ರಿನ್ಯೂವ್ ಕಂಪನಿಯಿಂದ ರೈತರಿಗೆ ಅನ್ಯಾಯ; ರೈತರ ಪ್ರತಿಭಟನೆ

ಸಂಜೆವಾಣಿ ವಾರ್ತೆ

ಜಗಳೂರು.ಜೂ.೩ : ರಿನ್ಯೂವ್ ಕಂಪನಿಯವರು ರೈತರಿಗೆ ಸಮರ್ಪಕವಾದ ಪರಿಹಾರ ನೀಡದೇ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ರೈತನ ಜಮೀನಿನಲ್ಲಿ ಪ್ರತಿಭಟನೆ ನಡೆಸಿದರು.ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹಾಗೂ ಜಮೀನಿನ ಮಾಲಿಕ ಉಜ್ಜನಗೌಡ್ರು ಜಮಿನನಲ್ಲಿ ಪ್ರತಿಭಟನೆ ನಡೆಸಿದರು.ಈ ವೇಳೆ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮೆಳ್ಳಕಟ್ಟೆ ಪದ್ಮ ಮಾತನಾಡಿ, ಉಜ್ಜನಗೌಡ್ರು ಎಂಬ ರೈತನಿಗೆ ಸೇರಿದ ಜಮಿನಿನ ಸರ್ವೆ ನಂಬರ್ 60/4 ಖಾಸಗಿ ರಿನ್ಯೂವ್ ವಿಂಡ್ ಫ್ಯಾನ್ ಕಂಪನಿ ಕಳೆದ ಮೂರು ವರ್ಷಗಳ ಹಿಂದೆ ಜಮೀನಿನಲ್ಲಿ ದೌರ್ಜನ್ಯದಿಂದ ವಿಂಡ್ ಫ್ಯಾನ್‌ನ ಹೈ ಟೆನ್ಷನ್ ವಿದ್ಯುತ್ ಸಂಪರ್ಕದ ಲೈನ್ ಎಳೆದಿದ್ದು.ನಮ್ಮ ಜಮೀನಿನಲ್ಲಿ ಎಳೆಯದಂತೆ ತಡೆಯೊಡ್ಡಿದ ಸಂದರ್ಭದಲ್ಲಿ ಮಾರುಕಟ್ಟೆ ಬೆಲೆಯನ್ವಯ ₹60 ಲಕ್ಷ ಪರಿಹಾರ ನಿಡುವ ಭರಿಸೆ ನೀಡಿದ್ದರು. ಇದುವರೆಗೂ ಯಾವುದೇ ಹಣ ನೀಡದೆ ವಂಚಿಸಿ ಪರಿಹಾರ ನೀಡಿದ್ದೇವೆ ಎಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪಕ್ಕದ ಜಮೀನಿನ ರೈತರಿಗೆ ಪ್ರತಿಗುಂಟೆಗೆ 30 ಸಾವಿರ ದವರೆಗೂ ಪರಿಹಾರ ಹಣಕೊಟ್ಟಿದ್ದಾರೆ .ಅಂತೆಯೇ 30 ಗುಂಟೆ ವ್ಯಾಪ್ತಿ ಜಮೀನಿನಲ್ಲಿ ವಿದ್ಯುತ್ ಸಂಪರ್ಕ ಲೈನ್ ಎಳೆದಿದ್ದು ಪ್ರತಿ ಗುಂಟೆಗೆ ಕೇವಲ 20 ಸಾವಿರ ರೂ ದಂತೆ ಒಟ್ಟು 60 ಲಕ್ಷ ಪರಿಹಾರ ಹಣ ನೀಡಬೇಕು ಇಲ್ಲವಾದರೆ ವಿದ್ಯುತ್ ಲೈನ್ ತೆರವುಗೊಳಿಸಲಾಗುವುದು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ,ರಾಜ್ಯ ಕಾರ್ಯಾಧ್ಯಕ್ಷ ನೆಲವನ್ನೆ ರಮೇಶ್ ,ರಾಜ್ಯ ಉಪಾಧ್ಯಕ್ಷೆ ಅನಿತಮ್ಮ,ರಾಜ್ಯ ಕಾರ್ಯದರ್ಶಿ ಭಾಗ್ಯಮ್ಮ,ಮಂಜುನಾಥ್,ಜಿಲ್ಲಾಧ್ಯಕ್ಷೆ ಗೀತಮ್ಮ,ತಾಲೂಕು ಅಧ್ಯಕ್ಷೆ ಚೌಡಮ್ಮ,ಮುಖಂಡರಾದ ಬಸವರಾಜ್,ಚಂದ್ರಣ್ಣ,ಸೇರಿದAತೆ ಭಾಗವಹಿಸಿದ್ದರು.