ರಿಯಾಜಪಾಶಾ ಕೊಳ್ಳೂರಗೆ ಖಿದ್ಮಾ ಕಾವ್ಯ ಪುರಸ್ಕಾರ

ಔರಾದ : ಮಾ.4:ಖಿದ್ಮಾ ಫೌಂಡೇಶನ್ ಕರ್ನಾಟಕ ವತಿಯಿಂದ ಕೊಡಮಾಡುವ ಖಿದ್ಮಾ ಕಾವ್ಯ ಪ್ರಶಸ್ತಿಗೆ ತಾಲೂಕಿನ ಕೊಳ್ಳುರ ಗ್ರಾಮದ ಪರಿಸರ ಪ್ರೇಮಿ, ಸಂಪನ್ಮೂಲ ವ್ಯಕ್ತಿ ರಿಯಾಜಪಾಶಾ ಕೊಳ್ಳೂರ ಅವರು ಆಯ್ಕೆಯಾಗಿದ್ದಾರೆ.

ರಿಯಾಜಪಾಶಾ ಕೊಳ್ಳೂರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕವಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಕ್ರಿಯರಾಗಿದ್ದಾರೆ. ಜಿಲ್ಲೆಯ ಶಾಲಾ ಮತ್ತು ಕಾಲೇಜು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಕಾರ್ಯವನ್ನು ಗುರುತಿಸಿ ಖಿದ್ಮಾ ಫೌಂಡೇಶನ್ ಕರ್ನಾಟಕ ಅವರು ಖಿದ್ಮಾ ಕಾವ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಧಾರವಾಡದಲ್ಲಿ ಮಾರ್ಚ್ 5 ರಂದು ನಡೆಯಲಿರುವ 4ನೇ ವಾರ್ಷಿಕೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಕವಿ ಕಾವ್ಯ ಸಂಗಮ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕ ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.