ರಿಲ್ಯಾಕ್ಸ್ ಮೂಡ್‍ನಲ್ಲಿ ಅಭ್ಯರ್ಥಿಗಳು

ಕಲಬುರಗಿ,ಮೇ.12-ಮತದಾನದ ಮಾರನೇ ದಿನವಾದ ಗುರುವಾರ ಜಿಲ್ಲೆಯ 9 ಕ್ಷೇತ್ರಗಳ ಬಹುತೇಕ ಜನ ಅಭ್ಯರ್ಥಿಗಳು ರಿಲ್ಯಾಕ್ಸ್ ಮೂಡ್‍ನಲ್ಲಿರುವ ಜೊತೆಗೆ ತಮ್ಮ ಆಪ್ತರೊಂದಿಗೆ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ.
ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮುನ್ನವೇ ರಣಕಹಳೆ ಮೊಳಗಿಸಿದ್ದ ಜಿಲ್ಲೆಯ 9 ಕ್ಷೇತ್ರಗಳ ಅಭ್ಯರ್ಥಿಗಳು ಬಿಡುವಿಲ್ಲದೆ ಬಿರು ಬಿಸಿಲಲ್ಲೂ ಭರ್ಜರಿ ಪ್ರಚಾರ ನಡೆಸಿದ್ದರು. ಮತದಾನದ ಮಾರನೇ ದಿನ ಸ್ವಲ್ಪ ನಿರಾಳರಾದಂತೆ ಕಂಡು ಬಂದರು.
ರಿಲ್ಯಾಕ್ಸ್ ಮೂಡ್‍ನಲ್ಲಿ ಅಲ್ಲಮಪ್ರಭು
ಕಲಬುರಗಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಲ್ಲಂಪರ್ಭು ಪಾಟೀಲ್ ಅವರು ಕಳೆದ 1 ತಿಂಗಳ ಸತತ ಪಾದಯಾತ್ರೆ, ಪ್ರಚಾರ, ಭಾಷಣದಿಂದಾಗಿ ಹಳ್ಳಿ, ನಗರ ಸುತ್ತಿದವರು ಮತದಾನದ ಮಾರನೆ ದಿನವಾದ ಗುರುವಾರ ಸಂಪೂಣರ್À ರಿಲ್ಯಾಕ್ಸ್ ಆಗಿದ್ದರು.
ಬೆಳಗ್ಗೆ ಎದ್ದವರೇ ವಾಯು ವಿಹಾರ ಮಾಡಿದ ನಂತರ ಪತ್ನಿ ಪ್ರೇಮಲತಾ ಜೊತೆಗೂಡಿ, ಮಕ್ಕಳು, ಸೊಸೆಯಂದಿರೊಂದಿಗೆ ಉಪಹಾರ ಸವಿದದರು. ನಂತರ ಮನೆಗೇ ನೂರಾರು ಕಾಯಕರ್ತರು ಬಂದಿದ್ದರಿಂದ ಇಡೀ ದಿನ ಅವರೊಂದಿಗೆ ರಾಜಕೀಯ ಲೆಕ್ಕಾಚಾರ ಮಾಡುತ್ತ ಹರಟೆ ಹೊಡೆದರು.
ಮಧ್ಯದಲ್ಲಿ ಅಲ್ಲಲ್ಲಿ ಮದುವೆ ಸಮಾರಂಭಗಳಿಗೆ ಹೋಗಿ ಬಂದ ಅಲ್ಲಂಪರ್ಭು ಪಾಟೀಲ್ ಸಂಜೆ ಹೊತ್ತಲ್ಲೂ ಮನೆಗೆ ಬರುತ್ತಿದ್ದ ಕಾರ್ಯಕರ್ತರೊಂದಿಗೆ ಹರಟೆ ಹೊಡೆಯುತ್ತ ಮತದಾನದ ಲೆಕ್ಕ, ಯಾವ ಪ್ರದೇಶ ಲೀಡ್, ಎಲ್ಲಿ ಏನಾಯ್ತು ಎಂದೆಲ್ಲಾ ಕೇಳಿ ತಿಳಿದುಕೊಂಡರು. ಜೊತೆಗೇ ಮತ ಎಣಿಕೆಯ ದಿನದ ತಯ್ಯಾರಿಗಳ ಬಗ್ಗೆಯೂ ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿದರು.

ಶಿರಡಿ, ಶಿಗಣಾಪುರಕೆ ತೆರಳಿದ ಅಜಯ್ ಸಿಂಗ್
ಜೇವರ್ಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಡಾ.ಅಜಯ್ ಸಿಂಗ್ ಅವರು ಮತದಾನದ ಮಾರನೆ ದಿನವಾದ ಗುರುವಾರ ತಮ್ಮ ಕುಟುಂಬ ಸದಸ್ಯರೊಂದಿಗೆ ಶಿರಡಿ ಹಾಗೂ ಶಿಗಣಾಪುರಕ್ಕೆ ತೆರಳಿ ಶಿರಡಿ ಸಾಯಿಬಾಬಾ ಹಾಗೂ ಶನಿ ಶಿಗಣಾಪೂರದಲ್ಲಿರುವ ಶನಿ ದೇವರ ದರುಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ತಾಯಿ ಪ್ರಭಾವತಿ ಧರಂಸಿಂಗ್, ಪತ್ನಿ ಶ್ವೇತಾಸಿಂಗ್ ಜೊತೆ ತೆರಳಿರುವ ಡಾ.ಅಜಯ್ ಸಿಂಗ್ ಅವರು ಗುರುವಾರ ಶನಿ ಶಿಗಣಾಪುರದಲ್ಲಿ ಶನಿದೇವರಿಗೆ ವಿಸೇಷ ಪೂಜೆ, ಅಭಿಷೇಕ ನೆರವೇರಿಸಿದ್ದಾರೆ. ಜೊತೆಗೇ ಶಿರಡಿಯಲ್ಲಿ ಸಾಯಿಬಾಬಾರ ಸನ್ನಿಧಾನದಲ್ಲಿ ಪೂಜಾಪುನಸ್ಕಾರಾದಿಗಳನ್ನು ನೆರವೇರಿಸಿದರು.
ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿರುವ ಡಾ.ಅಜಯ್ ಸಿಂಗ್ ಅವರು ಜೇವರ್ಗಿ ಮತಕ್ಷೇತ್ರದಲ್ಲಿನ ತಮ್ಮ ಗೆಲುವಿನ ಜೊತೆಗೇ ಕರ್ನಾಟಕದ ಅಸೆಂಬ್ಲಿ ಚುನಾವಣೆಯಲ್ಲಿÀ ಕಾಂಗ್ರೆಸ್ ಬಹುಮತ ಹೊಂದಿ ಪೂರ್ಣ ಬಹುಮತದ ಸರ್ಕಾರ ರಚಿಸುವಂತಾಗಬೇಕು ಎಂದು ಸಾಯಿಬಾಬಾ ಹಾಗೂ ಶನಿ ದೇವರಲ್ಲಿ ಪ್ರಾರ್ಥಿಸಿದರು.
ಇನ್ನುಳಿದಂತೆ ಕೆಲ ಅಭ್ಯರ್ಥಿಗಳು ಮನೆಗಳಲ್ಲಿ ಕಾಲ ಕಳೆದರೆ, ಕೆಲವರು ಆರಾಧ್ಯ ದೈವಗಳ ದರ್ಶನಕ್ಕೆ ಊರುಗಳಿಗ ಕುಟುಂಬ ಸಮೇತ ತೆರಳಿದ್ದಾರೆ.