ರಿದ್ಧಿ – ಸಿದ್ಧಿ ಫೌಂಡೇಶನ್ ನಿಂದ ರಕ್ತದಾನ ಶಿಬಿರ

ದಾವಣಗೆರೆ. ನ.೨೪; ರಿದ್ಧಿ – ಸಿದ್ಧಿ ಫೌಂಡೇಶನ್ ನ 9 ನೇ ವಾರ್ಷಿಕೋತ್ಸವದ ಪ್ರಯುಕ್ತ ದಾವಣಗೆರೆ ನಗರದ ರೆಡ್ ಕ್ರಾಸ್ ರಕ್ತ ನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ದಿನೇಶ್. ಕೆ. ಶೆಟ್ಟಿ ಅವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿಪಕ್ಷ ನಾಯಕರಾದ ಗಡಿಗುಡಾಳ ಮಂಜುನಾಥ, ಮಹಾನಗರ ಪಾಲಿಕೆ ಸದಸ್ಯರಾದ ಎ. ನಾಗರಾಜ್, ಸುಚಿಸ್ಮಿತಾ ಪಟ್ನಾಯಕ, ಅನಮೋಲ್ ಸಾಬಳೆ, ರಿದ್ಧಿ ಸಿದ್ಧಿ ಫೌಂಡೇಶನ್ ಅಧ್ಯಕ್ಷರಾದ ವಿಜಯಕುಮಾರ್, ಕಾರ್ಯದರ್ಶಿ ರಾಜು‌ ಭಂಡಾರಿ, ಆಲೂರ ರಾಜಶೇಖರ, ಅನಿಲ್ ಬಾರಂಗಳ್, ಶ್ರೀಕಾಂತ್ ಬಗರೆ, ನಫೀಜ್ ಶೇಖ್, ಸಾಗರ. ಎಲ್.ಎಚ್, ಅನಿಲ್ ಗೌಡ,  ವಿಜಯಕುಮಾರ್ ಜೈನ್, ವಿಜಯಲಕ್ಷ್ಮಿ, ಮಹಮ್ಮದ ಗೌಸ್, ರೋನಕ ಜೈನ, ಮಹೇಶ ಶೆಟ್ಟಿ, ಕಾರ್ತಿಕ ಹೀರೆಮಠ, ಡಿ.ಜೆ. ಪವನ್  ಉಪಸ್ಥಿತರಿದ್ದರು.