
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.25: ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರಿಗೆ ಗುಜರಾತ್ ನ್ಯಾಯಾಲಯ 2ವರ್ಷ ಶಿಕ್ಷೆ ಪ್ರಕಟಿಸಿದ ತಕ್ಷಣ ಅವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಇದೆಲ್ಲಾ ಬಿಜೆಪಿ ಪಕ್ಷದ ಕುತಂತ್ರ ಮತ್ತು ಪ್ರಜಾ ಪ್ರಭುತ್ವದ ಕಗ್ಗೊಲೆಯಾಗಿದೆಂದು ಕಾಂಗ್ರೆಸ್ ಪಕ್ಷದ ದಲಿತ ಮುಖಂಡ ಮುಂಡ್ರಿಗಿ ನಾಗರಾಜ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಹುಲ್ ಗಾಂಧಿ ಅವರು ಮಾತನಾಡಿದ್ದು ಕರ್ನಾಟಕದಲ್ಲಿ ಅದು ಅವರು ರಾಜಕೀಯವಾಗಿ ಟೀಕೆ ಮಾಡಲು ಮಾತನಾಡಿದ್ದು ಆ ಬಗ್ಗೆ ಗುಜರಾತ್ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಶಿಕ್ಷೆ ಪ್ರಕಟಿಸಲೂ ನ್ಯಾಯಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರಿದಂತೆ ಇದೆ. ನ್ಯಾಯಾಂಗ ವ್ಯವಸ್ಥೆ ಮೇಲೆಯೇ ಅನುಮಾನಿಸುವಂತಾಗಿದೆ. ಇದಕ್ಕೆ ನಾನು ನ್ಯಾಯಾಂಗ ನಿಂದನೆ ಮಾಡುತ್ತಿಲ್ಲ ಆರೋಪ ಅಷ್ಟೇ. ಈ ರೀತಿ ಯಾವುದೇ ವಿರೋಧ ಪಕ್ಷಗಳಿಗೆ ಆಗಬಾರದು. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಸರಿದಾರಿಗೆ ನಡೆಯಲು ವಿರೋಧ ಪಕ್ಷದ ಟೀಕೆ ಆರೋಪಗಳಿಗೆ ಉತ್ತರಿಸುವಂತಿರಬೇಕು. ಅದು ಬಿಟ್ಟು ಸೇಡು ತೀರಿಸಿಕೊಳ್ಳುವಂತೆ ಇರಬಾರದು ಎಂದಿದ್ದಾರೆ.
ದೇಶದ ಭವಿಷ್ಯದ ನಾಯಕನನ್ನು ಸಂಸತ್ ನಲ್ಲಿ ಅನರ್ಹಗೊಳಿಸಿರುವುದು ಎಷ್ಟು ಸರಿ ಎಂದು ಬಿಜೆಪಿಯವರೇ ಪ್ರಶ್ನಿಸಿಕೊಳ್ಳಬೇಕಿದೆ. ಇದನ್ನು ಖಂಡಿಸಲಿದೆ ಎಂದು ಹೇಳಿದ್ದಾರೆ.
ಮೀಸಲಾತಿ ಹೆಚ್ಚಳ
ಎಸ್ಸಿ ಒಳ ಮೀಸಲಾತಿ ನೀಡಿರುವ ಬಗ್ಗೆ ಒಂದು ಕಡೆ ಖುಷಿ ಮೂಡಿದರೆ ಮತ್ತೊಂದು ಕಡೆ ಆತಂಕವೂ ಇದೆ ಏಕೆಂದರೆ ಎಸ್ಸಿ/ಎಸ್ಟಿ ಮೀಸಲಾತಿಯನ್ನು ಹೆಚ್ಚಳ ಮಾಡಿ 4 ತಿಂಗಳು ಕಳೆದರೂ ಅದು ಜಾರಿಗೆ ಬಂದಿಲ್ಲ.
ಷೆಡ್ಯೂಲ್ 9ರಲ್ಲಿ ಸೇರಿಸಿಲ್ಲ. ಸಂಸತ್ ನಲ್ಲಿ ಈ ಬಗ್ಗೆ ರಾಜ್ಯದಿಂದ ಪ್ರಸ್ತಾವನೆ ಬಂದಿಲ್ಲ ಎಂದು ಹೇಳಿದೆ. ಮೀಸಲಾತಿ ಜಾರಿಗೆ ತರುವ ಮುನ್ನವೇ ಹಂಚಿಕೆ ಮಾಡಿರುವುದು ದುರದೃಷ್ಟಕರ. ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದಾರೆ. ಇದೆಲ್ಲಾ ಚುನಾವಣೆ ತಂತ್ರವಾಗಿದೆ. ಅವರಿಗೆ ಈ ರೀತಿ ಮಾಡುವ ಉದ್ದೇಶವಿದ್ದರೆ ಸುಗ್ರೀವಾಜ್ಞೆ ಮೂಲಕ ಮೊದಲೇ ಮಾಡಬೇಕಾಗಿತ್ತು.
ಮತಗಳ ಮೇಲೆ ಈ ರೀತಿ ಮಾಡುವುದು ಜನಗಳಿಗೆ ತಿಳಿಯಲಿದೆ. ಈಗ ಘೋಷಣೆ ಮಾಡಿರುವುದು ಜಾರಿಯಾಗುವ ಬಗ್ಗೆ ಅನುಮಾನ ಇದೆ ಎಂದು ಹೇಳಿದ್ದಾರೆ.