ರಿಲ್ಯಾಕ್ಸ್ ಮೂಡ್‍ನಲ್ಲಿ ಶಿವಲೀಲಾ ಕುಲಕರ್ಣಿ ಹಾಗೂ ಮಕ್ಕಳು

ಧಾರವಾಡ,ಮೇ12: ಕಳೆದ ಎರಡು ತಿಂಗಳಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಮ್ಮ ಪತಿಯ ಗೆಲುವಿಗಾಗಿ ಬಿರುಸಿನ ಪ್ರಚಾರ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಚುನಾವಣೆಯ ಎಲ್ಲಾ ಪ್ರಚಾರಗಳನ್ನು ಮುಗಿಸಿ ಇದೀಗ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ.

ಮೊನ್ನೆಯಷ್ಟೇ ಮತದಾನ ಪೂರ್ಣಗೊಂಡಿದ್ದು, ಶಿವಲೀಲಾ ಕುಲಕರ್ಣಿ ಅವರು ತಮ್ಮ ಮಕ್ಕಳಾದ ವೈಶಾಲಿ, ದೀಪಾಲಿ ಹಾಗೂ ಹೇಮಂತ್ ಅವರೊಂದಿಗೆ ಕಾಲ ಕಳೆದಿದ್ದಾರೆ. ಮನೆಯ ಮುಂಭಾಗದ ಗಾರ್ಡ್‍ನಲ್ಲಿ ತಮ್ಮ ಸಾಕು ನಾಯಿಗಳ ಜೊತೆ ಆಟವಾಡಿರುವ ಅವರು ಅತ್ಯಂತ ಖುಷಿಯಿಂದಲೇ ಕಾಲ ಕಳೆದಿದ್ದಾರೆ.

ಈ ಬಾರಿಯ ಮತದಾನ ಪ್ರಕ್ರಿಯೆ ನೋಡಿದರೆ ಕ್ಷೇತ್ರದ ಎಲ್ಲ ಜನ ಹಬ್ಬದಂತೆ ಚುನಾವಣೆ ಮಾಡಿದ್ದಾರೆ. ಈ ಬಾರಿ ವಿನಯ್ ಕುಲಕರ್ಣಿ ಅವರು 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಒಟ್ಟಾರೆ ಚುನಾವಣೆ ಮುಗಿಸಿ ರಿಲ್ಯಾಕ್ಸ್ ಮೂಡ್‍ನಲ್ಲಿರುವ ವಿನಯ್ ಕುಲಕರ್ಣಿಯವರ ಕುಟುಂಬ ಗೆಲುವಿನ ವಿಶ್ವಾಸದಲ್ಲಿದೆ. ಫಲಿತಾಂಶಕ್ಕಾಗಿ ಕಾಯುತ್ತಿರುವ ವಿನಯ್ ಅವರ ಕುಟುಂಬ ಇಂದು ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆದುಕೊಂಡಿದ್ದಾರೆ.