ರಿಮ್ಸ್ ಆಸ್ಪತ್ರೆ: ಸೋಂಕಿತರ ಆರೋಗ್ಯ ವಿಚಾರಿಸಿದ- ದದ್ದಲ್

ರಾಯಚೂರು.ಮೇ.೨೧- ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರು ಜಿಲ್ಲಾ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಕೋಣೆಗೆ ಭೇಟಿ ನೀಡಿ, ಆರೋಗ್ಯವನ್ನು ವಿಚಾರಿಸಿ ಆಸ್ಪತ್ರೆಯಲ್ಲಿ ಇರುವ ಆಕ್ಸಿಜನ್ ವೆಂಟಿಲೇಟರ್ ಮತ್ತು ಔಷಧಿಗಳು ರೆಮಿಡಿಸಿವರ್ ವ್ಯಾಕ್ಸೀನ್ ಮತ್ತು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಪೂರ್ಣ ಮಾಹಿತಿ ಪಡೆದು ವೈದ್ಯಾಧಿಕಾರಿಗಳಿಗೆ ಯಾವುದೇ ತುರ್ತು ಸಂದರ್ಭಗಳಲ್ಲಿ ರೋಗಿಗಳು ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ಅವರನ್ನು ತಕ್ಷಣವೇ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು ಸಂದರ್ಭದ ಕೋವಿಡ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಬೇಕು ಜೊತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬಬೇಕು ತಿಳಿಸಿದರು. ಈ ಸಂದರ್ಭದಲ್ಲಿ. ಆಸ್ಪತ್ರೆಯ ಸುಪುಡೆಂಟ್ ಬಾಸ್ಕರ್, ಸಹಾಯಕ ಆಯುಕ್ತ ಅಧಿಕಾರಿಗಳಾದ ಸಂತೋಷ ಕಾಮಗೌಡ, ಮೆಡಿಕಲ್ ಸರ್ಜನ್ ವಿಜಯ ಶಂಕರ, ವೈದ್ಯಧಿಕಾರಿಗಳು ನರ್ಸ್ ಗಳು ಮತ್ತು ಇನ್ನಿತರರು ಉಪಸ್ಥಿತರಿದ್ದರು.