ರಿಷಿ ಕಪೂರ್ ನಿಧನದ ನಂತರ ನೀತೂ ಸಿಂಗ್ ರ ಮೊದಲ ಫಿಲ್ಮ್ ’ಜುಗ್ ಜುಗ್ ಜಿಯೋ’ ಸೆಟ್ ಗೆ ಬಂದು ಭಾವುಕರಾದ ಅನುಪಮ್ ಖೇರ್

ಹಿರಿಯ ನಟಿ ನೀತೂ ಸಿಂಗ್ ತನ್ನ ಬರ ಲಿರುವ ಫಿಲ್ಮ್ ’ಜುಗ್ ಜುಗ್ ಜಿಯೋ’ ಶೂಟಿಂಗ್ ಗಾಗಿ ಚಂಡೀಗಡ್ ಗೆ ಬಂದಿ ದ್ದಾರೆ. ರಿಷಿ ಕಪೂರ್ ನಿಧನದ ನಂತರ ಇದು ನೀತೂಸಿಂಗ್ ಅವರ ಮೊದಲ ಫಿಲ್ಮ್ ಆಗಿದೆ.
ನೀತೂಸಿಂಗ್ ಅವರ ಫಿಲ್ಮ್ ’ಜುಗ್ ಜುಗ್ ಜಿಯೋ’ ಇದರಲ್ಲಿ ಅನಿಲ್ ಕಪೂರ್, ವರುಣ್ ಧವನ್, ಮತ್ತು ಕಿಯಾರಾ ಅಡ್ವಾಣಿ ಮೊದಲಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಫಿಲ್ಮ್ ನಿರ್ದೇಶನವನ್ನು ’ಗುಡ್ ನ್ಯೂಸ್ ಪ್ರಖ್ಯಾತಿಯ ರಾಜ್ ಮೆಹತಾ ಮಾಡುತ್ತಿದ್ದಾರೆ.
ಈ ಶೂಟಿಂಗ್ ಸಮಯ ಅಲ್ಲಿಗೆ ಹಿರಿಯ ನಟ ಅನುಪಮ್ ಖೇರ್ ಬಂದರು.
ಅನುಪಮ್ ಖೇರ್ ರಿಷಿ ಕಪೂರ್ ರ ನಿಧನದ ನಂತರ ನೀತೂಸಿಂಗ್ ಅವರನ್ನು ಸೆಟ್ ನಲ್ಲಿ ಮೊದಲ ಬಾರಿಗೆ ಭೇಟಿಯಾಗಿ ಇಮೋಷನಲ್ ಆದರು .ನಂತರ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಹಳೆಯ ಫೋಟೋಗಳನ್ನು ಹಂಚಿಕೊಂಡರು .ಈ ಸಂದರ್ಭದಲ್ಲಿ
ಅನುಪಮ್ ಖೇರ್ ಸೋಶಿಯಲ್ ಮೀಡಿಯಾದಲ್ಲಿ ಬರೆಯುತ್ತಾ -“ಪ್ರಿಯ ನೀತೂ , ಚಂಡೀಗಢ್ ನಲ್ಲಿ ರಿಷಿಕಪೂರ್ ಜೊತೆಯಲ್ಲಿ ಇಲ್ಲದೆ ನಿಮ್ಮನ್ನು ಮಾತ ನಾಡಿಸಿದಾಗ ತುಂಬಾ ಭಾವುಕನಾದೆ. ನನಗೆ ಆ ಸಂದರ್ಭದಲ್ಲಿ ನಮ್ಮ ನ್ಯೂಯಾರ್ಕ್ ನ ನೆನಪುಗಳು ಎದುರು ಬಂತು. ಆ ಕ್ಷಣಕ್ಕೆ ಕಣ್ಣೀರು ಬಂದು ನಮ್ಮ ನೆನಪುಗಳನ್ನು ಇನ್ನಷ್ಟು ತಾಜಾ ಗೊಳಿಸಿತು. ರಿಷಿ ಕಪೂರ್ ಅವರ ವ್ಯಕ್ತಿತ್ವ ಅವರ ಬದುಕಿಗಿಂತ ದೊಡ್ಡದು .ನಿಮ್ಮ ಫಿಲ್ಮ್ ಕೆಲಸಗಳನ್ನು ನೋಡಿ ನಾನು ಖುಷಿಪಟ್ಟೆ. ನಿಮ್ಮ ಕೆಲಸಗಳಿಂದಾಗಿಯೇ ವಿಶ್ವದ ಎಲ್ಲಕ್ಕಿಂತ ಖುಷಿಯ ವ್ಯಕ್ತಿಯಾಗಿ ರಿಷಿ ಕಪೂರ್ ಬದುಕಿದರು. ನಾನು ನಿಮ್ಮೆಲ್ಲರ ಸ್ನೇಹಿತ .ಸದಾ ನಿಮ್ಮ ಜೊತೆಗಿರುವೆ. ಕೆಲವು ಸಂಬಂಧ ಟೇಪ್ ರೆಕಾರ್ಡರ್ ನ ಪಾಜ್ ಬಟನ್ ರೀತಿ ಯಲ್ಲಿರುತ್ತದೆ. ನಾವು ಎಲ್ಲಿಂದ ಬಿಟ್ಟಿರುತ್ತೇವೆಯೊ ಅಲ್ಲಿಂದ ಮತ್ತೆ ಆರಂಭವಾಗುತ್ತದೆ.”
ಅನುಪಮ್ ಖೇರ್ ಪೋಸ್ಟ್ ಮಾಡಿದ ಆ ಫೋಟೋ ಕಳೆದ ವರ್ಷ ನ್ಯೂಯಾರ್ಕ್ ನಲ್ಲಿ ಕ್ಲಿಕ್ ಮಾಡಿದ್ದಾಗಿದೆ.