ರಿಮ್ಸ್ ಆಸ್ಪತ್ರೆ ನಿರ್ದೇಶಕ ಬಸವರಾಜ ವರ್ಗಾವಣೆಗೆ ಒತ್ತಾಯ

ರಾಯಚೂರು, ಮಾ.೧೪- ರಿಮ್ಸ್ ಆಸ್ಪತ್ರೆ ನಿರ್ದೇಶಕ ಬಸವರಾಜ ಪೀರಾಪೂರು ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು.ರಿಮ್ಸ್ ಆಸ್ಪತ್ರೆಯಲ್ಲಿ ಸ್ವಚ್ಛತೆ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲು ವಿಫಲರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಸ್ವಚ್ಛತೆಯಿಲ್ಲದೇ ರೋಗಗಳ ತಾಣವಾಗಿದ್ದು, ಆಸ್ಪತ್ರೆ ಸ್ವಚ್ಛತೆಗಾಗಿ ಲಕ್ಷಾನುಗಟ್ಟಲೆ ಹಣ ಮಂಜೂರು ಆದರೂ ಯಾವುದೇ ರೀತಿ ಸ್ವಚ್ಛತೆ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಬೇರೆ ಗ್ರಾಮಗಳಿಂದ ಬಂದ ಬಡ ರೈತರಿಗೆ ಖಾಸಗಿ ಮೆಡಿಕಲ್ ಶಾಪ್‌ಗಳಗೆ ಹೋಗಿ ಔಷಧಿ ತರಲು ರಸೀದಿ ಬರೆದುಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೆಲವು ರಕ್ತ ಹಾಗೂ ಮೂತ್ರ ಪರೀಕ್ಷೆಗಳನ್ನು ಹೈದ್ರಾಬಾದ ಮುಖ್ಯ ರಸ್ತೆಯಲ್ಲಿರುವ ಉಷಾ ಲ್ಯಾಬ್ ಸ್ಯಾಪಲ್ ಕಲೆಕ್ಷನ್ ಸೆಂಟರ್ ಇವರ ಹತ್ತಿರ ಕಳುಹಿಸುತ್ತಾರೆ, ಆದರೆ ಪರೀಕ್ಷೆಗಳು ಮಾತ್ರ ಜೈನ್ ಟೆಂಪರ್ ರೋಡಿಗೆ ಬಂದು ಪರೀಕ್ಷೆ ಮಾಡಿಸಿ ಅಲ್ಲಿಂದ ರಿಪೋರ್ಟ್‌ಗಳನ್ನು ತರಲು ಒಂದು ದಿನ ಸಂಪೂರ್ಣವಾಗಿ ಹಾಳಾಗುತ್ತದೆ.
ಕೆಲವು ವೈದ್ಯರು ನಿಶ್ಚಯಿಂದ ಸೇವೆ ಸಲ್ಲಿಸದ ಬಂದ ರೋಗಿಗಳನ್ನು ತನ್ನ ಖಾಸಗಿ ಆಸ್ಪತ್ರೆಯ ವಿಳಾಸವನ್ನು ತಿಳಸಿ ಅಲ್ಲಿಗೆ ಬಂದು ಚಿಕಿತ್ಸೆ ಪಡೆಯಿರಿ ಎಂದು ಹೇಳುತ್ತಾರೆ. ಆಸ್ಪತ್ರೆಯಲ್ಲಿ ಸೀರಿಯಸ್ ಕಂಡಿಷನ್‌ನಲ್ಲದ ರೋಗಗಳನ್ನು ನೀವು ಬಳ್ಳಾರಿಗೆ ಹೋಗಿ ಇಲ್ಲ ಐಸಿಯು, ಇರುವುದಿಲ್ಲ ಎಂದು ಸುಳ್ಳು ಹೇಳಿ ರೋಗಿಗಳನ್ನು ದೂರದ ಊರುಗಳಾದ ಬಳ್ಳಾರಿ, ಹೈದ್ರಾಬಾದ ಮತ್ತು ಬೆಂಗಳೂರಿಗೆ ಹೋಗಲು ಸಲಹೆ ನಿಡುತ್ತಿದ್ದು ಯಾವುದೇ ಪ್ರಾಥಮಿಕ ಚಿಕಿತ್ಸೆಯನ್ನು ಕೂಡ ನೀಡುತ್ತಿಲ್ಲ ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಮೆಡಿಕಲ್ ದಿಂದ ಔಷಧಿಯನ್ನು ಪಡೆಯದಂತೆ ಸೂಕ್ತ ಕ್ರಮ ವಹಿಸಬೇಕು ಮತ್ತು
ಸರ್ಕಾರಿ ಔಷಧಿಗಳನ್ನು ರೋಗಿಗಳಗೆ ಉಚಿತವಾಗಿ ನೀಡಬೇಕು. ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ಹೊರಗಡೆ ಖಾಸಗಿ ಲ್ಯಾಬ್‌ಗಳಿಗೆ ಕಳುಹಿಸದಂತೆ ರಿಮ್ಸ್ ಆಸ್ಪತ್ರೆಯಲ್ಲಿಯೇ ಉಚಿತವಾಗಿ ಪರೀಕ್ಷೆಗಳನ್ನು ನಡೆಸಬೇಕು.
ರಿಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಖಾಸಗಿ ಆಸ್ಪತ್ರೆಯನ್ನು ನಡೆಸದಂತೆ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು.
ಈ ಸಂದರ್ಭದಲ್ಲಿ ಪ್ರಕಾಶ ಕುಮಾರ, ನರಸಿಂಹಲು ಕಮಲಪೂರು, ಆನಂದ ಏಗನೂರು, ಸತೀಶ ಪಿರಂಗಿ, ನವೀನ್ ಕುಮಾರ ಸೇರಿದಂತೆ ಉಪಸ್ಥಿತರಿದ್ದರು.