ರಿಯಾಯಿತಿ ದರದಲ್ಲಿ ಕೋವಿಡ್ ವೈದ್ಯಕೀಯ ಪರಿಕರಗಳ‌ ಮಾರಾಟ

ಬಳ್ಳಾರಿ ಮೇ 19 :ಕೋವಿಡ್ ಬರದಂತೆ ತಡೆಯಲು ಮತ್ತು ಬರುವ ಮುನ್ನಿನ‌ ಪರೀಕ್ಷೆಗಾಗಿ ಬಳಸುವ ಪಲ್ಸ್ ಆಕ್ಸಿಮೀಟರ್, ಥರ್ಮಾ ಮೀಟರ್, ಎನ್ 95 ಮಾಸ್ಕ್ ಮತ್ತು ಸ್ಟೀಮರ್ ರಿಯಾಯಿತಿ ಧರದಲ್ಲಿ ಶಾಸನ್ ಸೇವಾ ಗ್ರೂಪ್ ನ ಸಹಕಾರದಿಂದ
ಜೈನ್ ಯುವಕ ಸಂಘ
ವಿತರಿಸಿತು. ಇದಕ್ಕೆ ಜನ‌ಮುಗಿ ಬಿದ್ದಿದ್ದರು.

ಬೆಳಿಗ್ಗೆ 6.30 ರಿಂದ ನಗರದ ಬಿಡಿಎಎ ಸಭಾಂಗಣದ ಮುಂದಿನ ಬಸ್ ಸೆಲ್ಟ್ ರ್ ಮುಂದೆ ವಿತರಿಸುವ ಕಾರ್ಯಕ್ರಮ‌ ಇತ್ತು ಆ ವೇಳೆಗೆ ಜನ ಉದ್ದನೆಯ ಸಾಲಿನಲ್ಲಿ ನಿಂತಿದ್ದರು.
ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಬಂದು‌ ಈ ರಿಯಾಯಿತಿ ಧರದ ವೈದ್ಯಕೀಯ ಉಪಕಣಗಳ ವಿತರಣೆಗೆ ಚಾಲನೆ ನೀಡಿದರು.
ಯಾವಾಗಲೂ ಸಂಕಷ್ಟದಲ್ಲಿರುವ ಜನರಿಗೆ ನೆರವಿಗೆ ಬರುವುದೇ ಜೈನ ಸಮುದಾಯವಾಗಿದೆ. ರಿಯಾಯಿತಿ ಧರದಲ್ಲಿ ಈ ಉಪ‌ಕರಣ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಜನರು ಇವುಗಳ ಸದುಪಯೋಗ ಪಡೆಯಬೇಕು ಎಂದರು.

ಆಕ್ಸಿಮೀಟರ್ ನ್ನು ₹ 450 ರಂತೆ 100, ಹಾಗು 300 ಥರ್ಮಾ ಮೀಟರ್ ಹಾಗೂ 350 ಸ್ಟೀಮರ್ ಅನ್ನು ತಲಾ ₹150ಕ್ಕೆ ಹಾಗೂ 500 ಮಾಸ್ಕ್ ಅನ್ನು ತಲಾ ₹ 20ಕ್ಕೆ ಮಾರಾಟ ಮಾಡಲಾಯಿತು.
ಈ ಸಂದರ್ಭದಲ್ಲಿ ಜೈನ ಸಮುದಾಯದ ಮುಖಂಡರಾದ ಸೂರಜ್ ಮಲ್ ಜೈನ್, ಅನಿಲ್ ಕುಮಾರ್, ಭರತ್ ಮೂತ ಮೊದಲಾದವರು ಇದ್ದರು.