ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಲಿಕ್ವಿಡ್ ಆಕ್ಸಿಜನ್ ಉತ್ಪಾದನೆ

ಮುಂಬೈ.ಮೇ೨: ಜಗತ್ತು ಹಿಂದೆಂದೂ ಕಾಣದ ಕೋವಿಡ್-೧೯ ಸಂಕಷ್ಟವನ್ನು ಭಾರತ ಅನುಭವಿಸುತ್ತಿದೆ. ಕೋವಿಡ್ ಎರಡನೆಯ ಅಲೆಯಲ್ಲಿ ಅಮೂಲ್ಯ ಜೀವಗಳನ್ನು ಉಳಿಸಲು ರಿಲಯನ್ಸ್ ಇಂಡಸ್ಟ್ರೀಸ್ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.
ದೇಶದೆಲ್ಲೆಡೆ ತೀವ್ರ ಅನಾರೋಗ್ಯಕ್ಕೆ ಒಳಗಾದ ರೋಗಿಗಳ ಚಿಕಿತ್ಸೆಗೆ ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್ ಲಭ್ಯತೆಯ ಖಾತರಿಯು ಈ ಸಂಕಷ್ಟದ ಸಮಯದ ತುರ್ತು ಅಗತ್ಯವಾಗಿದೆ. ರಿಲಯನ್ಸ್ ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್‌ಗಳ ಸಾಂಪ್ರದಾಯಿಕ ಉತ್ಪಾದಕ ಕಂಪೆನಿಯಲ್ಲ. ಆದರೂ ಸಾಂಕ್ರಾಮಿಕ ಪೂರ್ವದ ಶೂನ್ಯ ಉತ್ಪಾದನೆಯಿಂದ, ಪ್ರಸ್ತುತ ಒಂದೇ ಸ್ಥಳದಲ್ಲಿ ಜೀವರಕ್ಷಕವನ್ನು ಉತ್ಪಾದಿಸುವ ಭಾರತದ ಅತಿ ದೊಡ್ಡ ಉತ್ಪಾದಕನಾಗಿ ರಿಲಯನ್ಸ್ ಇಂಡಸ್ಟ್ರೀಸ್ ಬೆಳೆದಿದೆ.ಜಾಮ್ನಗರ ಮತ್ತು ಇತರೆ ಸ್ಥಳಗಳಲ್ಲಿನ ಸಂಸ್ಕರಣಾಗಾರ-ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್‌ಗಳಲ್ಲಿ ರಿಲಯನ್ಸ್ ಪ್ರಸ್ತುತ ೧೦೦೦ ಎಂಟಿಯಷ್ಟು ವೈದ್ಯಕೀಯ ಶ್ರೇಣಿಯ ಲಿಕ್ವಿಡ್ ಆಕ್ಸಿಜನ್‌ಗಳನ್ನು ಪ್ರತಿದಿನ ಉತ್ಪಾದಿಸುತ್ತಿದೆ. ಇದು ಭಾರತದ ಒಟ್ಟಾರೆ ಉತ್ಪಾದನೆಯ ಶೇ ೧೧ರಷ್ಟು ಪಾಲು ಹೊಂದಿದೆ. ಈ ಮೂಲಕ ದೇಶದ ಪ್ರತಿ ಹತ್ತು ರೋಗಿಗಳಲ್ಲಿ ಒಬ್ಬರ ಆಕ್ಸಿಜನ್ ಅಗತ್ಯವನ್ನು ಪೂರೈಸುತ್ತಿದೆ.
ಭಾರತಕ್ಕೆ ಹೆಚ್ಚಿನ ಅಗತ್ಯಬಿದ್ದ ಸಂದರ್ಭದಲ್ಲಿ ರಿಲಯನ್ಸ್ ಕುಟುಂಬದ ಯುವ ಸದಸ್ಯರು ಮತ್ತೆ ಸಕ್ರಿಯವಾಗಿ ಅದನ್ನು ಪೂರೈಸುವ ಬದ್ಧತೆ ಮತ್ತು ಸಂಕಲ್ಪದ ಪ್ರಜ್ಞೆ ಪ್ರದರ್ಶಿಸುವುದನ್ನು ಕಂಡು ನಾನು ನಿಜಕ್ಕೂ ವಿನೀತನಾಗಿದ್ದೇನೆ’ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಮುಕೇಶ್ ಅಂಬಾನಿ ಹೇಳಿದ್ದಾರೆ.
ನಾವು ಜತೆಗೂಡಿ ಈ ಕ್ಲಿಷ್ಟಕರ ಸನ್ನಿವೇಶವನ್ನು ನಿಯಂತ್ರಿಸಬಹುದು’ ಎಂದು ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ-ಅಧ್ಯಕ್ಷೆ ಶ್ರೀಮತಿ ನೀತಾ ಅಂಬಾನಿ ತಿಳಿಸಿದ್ದಾರೆ.
ಮತ್ತೊಂದು ಹೊಸ ಆವಿಷ್ಕಾರದಲ್ಲಿ ರಿಲಯನ್ಸ್, ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ಎಕ್ಸ್‌ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್ (ಪಿಇಎಸ್‌ಒ) ಅನುಮೋದಿತ ವಿನೂತನ ಹಾಗೂ ಸುರಕ್ಷಿತ ಪ್ರಕ್ರಿಯೆಗೆ ಅನುಗುಣವಾಗಿ ತನ್ನ ನೈಟ್ರೋಜನ್ ಟ್ಯಾಂಕರ್‌ಗಳನ್ನು ವೈದ್ಯಕೀಯ ಶ್ರೇಣಿಯ ಆಕ್ಸಿಜನ್‌ಗಳನ್ನು ಸರಬರಾಜು ಮಾಡುವ ಆಕ್ಸಿಜನ್ ಟ್ರಕ್‌ಗಳನ್ನಾಗಿ ಪರಿವರ್ತಿಸಿದೆ.