ರಿಮ್ಸ್ : ನೇಮಕ ಆದೇಶಕ್ಕಾಗಿ ವಿಕಲಚೇತನ ಪರದಾಟ

ರಾಯಚೂರು.ಮಾ.೨೫- ರಿಮ್ಸ್ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಸೈಕಾಲಿಜಿಸ್ಟ್ ಹುದ್ದೆಗೆ ನೇಮಕಗೊಂಡ ಸಿದ್ದಪ್ಪ ಎನ್.ಮಾಲಿ ಪಾಟೀಲ್ ವಿಕಲಚೇತನರಿಗೆ ಆದೇಶ ಪತ್ರ ನೀಡಲು ಅಂಕವಿಕಲ ಕಲ್ಯಾಣಾಧಿಕಾರಿ ಮತ್ತು ರಿಮ್ಸ್ ಆಸ್ಪತ್ರೆಯ್ ಡೀನ್ ಅಡ್ಡಿಯಾಗಿರುವುದು ಈಗ ಬಹಿರಂಗಗೊಂಡಿದೆ.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಅಂಗವಿಕಲ ಆಯುಕ್ತರ ವಿಶೇಷ ನ್ಯಾಯಾಲಯ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಸ್ವತಃ ಹುದ್ದೆಗೆ ನೇಮಕಗೊಂಡ ವಿಕಲಚೇತನ ಸಿದ್ದಪ್ಪ ಅವರಿಗೆ ಆದೇಶ ನೀಡಿ, ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡದೇ, ಅಂಡಲೆಯುವಂತೆ ಮಾಡುವ ಅಮಾನುಷ್ಯ ಕೃತ್ಯ ಅಲ್ಲಿಯ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಅಂಗವಿಕಲ ಯೋಗಕ್ಷೇಮಕ್ಕಾಗಿ ಸ್ಥಾಪಿಸಲಾದ ಅಂಗವಿಕಲ ಅಧಿಕಾರಿ ಶರಣ್ ಪಾಟೀಲ್ ಅವರು ನೇಮಕ ಆದೇಶ ದೊರೆಕಿಸಿಕೊಡುವಲ್ಲಿ ದ್ವಂದ್ವ ನಿಲುವು ಅನುಸರಿಸುತ್ತಿದ್ದಾರೆ.
ರಿಮ್ಸ್ ಆಸ್ಪತ್ರೆಯಲ್ಲಿ ಖಾಲಿಯಿದ್ದ ಕ್ಲಿನಿಕಲ್ ಸೈಕಾಲಿಜಿಸ್ಟ್ ಹುದ್ದೆಗೆ ಅಂಗವಿಕಲ ಸಿದ್ದಪ್ಪ ಅವರು ಏಕಮಾತ್ರ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಈ ಹುದ್ದೆಗೆ ಇವರನ್ನು ನೇಮಿಸಿ, ಆಯ್ಕೆ ಮಾಡಲಾಗಿದ್ದರು. ಆದೇಶ ಪತ್ರ ನೀಡುತ್ತಿಲ್ಲ. ಅಂಗವಿಕಲರೊಂದಿಗೆ ಮಾನವೀಯತೆಯೊಂದಿಗೆ ನಿರ್ವಹಿಸಬೇಕೆಂದು ಸರ್ಕಾರ ಎಷ್ಟೇ ಸುತ್ತೋಲೆ ನೀಡಿದರೂ, ರಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಇದನ್ನು ಪಾಲಿಸುತ್ತಿಲ್ಲ. ಬಲಗಾಲು ದುರ್ಬಲತೆಯಿಂದ ತೀವ್ರ ತೊಂದರೆಯಲ್ಲಿರುವ ಸಿದ್ದಪ್ಪ ಅವರಿಗೆ ನ್ಯಾಯ ಒದಗಿಸಬೇಕಾದ ಅಧಿಕಾರಿಗಳು, ಒಬ್ಬ ಅಂಗವಿಕಲನ ರೋಧನೆಗೆ ಸ್ಪಂದಿಸುವ ಹೃದಯವಂತಿಕೆ ಇಲ್ಲದ ಕಾರಣ ರಿಮ್ಸ್ ಆಸ್ಪತ್ರೆಗೆ ನೂರಾರು ಸಲ ಅಲೆಯುವಂತಹ ಪ್ರಸಂಗ ನಿರ್ಮಾಣವಾಗಿದೆ,
ಅಂಗವಿಕಲ ಕಲ್ಯಾಣ ವಿಭಾಗಕ್ಕೆ ಸ್ವತಃ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು. ಸಿದ್ದಪ್ಪ ಅವರಿಗೆ ಈ ಹುದ್ದೆ ನೀಡುವುದಕ್ಕೆ ಸಂಬಂಧಿಸಿ ಅವರು ನಡೆಸುತ್ತಿರುವ ಸಂಘರ್ಷಕ್ಕೆ ಮಧ್ಯ ಪ್ರವೇಶಿಸಿ, ವಿಕಲಚೇತನರರಿಗೆ ನ್ಯಾಯ ಒದಗಿಸಲು ಮುಂದಾಗಬೇಕಾಗಿದೆ. ಯಾವ ಕಾರಣಕ್ಕೆ ವಿಕಲಚೇತನರಾದ ಸಿದ್ದಪ್ಪರಿಗೆ ಹುದ್ದೆ ನೇಮಕ ಆದೇಶ ನೀಡುತ್ತಿಲ್ಲ ಎನ್ನುವುದೇ ಈಗ ಗಂಭೀರ ಪ್ರಶ್ನೆಯಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ತಕ್ಷಣವೇ ಕ್ರಮ ಕೈಗೊಳ್ಳುವರೇ ಎನ್ನುವುದು ಕಾದು ನೋಡಬೇಕಾಗಿದೆ.