ರಾಹುಲ್ ಯುರೋಪ್ ಪ್ರವಾಸ ಭಾರತೀಯರ ಜತೆ ಸಂವಾದ

ನವದೆಹಲಿ,ಸೆ.೬- ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದಿನಿಂದ ಯುರೋಪ್ ಪ್ರವಾಸ ಕೈಗೊಂಡಿದ್ದು, ವಿದ್ಯಾರ್ಥಿಗಳು, ಭಾರತೀಯ ಸಮುದಾಯ ಸೇರಿದಂತೆ ಸಂಸದರನ್ನು ಭೇಟಿ,ಸಂವಾದ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಒಂದು ವಾರದ ಅವಧಿಯ ಯುರೋಪ್ ಪ್ರವಾಸದಲ್ಲಿ ರಾಹುಲ್ ಗಾಂಧಿ ಅವರು ಯುರೋಪಿಯನ್ ಯೂನಿಯನ್ ವಕೀಲರು, ವಿದ್ಯಾರ್ಥಿಗಳು ಮತ್ತು ಭಾರತೀಯ ವಲಸೆಗಾರರನ್ನು ಭೇಟಿ ಮಾಡಿ ಸಂವಾದ ನಡೆಸಲಿದ್ದಾರೆ

ನಾಳೆ ಬ್ರಸೆಲ್ಸ್‌ನಲ್ಲಿ ಯುರೋಪಿಯನ್ ಒಕ್ಕೂಟದ ವಕೀಲರ ಗುಂಪನ್ನು ಭೇಟಿಯಾಗಲಿದ್ದಾರೆ ಮತ್ತು ಹೇಗ್‌ನಲ್ಲಿ ಇದೇ ರೀತಿಯ ಸಭೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ

ಸೆಪ್ಟೆಂಬರ್ ೮ ರಂದು ಪ್ಯಾರಿಸ್‌ನ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ಯಾರಿಸ್‌ನಲ್ಲಿ ಲೇಬರ್ ಯೂನಿಯನ್ ಆಫ್ ಫ್ರಾನ್ಸ್ ಸದಸ್ಯರನ್ನು ಸೆ.೯ ರಂದು ಭೇಟಿ ಮಾಡಲಿದ್ದು ಆ ಬಳಿಕ ನಾರ್ವೆಗೆ ತೆರಳಲಿದ್ದಾರೆ.

ಓಸ್ಲೋದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದು ಈ ಎಲ್ಲಾ ಭೇಟಿ ರಾಹುಲ್ ಗಾಂಧಿ ಅವರಿಗೆ ಮಹತ್ವದದ್ದಾಗಿದೆ.

ದೆಹಯಲಿಯಲ್ಲಿ ಸೆ.೯ ಮತ್ತು ೧೦ ರಂದು ಜಿ-೨೦ ಶೃಂಗಸಭೆ ಮುಗಿದ ಒಂದು ದಿನದ ನಂತರ ರಾಹುಲ್ ಗಾಂಧಿಯವರು ಸೆಪ್ಟೆಂಬರ್ ೧೧ ರೊಳಗೆ ದೆಹಲಿಗೆ ಹಿಂದಿರುಗುವ ಸಾಧ್ಯತೆಯಿದೆ.

ಯುರೋಪ್ ಪ್ರವಾಸದ ವೇಳೆ ರಾಹುಲ್ ಗಾಂಧಿ ಅವರು ಹಲವು ಉನ್ನತ ನಾಯಕರು, ವಿದ್ಯಾರ್ಥಿಗಳು, ಸಂಸದರು ಮತ್ತು ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.