ರಾಹುಲ್ ಬೆಂಬಲಿಸಿ ಕಾಂಗ್ರೆಸ್ ಧರಣಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.12: ಎಐಸಿಸಿ ನಾಯಕರಾಹುಲ್ ಗಾಂಧಿ ಅವರ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬುದನ್ನು  ವಿರೋಧಿಸಿ ಇಂದು ನಗರದ ವಿಮ್ಸ್ ಮುಂಭಾಗದ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್ ನ ಮುಖಂಡರು, ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.
ರಾಹುಲ್ ಗಾಂಧಿ ಅವರಿಗೆ ನೀಡಿರುವ ಶಿಕ್ಷೆ ಮತ್ತು ಅನರ್ಹತೆಯನ್ನು ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಇಡೀ ರಾಷ್ಟ್ರವೇ ಖಂಡಿಸುತ್ತದೆ ಮತ್ತು ಅವರ ಹೋರಾಟದ ಪರವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದೆ.  ರಾಹುಲ್ ಗಾಂಧಿ ಅವರು ಏಕಾಂಗಿಯಲ್ಲ, ಅಪಾರ ಕಾಂಗ್ರೆಸ್ಸಿಗರು ಬಳಗ ಮತ್ತು ಕೋಟ್ಯಂತರ ಜನರು ಅವರ ರಾಜಕೀಯ ಸಂಬಂಧಗಳನ್ನು ಲೆಕ್ಕಿಸದೆ ಸತ್ಯ ಮತ್ತು ನ್ಯಾಯಕ್ಕಾಗಿ  ಹೋರಾಟದಲ್ಲಿ ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಧರಣಿ ನಡೆಸಿದರು.
ಬೆಳಗ್ಗೆ 10 ರಿಂದ ಸಂಜೆ 05.00 ಗಂಟೆಯವರೆಗೆ ಜ ನಡೆಸಲಾಯ್ತು.

One attachment • Scanned by Gmail