ರಾಹುಲ್ ವಿರುದ್ದ ಜೋಷಿ ವಾಗ್ದಾಳಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.07: ಎಐಸಿಸಿ ಮುಖಂಡ ರಾಹುಲ್ ಗಾಂಧಿ ವಿರುದ್ದ  ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ
ಅವರಿಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ. ರಾಹುಲ್ ಗಾಂಧಿ ಇಂಗ್ಲೆಂಡ್ ಅಮೇರಿಕ ಅಂತಾ ಓಡಾಡುತ್ತಿದ್ದಾರೆ. ಅಲ್ಲಿ ಅತ್ಯಂತ ಬಾಲಿಶವಾಗಿ ಮಾತನಾಡಿದ್ದಾರೆ.‌ ನಮ್ಮ ಮೈಕ್ ಗಳು ಅಪ್ ಆಗ್ತಾ ಇವೆ ಅಂದಿದ್ದಾರೆ. ಆದರೇ ಜನರೇ ಅವರ ಮೈಕ್ ಗಳನ್ನ ಆಪ್ ಮಾಡಿದ್ದಾರೆಂದರು.
ಇತ್ತೀಚೆಗೆ ಅವರು ಲೋಕಸಭೆಯಲ್ಲಿ 1 ಗಂಟೆ 9 ನಿಮಿಷ ಮಾತನಾಡಲು ಸಮಯ ನೀಡಿತ್ತು ಆದರೆ  ಸ್ವೀಕ್ಪರ್ ಅವರು 2  ಗಂಟೆ ಟೈಂ ನೀಡಿದ್ದರೂ ವಿನಾಕಾರಣ ಬಿಜೆಪಿ ಮೇಲೆ ಆರೋಪ ಮಾಡುವುದು ಅವರಿಗೆ ಚಾಳಿ ಆಗಿದೆ.
ಪ್ರಜ್ಞಾಪ್ರಭುತ್ವದ ಬಗ್ಗೆ ಮಾತನಾಡುವ ಅವರ ಅಜ್ಜಿ ಇಂದಿರಾಗಾಂಧಿ ದೇಶದಲ್ಲಿ ಹಾಕಿದ ತುರ್ತು ಪರಿಸ್ಥಿತಿ ಜಾರಿ ಮಾಡಿದ್ದು ಮರೆತಿದ್ದಾರೆ.
ರಾಹುಲ್ ಗಾಂಧಿಯವರಿಗೆ ಮಾನಸಿಕ ತೊಂದರೆ ಇದ್ದಂತೆ.  ಒಂದು ರೀತಿ ಮೆಂಟಲೀ ತೊಂದರೆ ಇರೋ ಕಾಣ್ತಿದೆ.
ಅವರು ಡಾಕ್ಟರ್ ಕಡೆ ತೋರಿಸಬೇಕು ಅಂತಾ ನನ್ನ ಬಾಯಲ್ಲಿ ಹೇಳಿಸಬೇಡಿ ಎಂದರು.
ಅವರು ಇಡೀ ಮಂತ್ರಿಮಂಡಲ ಜಾರಿ ಮಾಡಿದ ನಿರ್ಣಯಗಳನ್ನು ಹರಿದು ಹಾಕಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆಂದರು.
ರಾಹುಲ್ ಗಾಂಧಿ ವಿದೇಶದಲ್ಲಿ ಭಾಷಣ ಮಾಡಿದ ವೇಳೆ ಉಗ್ರಗಾಮಿಗಳನ್ನ ಭೇಟಿ ಮಾಡಿದ ಬಗ್ಗೆ ಹೇಳಿದ್ದಾರೆ ಅವರು ಏನು ನಿಮ್ಮ ಕಾಕಾನಾ..? ನಿಮ್ಮನ್ನ ಯಾಕೆ ಬಿಟ್ಟು ಹೋದ್ರು.. ಭಯೋತ್ಪಾದಕರ ಜೊತೆ ನಿಮ್ಮ ಸಂಬಂಧ ಒಳ್ಳೆಯದು ಇದೆ ಅಂದ್ರೆ ನಿಮ್ಮ ತಂದೆಯ ಸಂಬಂಧ ಸರಿ ಇರಲಿಲ್ವಾ ಎಂದು ಪ್ರಶ್ನಿಸಿದರು.
ಭಾರತ ಜೋಡೋ ವೇಳೆ ಭಯೋತ್ಪಾದಕರು ಗಮನಿಸಿದ್ರೆ ಇವರು ಯಾಕೆ ದೂರು ಕೊಡಲಿಲ್ಲವೆಂದರು.
 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ ವಿಚಾರ
ಯಡಿಯೂರಪ್ಪ ನವರು ಪಕ್ಷದಲ್ಲಿ ಹಿರಿಯರು. ಪಾರ್ಲಿಮೆಂಟ್ ಬೋರ್ಡ್ ನಲ್ಲಿದ್ದಾರೆ. ಅವರಿಗೆ ಮಾಹಿತಿ ಇರಬಹುದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸೂಕ್ತ ಸಮಯದಲ್ಲಿ ಆಗುತ್ತೆ. ಚುನಾವಣೆ ಘೋಷಣೆ ಆದ ಕೂಡಲೇ‌ ಪಟ್ಟಿ ಬಿಡುಗಡೆ ಮಾಡುತ್ತೇವೆಂದರು.
 ಪಕ್ಷ ತೀರ್ಮಾನಿಸಲಿದೆ.
ಶಾಸಕ ಮಾಡಳ್ ಗೆ ಜಾಮೀನು ವಿಚಾರ ಅವರಿಗೆ ಬೇಲ್ ಸಿಕ್ಕಿದ್ದರಿಂದ ಒಳ್ಳೆಯದಾಗಲಿ ಇದರ ಬಗ್ಗೆ ನಮ್ಮ ಪಕ್ಷ ಸೂಕ್ತ ತನಿಖೆ ನಡೆಸುತ್ತಿದೆ
ರಾಷ್ಟ್ರೀಯ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಅವರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಅವರ ವಿರುದ್ದ ಕ್ರಮ‌ ಕೈಗೊಳ್ಳುವ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆಂದರು.