಲ್ತ್ ಕೇರ್, ಫಿಸಿಕಲ್ ಇನ್ಫ್ರಾಸ್ಟ್ರಕ್ಚರ್, ಮೆಡಿಕಲ್ ಇಕ್ವಿಪ್ಮೆಂಟ್ , ವ್ಯಾಕ್ಸಿನ್ ಸಪೋರ್ಟ್ ….ಇಂಥವುಗಳಿಗಾಗಿ ನೀಡಲಾಗುವುದು. ಪ್ಲೀಸ್ ಪ್ಲೀಸ್ ಡೊನೇಟ್ ಮಾಡಿ” ಎಂದಿದ್ದಾರೆ.
ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಸ್ ಅವರ ಈ ನಿಧಿ ಸಂಗ್ರಹ ಕಾರ್ಯಕ್ಕೆ ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ವಿಶ್ವಾದ್ಯಂತ ಜನರು ಭಾರತದ ಸಹಾಯಕ್ಕೆ ಬಂದಿದ್ದಾರೆ. ೨೪ಗಂಟೆಗಳಲ್ಲಿ ಈ ನಿಧಿ ಸಂಗ್ರಹದಲ್ಲಿ ಎರಡೂವರೆ ಕೋಟಿ ರೂಪಾಯಿ ಜಮೆ ಆಗಿದೆ .ದಾನ ಮಾಡಿರುವ ಜನರಿಗೆ ಈ ದಂಪತಿ ವಂದನೆಗಳನ್ನು ತಿಳಿಸಿದ್ದಾರೆ.