ರಿಕ್ಷಾಗೆ ಕಾರ್ ಡಿಕ್ಕಿ: ಚಾಲಕ ಮೃತ್ಯು

ಬೆಳ್ತಂಗಡಿ, ಎ.೨೧- ಮನೆಯೊಂದರಲ್ಲಿ ನಾಗಪೂಜೆ ನಡೆಯುತ್ತಿದ್ದ ವೇಳೆ ಹೆಜ್ಜೇನು ಹಿಂಡು ಗೂಡಿನಿಂದ ಹೊಬಂದು ದಾಳಿ ನಡೆಸಿದ್ದರಿಂದ ಎಂಟು ಮಂದಿ ತೀವ್ರ ಅಸ್ವಸ್ಥಗೊಂಡ ಘಟನೆ ನಿನ್ನೆ ಬೆಳಗ್ಗೆ ನಾವೂರು ಗ್ರಾಮದ ಕುಂಡಡ್ಕ ಎಂಬಲ್ಲಿ ನಡೆದಿದೆ.


ಕುಂಡಡ್ಕನಿವಾಸಿ ಅರುವಾಲು ಬಾಲಕೃಷ್ಣ ಎಂಬವರ ಮನೆಯಲ್ಲಿ ನಿನ್ನೆ ಬೆಳಗ್ಗೆ ನಾಗಪೂಜೆ ನಡೆಯುತ್ತಿತ್ತು. ಈ ವೇಳೆ ಜೇನುನೊಣಗಳು ಹಠಾತ್ ಹಿಂಡು ಹಿಂಡಾಗಿ ಗೂಡಿನಿಂದ ಹೊರ ಬಂದು ಪೂಜೆಗೆ ಸೇರಿದ್ದ ಜನರ ಮೇಲೆ ದಾಳಿ ನಡೆಸಿದೆ. ಸ್ಥಳದಲ್ಲಿದ್ದ ಸುಮಾರು ಇಪ್ಪತೈದು ಮಂದಿ ಇದರ ದಾಳಿಗೆ ಈಡಾಗಿದ್ದಾರೆ. ಈ ಪೈಕಿ ಎಂಟು ಮಂದಿ ಹೆಜ್ಜೇನು ಕಡಿತದಿಂದ ತೀವ್ರ ಅಸ್ವಸ್ಥಗೊಂಡಿದ್ದರೆನ್ನಲಾಗಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಸ್ಥಳೀಯವಾಗಿ ಚಿಕಿತ್ಸೆ ಪಡೆದಿದ್ದಾರೆ.