ರಿಲ್ಯಾಕ್ಸ್ ಮೂಡಿಗೆ ಜಾರಿದ ಅಭ್ಯರ್ಥಿಗಳು-ಮತದಾನದ ಬಗ್ಗೆ ಮಾಹಿತಿ ಸಂಗ್ರಹಣೆ

    ಸಿರವಾರ. ಮೇ೧೦- ಒಂದು ಕಡೆ ಟಿಕೇಟ್ ಸಿಗುತ್ತದೋ ಇಲ್ಲವೋ ಎನ್ನುವ, ಟೀಷನ್, ಸಿಕ್ಕರೂ ಮುಖಂಡರೂ ಕಾರ್ಯಕರ್ತರು ಹೇಗೆ ಕಾರ್ಯನಿರ್ವಹಿಸುತ್ತಾರೋ, ಮತದಾನ ಹೇಗಾಗುತ್ತದೆ ಎನ್ನುವ ಗೊಂದಲಗಳಿಗೆ ಬುಧುವಾರ ಮತದಾನ ಮಾಡುವ ಮೂಲಕ ತೆರೆ ಬಿದ್ದರೆ,  ಅಭ್ಯರ್ಥಿಗಳು ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ನಿನ್ನೆ ರಾತ್ರಿಯಿಂದ ರಿಲ್ಯಾಕ್ಷ ಮೂಡಿಗೆ ಜಾರಿದ್ದಾರೆ‌.       ಬಿಜೆಪಿ ಅಭ್ಯರ್ಥಿಯಾದ ಬಿ.ವಿ‌.ನಾಯಕರು ಮಾನ್ವಿ ಸ್ವಾಗೃಹದಲ್ಲಿ ಇಂದು ಬೆಳಗ್ಗೆ ನಿತ್ಯ ಕಾರ್ಯಗಳನ್ನು ಮುಗಿಸಿ ಮನೆಗೆ ಬರುವ ಮುಖಂಡರು ಕಾರ್ಯಕರ್ತರೊಂದಿಗೆ ಮಾತನಾಡುತಾ ಕ್ಷೇತ್ರದಲ್ಲಿ ಆಗಿರುವ ಮತದಾನವಾಗಿರುವ ಬಗ್ಗೆ ತಿಳಿದುಕೊಂಡು  ಸಂಜೆಯವರೆಗೂ ಮಾತನಾಡುತಾ ಕುಳಿತುಕೊಂಡಿದರು.       ಕಾಂಗ್ರೇಸ್ ಅಭ್ಯರ್ಥಿಯಾದ  ಜಿ.ಹಂಪಯ್ಯನಾಯಕ ಅವರು ಬಲ್ಲಟಗಿಯ ಆಂಜನೇಯ ಕ್ಯಾಂಪಿನ ನಿವಾಸದಲ್ಲಿ ಮುಖಂಡರು, ಕಾರ್ಯಕರ್ತರೊಂದಿಗೆ ಮಾತಿನಲ್ಲಿ ತೊಡಗಿದರೂ, ಆಗಾಗ ಬರುವ ಕರೆಗಳನ್ನು ಸ್ವಿಕರಿಸಿ ಮತದಾನವಾಗಿರುವ ಬಗ್ಗೆ ಕಾರ್ಯಕರ್ತರಿಂದ ಪಡೆದುಕೊಂಡು  ಗೆಲುವಿನ ನಗೆ ಬೀರಿ, ಕಾರ್ಯಕರ್ತರ ಮದುವೆಯಲ್ಲಿ ಪಾಲ್ಗೊಂಡಿದೂ ನೋಡಿದರೆ ಚುನಾವಣೆ ಯಿಂದ ಹೊರ ಬಂದಂತೆ ಕಂಡು ಬಂದಿತೂ.  ಇನೂ ಜೆಡಿಎಸ್ ಅಭ್ಯರ್ಥಿಯಾದ ರಾಜಾ ವೆಂಕಟಪ್ಪ ನಾಯಕ ಅವರು ಮಾನ್ವಿಯ ತಮ್ಮ ಗೃಹದಲ್ಲಿ ನಿತ್ಯ ಕಾರ್ಯಗಳನ್ನು ಮುಗಿಸಿಕೊಂಡು ಕಛೇರಿಗೆ ಆಗಮಿಸಿ ಕ್ಷೇತ್ರದ ವಿವಿಧ ಕಡೆಯಿಂದ ಆಗಮಿಸಿದ ಮುಖಂಡರು ಕಾರ್ಯಕರ್ತರೊಂದಿಗೆ ಚುನಾವಣೆಯಲ್ಲಿ ಮತದಾನವಾಗಿರುವ ಬಗ್ಗೆ ಮಾತನಾಡುತಾ ಮಧ್ಯಾಹ್ನ  ವಿವಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತ್ತೆ ನಾನೆ ಗೆಲುತ್ತೆನೆಂದು ಹೇಳುತ್ತಿದ್ದರು.     ಒಟ್ಟಿನಲ್ಲಿ ಒಂದು ತಿಂಗಳ ನಿರಂತರ ಓಡಾಟ, ಸಭೆ ಸಮಾರಂಭ, ಆ ಮುಖಂಡರನ್ನು ಬೆಟಿಯಾಗುವುದು, ಕಾರ್ಯಕರ್ತರನ್ನು ಹಿಡಿದು ಇಟ್ಟುಕೊಳುವುದು. ಮತದಾರರನ್ನು ಹೇಗೆ ಮನ ಒಲಿಸಿಕೊಳುವುದು ಎಂಬ ಚಿಂತೆಯಿಂದ ಈಗ ಮತದಾನ ಸ್ವಲ್ಪ ಮಟ್ಟಿಗೆ ಬ್ರೇಕ್ ಹಾಕಿದೆ.