ಆನೇಕಲ್.ಮೇ.೨೮:ಸಿಂಗೇನ ಅಗ್ರಹಾರ ಪ್ರೂಟ್ಸ್ ಮಾರ್ಕೆಟ್ ಸಮೀಪದಲ್ಲಿ ಕಮ್ಮಸಂದ್ರ ಪವನ್ ಶ್ರೀನಿವಾಸ್ ರವರ ಮಾಲೀಕತ್ವದಲ್ಲಿ ನೂತನವಾಗಿ ಪ್ರಾರಂಭ ಗೊಂಡ ರಿಪ್ಡ್ ಜಿಮ್ ಅಂಡ್ ಪಿಟ್ನೆಸ್ ಸೆಂಟರ್ ಗೆ ಜೆಡಿಎಸ್ ಮುಖಂಡರಾದ ಕೆ.ಪಿ.ರಾಜು ರವರು ಚಾಲನೆ ನೀಡಿ ಶುಭ ಹಾರೈಸಿದರು.
ಈ ವೇಳೆ ಜೆಡಿಎಸ್ ಮುಖಂಡರಾದ ಕೆ.ಪಿ.ರಾಜು ರವರು ಮಾತನಾಡಿ ಕಮ್ಮಸಂದ್ರ ಪವನ್ ಶ್ರೀನಿವಾಸ್ ರವರು ಈಗಾಗಲೇ ಕಮ್ಮಸಂದ್ರ ಮತ್ತು ಅನಂತನಗರದಲ್ಲಿ ರಿಪ್ಡ್ ಜಿಮ್ ಅಂಡ್ ಪಿಟ್ನೆಸ್ ಸೆಂಟರ್ ನ್ನು ಪ್ರಾರಂಭಿಸಿ ಈಗಾಗಲೇ ಸಾರ್ವಜನಿಕರಿಗೆ ಉತ್ತಮವಾದ ಸೇವೆ ನೀಡುತ್ತಿದ್ದು ಇಂದು ಸಿಂಗೇನ ಅಗ್ರಹಾರ ಪ್ರೂಟ್ಸ್ ಮಾರ್ಕೆಟ್ ಸಮೀಪದಲ್ಲಿ ಮೂರನೇ ರಿಪ್ಡ್ ಜಿಮ್ ಅಂಡ್ ಪಿಟ್ನೆಸ್ ಸೆಂಟರ್ ನ್ನು ಪ್ರಾರಂಭಿಸಿದ್ದು ಕಮ್ಮಸಂದ್ರ ಪವನ್ ಶ್ರೀನಿವಾಸ್ ರವರು ತಾಲ್ಲೂಕಿನಾದ್ಯಂತ ಮತ್ತಷ್ಠು ಜಿಮ್ ಸೆಂಟರ್ ಗಳನ್ನು ಪ್ರಾರಂಭಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಚಲನ ಚಿತ್ರ ನಟರಾದ ಧರ್ಮ ಕೀರ್ತಿರಾಜ್, ಮುಖಂಡರಾದ ಲಷ್ಮೀನಾರಾಯಣ್, ಮುಕುಂದ ಪಟೇಲ್, ಸೊಪ್ಪಹಳ್ಳಿ ಸತೀಶ್, ಆನೇಕಲ್ ರಾಖಿ, ವಿನಯ್ ರೆಡ್ಡಿ, ವಿದ್ಯಾಸಾಗರ್, ಹೆಚ್.ಎಂ.ಶ್ರೀನಿವಾಸ್, ಶ್ರೀಧರ್ ಮತ್ತು ಕಮ್ಮಸಂದ್ರ ಪವನ್ ಶ್ರೀನಿವಾಸ್ ರವರ ಸ್ನೇಹಿತರು ಭಾಗವಹಿಸಿದ್ದರು.