ರಿಮ್ಸ್ ಆಸ್ಪತ್ರೆಗೆ ಧರ್ಮಚಂದ್ ದೇಹದಾನ

ರಾಯಚೂರು.ಡಿ.೨೮- ನಗರದ ಗಣ್ಯ ವ್ಯಾಪಾರಿಗಳಾದ ಎಂ.ಧರ್ಮಚಂದ್ ಜೈನ್ (೮೫) ಇವರು ಇಂದು ನಿಧನರಾಗಿದ್ದಾರೆ. ಇವರ ಪಾರ್ಥಿವ ಶರೀರವನ್ನು ರಿಮ್ಸ್ ವೈದ್ಯಕೀಯ ಕಾಲೇಜಿನ ಅಧ್ಯಯನಕ್ಕೆ ಕುಟುಂಬದವರು ದಾನ ಮಾಡಿದ್ದಾರೆ.
ರಿಮ್ಸ್ ಆಸ್ಪತ್ರೆಯಲ್ಲಿ ದೇಹದಾನ ವಿಧಿ ವಿಧಾನಗಳನ್ವಯ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಕುಟುಂಬದವರು ನೀಡಿದ ದೇಹದಾನವನ್ನು ರಿಮ್ಸ್ ಅಧಿಕಾರಿಗಳು ಸ್ವೀಕರಿಸಿದರು.