ರಿಲ್ಯಾಕ್ಸ್ ಮೂಡಲ್ಲಿ ಅಭ್ಯರ್ಥಿಗಳು. ಈಗೇನಿದ್ದರೂ ಮತಗಳ ಲೆಕ್ಕಾಚಾರ, ಮೇ 13ಭವಿಷ್ಯ ನಿರ್ಧಾರ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ.11 :- ಕಳೆದ 15 ದಿನದಿಂದ ನಾಮಪತ್ರ ಸಲ್ಲಿಕೆಯಿಂದ ಮತದಾನದ ಕೊನೆಯವರೆಗೂ ಬಹಳಷ್ಟು ಬ್ಯುಸಿಯಲ್ಲಿದ್ದ ಕೂಡ್ಲಿಗಿ ಕ್ಷೇತ್ರದ ಸ್ಪರ್ಧಾ ಅಭ್ಯರ್ಥಿಗಳು ಇಂದು ಬೆಳಿಗ್ಗೆಯಿಂದ ಸ್ವಲ್ಪ ರಿಲ್ಯಾಕ್ಸ್ ಮೂಡಲ್ಲಿದ್ದು ತಮ್ಮ ತಮ್ಮ ಮನೆಗಳ ಕುಟುಂಬದೊಂದಿಗಿದ್ದಾರೆ.
ಕೂಡ್ಲಿಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ ಎನ್ ಟಿ ಶ್ರೀನಿವಾಸ ಇಂದು ಬೆಳಿಗ್ಗೆ ತಾಲೂಕಿನ ನರಸಿಂಹಗಿರಿ ಗ್ರಾಮದ ತಮ್ಮ ಮನೆಯ ಆವರಣದಲ್ಲಿ ತಾಯಿ ಓಬಮ್ಮ, ಸಹೋದರ ತಮ್ಮಣ್ಣ ಹಾಗೂ ಪತ್ನಿ ಡಾ ಪುಷ್ಪಾ ಸೇರಿ ಕುಟುಂಬದವರೊಂದಿಗೆ ಸೇರಿ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದು ನಂತರ ತಮ್ಮ ಹಿತೈಷಿಗಳೊಂದಿಗೆ ಮನೆಯಂಗಳದಲ್ಲಿ ಕ್ಷೇತ್ರವಾರು ನಡೆದ ಮತಗಟ್ಟೆಗಳಲ್ಲಿನ ಮತದಾನದ ಲೆಕ್ಕಾಚಾರ ಕುರಿತಾಗಿ ಚರ್ಚೆನಡೆಸುತ್ತ ಕುಳಿತಿದ್ದರು. 
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಅವರು ಇಂದು ಬೆಳಗಿನವರೆಗೆ ಕೂಡ್ಲಿಗಿಯ ತಮ್ಮ ನಿವಾಸದಲ್ಲಿದ್ದು ತಮ್ಮ ಹಿತೈಷಿಗಳ ಜೊತೆ ಮತದಾನದ ಕುರಿತು ರಿಲ್ಯಾಕ್ಸ್ ಮೂಡಿನ ಚರ್ಚೆ ನಡೆಸಿ, ಇಂದು ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿ ಚುನಾವಣೆ ಸಂಬಂಧ ಕುಟುಂಬದೊಂದಿಗೆ ದೂರವಿದ್ದ ಲೋಕೇಶ ನಾಯಕ ಇಂದು  ಪತ್ನಿ ಮಕ್ಕಳ ಜೊತೆ ಸೇರಿ ರಿಲ್ಯಾಕ್ಸ್ ಮೂಡಲ್ಲಿ ಸಂತಸದ ಕ್ಷಣ ಕಳೆದರು.
ಇನ್ನುಳಿದ ಅಭ್ಯರ್ಥಿಗಳಾದ ಜೆಡಿಎಸ್ ನ ಕೋಡಿಹಳ್ಳಿ ಭೀಮಣ್ಣ , ಎಎಪಿ ನಾರಿ ಶ್ರೀನಿವಾಸ , ಸಿಪಿಐನ ಹೆಚ್ ವೀರಣ್ಣ , ಕೆ ಆರ್ ಎಸ್ ಅಮ್ಮನಕೆರೆ ಚಿತ್ತರ ಚನ್ನವೀರ , ಉತ್ತಮ ಪ್ರಜಾಕೀಯ ಪಕ್ಷದ ಎಂ ಶರಣೇಶ ಹಾಗೂ ಪಕ್ಷೇತರ ಡೀಸೆಲ್ ಪಂಪ್ ಅಭ್ಯರ್ಥಿ  ಕೆ ನಕುಲಪ್ಪ ಇವರುಗಳು ನಿನ್ನೆ ನಡೆದ ಮತದಾನ ಮುಗಿಸಿಕೊಂಡು ಇಂದು ಅವರವರ ಮನೆಯಲ್ಲಿ ರಿಲ್ಯಾಕ್ಸ್ ಮೂಡಲ್ಲಿ ಇದ್ದಾರೆ.
ಮೇ 13ರಂದು ಅಭ್ಯರ್ಥಿಗಳ ಭವಿಷ್ಯ : ಮೇ 10ರಂದು ಮತದಾರರು ನಿರ್ಧಾರ ಮಾಡಿ ಮತ ಚಲಾಯಿಸಿದ ಮತಗಳು ಮತಯಂತ್ರಗಳಲ್ಲಿ ಭದ್ರವಾಗಿದ್ದು ಅಭ್ಯರ್ಥಿಗಳ ಭವಿಷ್ಯಮೇ 13ರಂದು ಹೊರಬೀಳಲಿದೆ ಅಲ್ಲಿಯವರೆಗೂ ರಿಲ್ಯಾಕ್ಸ್ ಮೂಡಲ್ಲಿರುವ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಎನ್ನುತ್ತಿರುತ್ತದೆ ಎಂಬುದು ಸುಳ್ಳಲ್ಲ.