ರಾಹುಲ ಗಾಂಧಿ ಸಂಸತ ಸದಸ್ಯತ್ವ ಅನರ್ಹತೆ ಖಂಡಿಸಿ ರೈಲು ತಡೆದು ಪ್ರತಿಭಟನೆ

ಬೀದರ,ಮಾ.29- ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಬೀದರ ಜಿಲ್ಲಾ ಸಮಿತಿ ವತಿಯಿಂದ ರಾಹುಲ ಗಾಂಧಿ ಅವರನ್ನು ಸಂಸದರ ಸ್ಥಾನದಿಂದ ವಜಾ ಮಾಡಿರುವುದನ್ನು ಖಂಡಿಸಿ ಬೀದರ ಜಿಲ್ಲಾ ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷರಾದ ಸಚಿನ್ ಮಲ್ಕಾಪೂರೆ ಅವರ ನೇತೃತ್ವದಲ್ಲಿ ಬೀದರ ನಗರದ ರೈಲ್ವೆ ನಿಲ್ದಾಣಗೆ ಹಾಗೂ ಮಚಲಿ ಪಟ್ನಂ ಬೀದರನಿಂದ ಹೈದ್ರಾಬಾದಗೆ ಹೋಗುವ ರೈಲ್ವೆಗೆ ತಡೆ ಹಿಡಿದು ಉಗ್ರವಾಗಿ ಪ್ರತಿಭಟನೆ ಕೈಗೊಳ್ಳಲಾಯಿತು.
ಈ ಸಮಯದಲ್ಲಿ ಜಿಲ್ಲಾಧ್ಯಕ್ಷರಾದ ಸಚಿನ ಮಲ್ಕಾಪೂರೆ ರವರು ಮಾತನಾಡಿ, ರಾಹುಲ ಗಾಂಧಿ ಅವರ ಸದಸ್ಯತ್ವ ಅನರ್ಹ ಮೋದಿ ಸರ್ಕಾರದ ಸಂಸದಿಯ ಪ್ರಜಾಪ್ರಭುತ್ವಕ್ಕೆ ಜಡಿದ ಕೊನೆಯ ಮೂಳೆಯಾಗಿದೆ. ರಾಹುಲ ಗಾಂಧಿಯವರನ್ನು ರಾಜಕೀಯವಾಗಿ ಎದುರಿಸಲಾಗದ 56 ಇಂಚಿನ ಎದೆ, ದೆಹಲಿಯ ರಣ ಬಿಸಿಲಿನಲ್ಲೂ ಗಢ ಗಢ ನಡಗುತ್ತಿರುವುದು ಸ್ಪಷ್ಠವಾಗಿ ಗೊಚರಿಸುತ್ತಿದೆ.
ಕಾಯಾರ್ಂಗ ಮತ್ತು ಸಂಸದೀಯ ಪ್ರಜಾಪ್ರಭುತ್ವ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನೇ, ಕೇಂದ್ರದ ಸರ್ವಾಧಿಕಾರಿ ಪ್ರಭುತ್ವ ಸಂಪೂರ್ಣ ಬುಡಮೇಲು ಮಾಡಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈಯಕ್ತಿಕ ಜೀವನದಲ್ಲಿ ದ್ವೇಷ, ರಾಜಕಾರಣ ಮಾಡುತ್ತಿರುವುದ ದುರಂತೆಂದು ಆರೋಪಿಸಿದ್ದರು,
ಈ ಸಂದರ್ಭದಲ್ಲಿ ಜಿಲ್ಲಾ ಎನ್.ಎಸ್. ಯು.ಐ. ಉಪಾಧ್ಯಕ್ಷರಾದ ರತ್ನಾದೀಪ ಕಸ್ತೂರೆ, ವಿಲ್ಸನ್ ಡೋಣೆ, ಲೊಕೇಶ ಡುಮ್ಮೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ, ಶಂಕರ ಪಾಟೀಲ್, ಸಂತೋಷ ಚಿಮ್ಮಕೋಡ, ಹರಿದೇವ, ಸಚಿನ ಚಲ್ವಾ, ವಿವಿಧ ತಾಲೂಕ ಅಧ್ಯಕ್ಷರಗಳಾದ ಕೃಷ್ಣ ಮೇತ್ರೆ, ಚಂದು ಡಿ.ಕೆ., ಹಾಗೂ ಎನ್.ಎಸ್.ಯು.ಐ ಮುಖಂಡರಾದ ಲೊಕೇಶ ಗುಪ್ತಾ, ಶ್ರೀಕಾಂತ ರೆಡ್ಡಿ, ಪಂಢರಿ ಮೇತೆ, ಅನೇಕ ವಿದ್ಯಾರ್ಥಿಗಳು ಭಾಗವಹಿದ್ದರು.