ರಾಹುಲ್ ಹೊಸ ನೋಟ ಜಾಲತಾಣದಲ್ಲಿ ವೈರಲ್

ಲಂಡನ್,ಮಾ.೧- ಕಾಂಗ್ರೆಸ್ ಮಾಜಿ ಆಧ್ಯಕ್ಷ ಹಾಗು ಸಂಸದ ರಾಹುಲ್ ಗಾಂಧಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾಣಿಸಿಕೊಂಡ ಅವರ ಹೊಸ ನೋಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡಲು ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಲಂಡನ್‌ಗೆ ಆಗಮಿಸಿದ್ದು ಅವರ ಟ್ರಿಮ್ ಮಾಡಿಕೊಂಡ ಗಡ್ಡ ಮತ್ತು ತಲೆ ಕೂದಲಿನ ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ್ ಜೋಡೋ ಪಾದಯಾತ್ರೆ ನಡೆಸಿದ ರಾಹುಲ್ ಗಾಂಧಿ, ಗಡ್ಡ ಬಿಟ್ಟಿದ್ದರು.ಇದೀಗ ಅವರು ಗಡ್ಡ ಮತ್ತು ತಲೆ ಕೂದಲು ಟ್ರಿಮ್ ಮಾಡಿಕೊಂಡು ಕೇಂಬ್ರಿಜ್ಡ್ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ೨೧ನೇ ಶತಮಾನದಲ್ಲಿ ಕೇಳುವುದು ಮತ್ತು ಕಲಿಯುವುದು ಎಂಬ ವಿಷಯದ ಕುರಿತು ಮಾತನಾಡಿದ ರಾಹುಲ್ ಗಾಂಧಿ ಅವರು ಬಿಳಿ ಟೀ ಶರ್ಟ್ ಬದಲಿಗೆ ಸೂಟ್ ಧರಿಸಿರುವುದು ಕಂಡುಬಂದಿದೆ.

ರಾಹುಲ್ ಭಾರತ್ ಜೋಡೋ ಯಾತ್ರೆಯ ಕುರಿತು ವಿಶ್ವಾದ್ಯಂತ ಸಂವಾದದ ಮಾಡುವ ಅಗತ್ಯತೆಯ ಮೇಲೆ ಕೇಂದ್ರೀಕರಿಸಿದ್ದಾರೆ.ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅವರ ೧೪೫ ದಿನಗಳ ಪಾದಯಾತ್ರೆಯ ಮುಕ್ತಾಯದ ನಂತರ, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ಪರ ವಿರೋಧ

ರಾಹುಲ್ ಗಾಂಧಿ ಅವರ ಹೊಸ ಲುಕ್‌ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಅಭಿಪ್ರಾಯ ಹಂಚಿಕೊಂಡಿದ್ದಯ ಬಹುತೇಕ ಮಂದಿ ರಾಹುಲ್ ಅವರ ಹೊಸ ಲುಕ್ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ.
ಇನ್ನೂಕೆಲವು ಮಂದಿ ಹೊಸ ಲುಕ್ ಅಂದರೇನು ರಾಹುಲ್ ಗಾಂಧಿ ರೂಪದರ್ಶಿಯೇ ಅಥವಾ ರಾಜಕಾರಣಿಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಲುಕ್ ಪರ ವಿರೋಧಕ್ಕೂ ಕಾರಣವಾಗಿದೆ.