ರಿಯಾ ಚಕ್ರವರ್ತಿ ಜೊತೆಗೆ ವಿಮಾನ ನಿಲ್ದಾಣದಲ್ಲಿ ಕಂಡ ಸಾಕಿಬ್ ಸಲೀಮ್: ಸುಶಾಂತ್ ಅಭಿಮಾನಿಗಳು ಸೋಶಲ್ ಮೀಡಿಯಾದಲ್ಲಿ ಹೇಳಿದರು-

” ಅಗ್ಲಾ ಬಕ್ರಾ, ಮರೇಗಾ ಬೇಟಾ ತೂ ಭೀ”

ಸುಶಾಂತ್ ಸಿಂಗ್ ರಾಜಪುತ್ ಅವರ ಸಂಶಯಾಸ್ಪದ ಸಾವಿನ ನಂತರ ವಿವಾದಗಳಿಂದ ಸುತ್ತುವರಿದಿರುವ ರಿಯಾ ಚಕ್ರವರ್ತಿ ನಿಧಾನವಾಗಿ ನಾರ್ಮಲ್ ಲೈಫ್ ಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸುಶಾಂತ್ ರ ಫ್ಯಾನ್ಸ್ ಗಳ ಹೃದಯದಲ್ಲಿ ಮಾತ್ರ ರಿಯಾ ಚಕ್ರವರ್ತಿಯ ವಿಷಯದಲ್ಲಿ ದ್ವೇಷ ಮಾತ್ರ ಇನ್ನೂ ಕಡಿಮೆಯಾಗಿಲ್ಲ .ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಲ್ಲಿ ರಿಯಾ ಚಕ್ರವರ್ತಿ ಕಾಣುತ್ತಾರೊ ಆಕೆಗೆ ಕೆಟ್ಟದಾಗಿ ವ್ಯಂಗ್ಯವಾಗಿ ಏನಾದರೂ ಸೋಶಲ್ ಮೀಡಿಯಾದಲ್ಲಿ ಬರೆಯುತ್ತಾರೆ.
ಮೊನ್ನೆ ಮೊನ್ನೆ ಹುಮಾ ಕುರೇಶಿ ಅವರ ಸಹೋದರ ಸಾಕಿಬ್ ಸಲೀಮ್ ಬರ್ತ್ ಡೆ ಸೆಲೆಬ್ರೇಶನ್ ನಿಂದ ಹಿಂತಿರುಗಿದ ಸಮಯ ಮುಂಬೈ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಕಂಡುಬಂದಾಗ ಅವರಿಬ್ಬರಿಗೆ ಟ್ರೋಲ್ ಮಾಡಲು ಶುರು ಮಾಡಿದರು.
ಒಬ್ಬ ಯೂಸರ್ ಸಾಕಿಬ್ ಕಡೆಗೆ ನಿಶಾನೆ ಮಾಡುತ್ತಾ- “ದೂರ ಇರು ಮಗನೇ, ಇಲ್ಲವಾದರೆ ನಿನ್ನ ವಿಳಾಸವನ್ನೂ ನಾಪತ್ತೆ ಮಾಡಿಯಾಳು…” ಎಂದರೆ,
ಇನ್ನೊಬ್ಬ ಯೂಸರ್ ಬರೆಯುತ್ತಾ- “ಮುಂದಿನ ಬಲಿಪಶು ನೀನು, ಸಾಯುತ್ತೀ ಮಗನೇ ನೀನೂ ಕೂಡ”ಎಂದು ಬರೆದ.
ಮತ್ತೊಬ್ಬ ಯೂಸರ್- “ಮುಂದಿನ ನಂಬರ್ ಈತನದು. ಶುಭಕಾಮನೆಗಳು” ಎಂದರೆ,
ಮತ್ತೊಬ್ಬ ಬರೀತಾನೆ- “ಈತನಿಗೆ ದೀರ್ಘಾಯುಷ್ಯ ಸಿಗಲಿ ಎಂದು ನಾವು ಉಮೇದು ಇರಿಸಿದ್ದೇವೆ”…. ಹೀಗೆ! ೧೪ ಜೂನ್ ೨೦೨೦ರಂದು ಸುಶಾಂತ್ ಸಿಂಗ್ ರಾಜಪುತ್ ತನ್ನ ಮನೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ನಿಧನರಾಗಿದ್ದರು. ಆನಂತರ ರಿಯಾ ಚಕ್ರವರ್ತಿ ಮತ್ತು ಆಕೆಯ ಪರಿವಾರದ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ರಿಯಾ ಚಕ್ರವರ್ತಿ ಸುಶಾಂತ್ ರಿಗೆ ಆತ್ಮಹತ್ಯೆಗೆ ಪ್ರೇರಣೆ ಮಾಡಿದ್ದಲ್ಲದೆ ಸುಶಾಂತ್ ಖಾತೆಯಲ್ಲಿದ್ದ ೧೫ ಕೋಟಿ ರೂಪಾಯಿಯ ಹೇರಾಫೇರಿ ಮಾಡಿರುವ ಕೇಸು ದಾಖಲಿಸಲಾಗಿತ್ತು. ಅನಂತರ ಈ ಕೇಸಿನ ತನಿಖೆಯನ್ನು ಸಿಬಿಐ ಮಾಡಿದೆ. ೩೦ ದಿನಗಳ ನಂತರ ರಿಯಾ ಜೈಲಿನಿಂದ ಹೊರ ಬಂದಿದ್ದರು. ಆಕೆಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು.

ಅಕ್ಷಯ್ ಕುಮಾರ್ ಗೆ ಪರ್ಯಾವರಣ ಸಂರಕ್ಷಣೆಯ ಕೆಲಸಗಳಿಗೆ ಅಂತಾರಾಷ್ಟ್ರೀಯ ಸನ್ಮಾನ

ವಿಶ್ವದಾದ್ಯಂತ್ಯ ಅನೇಕ ಸೆಲೆಬ್ರಿಟಿಗಳು ದೀರ್ಘಕಾಲದಿಂದ ಪರ್ಯಾವರಣ ಸಂರಕ್ಷಣೆಯ ದಿಕ್ಕಿನಲ್ಲಿ ಸಕ್ರಿಯರೂಪದಿಂದ ಕೆಲಸ ಮಾಡುತ್ತಾ ಬಂದಿದ್ದಾರೆ. ಭಾರತೀಯ ಫಿಲ್ಮ್ ಇಂಡಸ್ಟ್ರಿಯಲ್ಲಿಯೂ ಅನೇಕ ಸೆಲೆಬ್ರಿಟಿಗಳು ಪರ್ಯಾವರಣ ಕುರಿತಂತೆ ಜನಜಾಗೃತಿಯ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.ಅವರಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಓರ್ವರು. ದೀರ್ಘಕಾಲದಿಂದ ಈ ರೀತಿಯಲ್ಲಿ ಅವರೂ ಪರ್ಯಾವರಣ ಸಂರಕ್ಷಣೆಯ ಕೆಲಸಮಾಡುತ್ತಾ ಬಂದಿದ್ದಾರೆ.


ಇದೀಗ ಅಕ್ಷಯ್ ಕುಮಾರ್ ಗೆ ಅವರು ಮಾಡುತ್ತಾ ಬಂದಿರುವ ಪರ್ಯಾವರಣ ಕುರಿತಾದ ಜನಜಾಗೃತಿಗಾಗಿ ’ಗೋಲ್ಡನ್ ಗ್ಲೋಬ್ ಆನರ್ಸ್ ಫೌಂಡೇಶನ್’ ಇವರಿಗೆ ಹಾಲಿವುಡ್ ಸ್ಟಾರ್ ಲಿಯೋನಾರ್ಡೋ ಡಿಕ್ಯಾಪ್ರಿಯೋ ಮತ್ತು ಅನ್ಯ ಜನರ ಜೊತೆ ಸನ್ಮಾನಿಸಲಿದೆ.
ಅಕ್ಷಯ್ ಕುಮಾರ್ ಭಾರತದಲ್ಲಿ ಹೆಚ್ಚು ಕೊಳಕು ಇದ್ದ ಸ್ಥಳಗಳಲ್ಲೆಲ್ಲ ಸ್ವಚ್ಛತೆಯ ಬಗ್ಗೆ ಅಲ್ಲಿ ಜಾಗರೂಕತೆ ಹುಟ್ಟಿಸುತ್ತಾ ಬಂದಿದ್ದಾರೆ. ಸ್ವಚ್ಛತೆ ಕಾಣಿಸಲು ಜನರಿಗೆ ಪ್ರೋತ್ಸಾಹಿಸಿದ್ದಾರೆ. ಹಾಗೂ ಜನಜಾಗೃತಿಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ.ಇದಕ್ಕಿಂತ ಮೊದಲೂ ಅಕ್ಷಯಕುಮಾರ್ ಗೆ ಈ ಕಾರ್ಯಕ್ಕಾಗಿ ಹಲವು ಪ್ರಶಸ್ತಿ ಸನ್ಮಾನಗಳು ದೊರೆತಿವೆ.ಅಕ್ಷಯ್ ರ ಹೊರತಾಗಿ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ದಿಯಾ ಮಿರ್ಜಾ, ಅಜಯ್ ದೇವಗನ್…. ಮೊದಲಾದ ಸೆಲೆಬ್ರಿಟಿಗಳೂ ಸಮಯ ಸಮಯದಿಂದ ಪರ್ಯಾವರಣ ಸಂರಕ್ಷಣೆಯ ವಿಷಯಗಳನ್ನು ಮುಂದಿಟ್ಟು ಕೆಲಸಗಳನ್ನು ಮಾಡುತ್ತಿದ್ದಾರೆ.

ಅಕ್ಷಯ್ ಖನ್ನಾ ಶೀಘ್ರವೇ ಓಟಿಟಿ ಪ್ಲ್ಯಾಟ್ಫಾರ್ಮ್ ಮೂಲಕ ಕಮ್ ಬ್ಯಾಕ್

ಕೊನೆಯ ಸಲ ಬಾಲಿವುಡ್ ಫಿಲ್ಮ್ ಸೆಕ್ಷನ್ ೩೭೫ ರಲ್ಲಿ ಕಂಡುಬಂದ ನಟ ಅಕ್ಷಯ್ ಖನ್ನಾ ಶೀಘ್ರವೇ ಓಟಿಟಿ ಪ್ಲ್ಯಾಟ್ ಫಾರ್ಮ್ ಮೂಲಕ ಮರಳಿ ಬರುತ್ತಿದ್ದಾರೆ .
ಅಕ್ಷಯ್ ಖನ್ನಾರ ಅಪ್ ಕಮಿಂಗ್ ಫಿಲ್ಮ್ ’ಸ್ಟೇಟ್ ಆಫ್ ಸೀಜ್: ಟೆಂಪಲ್ ಅಟ್ಯಾಕ್’ ಇದರ ಡಿಜಿಟಲ್ ಎಂಟ್ರಿ ಕಾಣಿಸಲಿದ್ದಾರೆ.ಇದು ಜೀ೫ ನಲ್ಲಿ ಬರಲಿದೆ.
ಈ ಫಿಲ್ಮ್ ೨೦೦೨ರಲ್ಲಿ ಗಾಂಧಿನಗರ ಗುಜರಾತ್ ನ ಅಕ್ಷರಧಾಮ್ ಮಂದಿರದಲ್ಲಿ ನಡೆದ ಹಲ್ಲೆಯ ಕಥೆಯನ್ನು ಆಧರಿಸಿದೆ. ಇದರಲ್ಲಿ ಸುಮಾರು ೮೦ ಜನರು ಗಾಯಗೊಂಡಿದ್ದರು.


ಅಕ್ಷಯ್ ಖನ್ನಾ ತನ್ನ ಡಿಜಿಟಲ್ ಎಂಟ್ರಿ ಫಿಲ್ಮ್ ನಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಕ್ಷಯ್ ಖನ್ನಾ ಮಾತ್ರವಲ್ಲ, ಇನ್ನೂ ಕೆಲವು ಪ್ಲಾಪ್ ಬಾಲಿವುಡ್ ಸ್ಟಾರ್ ಗಳು ಓಟಟಿ ಪ್ಲ್ಯಾಟ್ ಫಾರ್ಮ್ ಮೂಲಕ ಶೀಘ್ರವೇ ಮರುಎಂಟ್ರಿ ಮಾಡಲಿದ್ದಾರೆ. ಅವರಲ್ಲಿ ಸುಶ್ಮಿತಾ ಸೇನ್,ಅಭಿಷೇಕ್,ಲಾರಾದತ್ತಾ,ಚಂದ್ರಚೂಡ ಸಿಂಹ್,ಕರಿಶ್ಮಾ ಕಪೂರ್,ಅಫ್ತಾಬ್ ಶಿವದಾಸಾನೀ…..ಇವರೆಲ್ಲ ಪ್ರಮುಖರು.