ಲಂಡನ್/ ನವದೆಹಲಿ,ಮಾ.೩೦- ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿ ಮಾನನಷ್ಟ ಪ್ರಕರಣದಡಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಸಂಸದ ಸ್ಥಾನ ಕಳೆದುಕೊಂಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ದ ಪರಾರಿಯಾಗಿರುವ ಉದ್ಯಮಿ ಲಲಿತ್ ಮೋದಿ ಪ್ರಕರಣ ಹೂಡಲು ಮುಂದಾಗಿದ್ದಾರೆ.
ಇಂಗ್ಲೆಂಡ್ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ವಿರುದ್ದ ದಾವೆ ಹೂಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲಲಿತ್ ಮೋದಿ ವಿರುದ್ದ ರಾಹುಲ್ ಗಾಂಧಿ ಅವರು ಮೇಲೆ ಕಟು ಟೀಕೆ ಮಾಡಿದ ಹಿನ್ನೆಲೆಯಲ್ಲಿ
ಅವರ ವಿರುದ್ಧ ವಾಗ್ದಾಳೀ ನಡೆಸಿದ್ದಾರೆ. “ಮೋದಿ ಉಪನಾಮದ ಬಳಕೆ ಹಿನ್ನೆಲೆಯಲ್ಲಿ ಈ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಲಲಿತ್ ಮೋದಿ ಅವರು ಯಾವ ಆಧಾರದ ಮೇಲೆ ತಮ್ಮನ್ನು “ಪರಾರಿ”ಯಾದವ ಎಂದು ಹೆಸರಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ
ತಾವು ಯಾವುದೇ ಶಿಕ್ಷೆಗೆ ಗುರಿಯಾಗಿಲ್ಲ ಹೀಗಿದ್ದರೂ ತಮ್ಮ ಮೇಲೆ ಮಾಡಿರುವ ಆರೋಪ ಸರಿ ಇಲ್ಲ. ಹೀಗಾಗಿ ಇಂಗ್ಲೆಂಡ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ದ ಇಂಗ್ಲೆಂಡ್ ನ್ಯಾಯಾಲಯದಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದೇನೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಟ್ಯಾಗ್ ಮಾಡಿರುವ ಟ್ವಿಟ್ ನಲ್ಲಿ ತಿಳಿಸಿದ್ದಾರೆ.
“ವಿಳಾಸ ಮತ್ತು ಫೋಟೋಗಳು ಇತ್ಯಾದಿಗಳನ್ನು ಕಳುಹಿಸಬಲ್ಲೆ. ನಿಜವಾದ ಮೋಸಗಾರರುವ ಭಾರತದ ಜನರನ್ನು ಮರುಳು ಮಾಡಬಾರದ ನೀವು ಕಠಿಣ ಹೊಣೆಗಾರಿಕೆಯ ಕಾನೂನುಗಳನ್ನು ಜಾರಿಗೊಳಿಸಿದ ತಕ್ಷಣ ನಾನು ಭಾರತಕ್ಕೆ ಹಿಂದಿರುಗುತ್ತೇನೆ ಎಂದಿದ್ದಾರೆ.
“ಕಳೆದ ೧೫ ವರ್ಷಗಳಲ್ಲಿ ತೆಗೆದುಕೊಂಡ ಒಂದು ಪೈಸೆಯೂ ಸಾಬೀತಾಗಿಲ್ಲ. ಆದರೆ ಸ್ಪಷ್ಟವಾಗಿ ಸಾಬೀತಾಗಿರುವ ವಿಷಯವೆಂದರೆ ನಾನು ಈ ಜಗತ್ತಿನಲ್ಲಿ ೧೦೦ ಶತಕೋಟಿ ಡಾಲರ್‌ಗಳಷ್ಟು ಹಣವನ್ನು ಗಳಿಸಿದ ಶ್ರೇಷ್ಠ ಕ್ರೀಡಾಕೂಟವನ್ನು ರಚಿಸಿದ್ದೇನೆ ಎನ್ನುವುದನ್ನು ಮರೆಯಬಾರದು ಎಂದಿದ್ದಾರೆ.
೨೦೧೯ ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಉಪನಾಮದ ಬಗ್ಗೆ ರಾಹುಲ್ ಗಾಂಧಿ ಆರೋಪಿಸಿದ್ದರು.ಈ ಹಿನ್ನೆಲೆಯಲ್ಲಿ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಸೂರತ್ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಎರಡು ವರ್ಷಗಳ ಶಿಕ್ಷೆ ವಿಧಿಸಿದ ಕೆಲವೇ ದಿನಗಳಲ್ಲಿ ಲಲಿತ್ ಮೋದಿ ಅವರು ಇದೀಗ ರಾಹುಲ್ ಗಾಂಧಿ ವಿರುದ್ದ ದೂರು ದಾಖಲಿಸಲು ಮುಂದಾಗಿದ್ದಾರೆ.