ರಿಮ್ಸ್, ಓಪೆಕ್ ಆಸ್ಪತ್ರೆ ಚಿಕೆತ್ಸೆಗೆ ಉಪಕರಣ ಬಳಕೆ ಕರವೇ ಆಗ್ರಹ

ರಾಯಚೂರು, ನ.೧೬-ರಿಮ್ಸ್ ಬೋಧಕ ಆಸ್ಪತ್ರೆಯ ವ್ಯಾಪ್ತಿಯ ಕೆಲವು ವಿಭಾಗಗಳನ್ನು ಉನ್ನತೀಕರಿಸಿ ವಿಕೇಂದ್ರೀಕರಣಗೊಳಿಸುವುದು, ಲಿಫ್ಟ್ ದುರಸ್ತಿ, ವಾರ್ಡ್‌ಗಳಲ್ಲಿ ಅಟೆಂಡರ್‌ಗಳ ನೇಮಕ ಹಾಗೂ ಸ್ವಚ್ಚತೆ ನಿರ್ವಹಣೆ ಹಾಗೂ ಓಪೆಕ್ ಆಸ್ಪತ್ರೆಯಲ್ಲಿ ಆಧುನಿಕ ಉಪಕರಣಗಳಿದ್ದು, ವೈದ್ಯರು ಸರಿಯಾಗಿ ಬಳಸದಿರುವುದನ್ನು ಕುರಿತು ಕ್ರಮ ಜರುಗಿಸುವಂತೆ ಜೈ ಕನ್ನಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ರಿಮ್ಸ್ ಬೋಧಕ ಆಸ್ಪತ್ರೆ ನೂರು ವಿದ್ಯಾರ್ಥಿಗಳ ಪ್ರವೇಶಾರ್ಥಿ ಅನುಪಾತದಲ್ಲಿ ೫೨೦ ಹಾಸಿಗೆಯ ಸಾಮರ್ಥ್ಯದ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಾಯಿತು. ಈ ಕಟ್ಟಡದಲ್ಲಿ ಜಿ-ಪ್ಲಸ್ ಆರು ಮಹಡಿಗಳನ್ನು
ಒಳಗೊಂಡಿದ್ದು, ವೈದ್ಯಶಾಸ್ತ್ರ ಮತ್ತು ಸಂಬಂಧಿತ ವಿಭಾಗಗಳು ಹಾಗೂ ಶಸ್ತ್ರ ಚಿಕಿತ್ಸೆಗೆ ಸಂಬಂಧಿತ ವಿಭಾಗಗಳು, ಮಹಿಳಾ ಮತ್ತು ಮಕ್ಕಳ ವಿಭಾಗ, ರೇಡಿಯೋಲಾಜಿ ವಿಭಾಗ ಹಾಗೂ ಸರ್ಕಾರಿ ಯೋಜನೆಗಳ ಅನುಷ್ಠಾನದ ಸಲುವಾಗಿ ಕಛೇರಿಗಳು ಒಳಗೊಂಡಿರುತ್ತವೆ. ಸರಿಯಾಗಿ ಬಳಸದೆ ಇರುವದರಿಂದ ಉಪಕರಣ ಪಾಲು ಬಿದ್ದವೆ ಎಂದು ದೂರಿದರು.
ರಿಮ್ಸ್ ಬೋಧಕ ಆಸ್ಪತ್ರೆಯು ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಪ್ರತಿಷ್ಠಿತ ಆಸ್ಪತ್ರೆಯಾಗಿದ್ದು, ಪಕ್ಕದ ಯಾದಗಿರಿ, ಕಲಬುರಗಿ ಜಿಲ್ಲೆಗಳನ್ನೊಳಗೊಂಡಂತೆ ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ರೋಗಿಗಳು ಸಹ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಾರೆ. ಇದರೊಡನೆ ಸರ್ಕಾರ ಐ.ಜೆ.ಓ. ವಿದ್ಯಾರ್ಥಿಗಳ ಪ್ರವೇಶಾರ್ಥಿಗೆ ಅವಕಾಶ ಮಾಡದಿರುವುದರಿಂದ ಪ್ರಸ್ತುತ ೫೨೦ ಹಾಸಿಗೆಗಳನ್ನು ಮೀರಿ ಒಳ ರೋಗಿಗಳಿಗೆ ಚಿಕಿತ್ಸೆಯನ್ನು ನೀಡ ಬೇಕು. ಯಾವಾಗಲೂ ಒಳರೋಗಿಗಳು ೯೦%ವರೆಗೆ ದಾಖಲಾಗಿರುತ್ತಾರೆ. ಇದು ಆಸ್ಪತ್ರೆಯ ರೋಗಿ ಮತ್ತು ಅವರ ಸಂಬಂಧಿಕರ ಜಮಾವಣೆಯಿಂದಾಗಿ ಜನಸಂದಣಿ ಜಾಸ್ತಿಯಾಗಿದ್ದೂ ಇದರಿಂದ ಸ್ವಚ್ಛತೆ, ಶುಚಿತ್ವ ಮತ್ತು ಸುರಕ್ಷತೆಗಳ ಸರಿಯಾದ ರೀತಿಯಲ್ಲಿ ನಿರ್ವಹಣೆಯಾಗುತ್ತಿಲ್ಲ. ಈಗಾಗಲೇ ಆಸ್ಪತ್ರೆಯ ಪಕ್ಕದಲ್ಲಿ ವೈದ್ಯಶಾಸ್ತ್ರ ಮತ್ತು ಇದಕ್ಕೆ ಸಂಬಂಧಿಸಿದ ವಿಭಾಗಗಳಿಗೋಸ್ಕರ ಲೋಕಾರ್ಪಣೆಯಾಗಿದೆ. ಇದರಿಂದ ವ್ಯವಸ್ಥೆ ವಿಕೇಂದ್ರೀಕರಣಗೊಳ್ಳುವುದಲ್ಲದೆ ಜನದಟ್ಟಣೆ ನಿಯಂತ್ರಿಸುವುದರ ಜೊತೆಗೆ ಉನ್ನತೀಕರಿಸಿದ ಚಿಕಿತ್ಸೆಯನ್ನು ಉತ್ತಮ ವಾತಾವರಣದಲ್ಲಿ ಉತ್ತಮ ಅನುಕೂಲಗಳೊಡನೆ ಚಿಕಿತ್ಸೆಯನ್ನು ಒದಗಿಸುವಂತೆ ಆಗ್ರಹಿಸಿದರು.
ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಇರುವ ಲಿಫ್ಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆಸ್ಪತ್ರೆಯ ಮುಂಭಾಗದಲ್ಲಿ ಮಾತ್ರ ಲಿಫ್ಟ್‌ಗಳು ಶುಚಿಯಾಗಿ ಕಾರ್ಯನಿರ್ವಹಿಸುವುದು. ಇನ್ನು ಉಳಿದ ಲಿಫ್ಟ್‌ಗಳು ಕಾರ್ಯ ನಿರ್ವಹಿಸದೇ ಕೆಟ್ಟು ನಿಂತಿವೆ. ಲಿಫ್ಟ್‌ಳನ್ನು ದುರಸ್ತಿ ಮಾಡಿದ ನಂತರ ಲಿಫ್ಟ್‌ಗಳನ್ನು ಚಲಾವಣೆ ಮಾಡಲು ಸಿಬ್ಬಂದಿಗಳನ್ನು ನೇಮಕ ಮಾಡಬೇಕು. ರಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಹಂದಿ, ನಾಯಿಗಳು ಒಳಗಡೆ ಬರದಂತೆ ನೋಡಿಕೊಳ್ಳಬೇಕು ಎಂದು ದೂರಿದರು.
ಈ ಸಂದರ್ಭದಲ್ಲಿ ಶರಣಪ್ಪ ಎನ್, ಚನ್ನಯ್ಯಸ್ವಾಮಿ, ಬಿ, ಹನುಮಂತ ಸೇರಿದಂತೆ ಉಪಸ್ಥಿತರಿದ್ದರು.