ರಾಹುಲ್ ಪ್ರಚೋದನೆ ವಿರುದ್ದ ಬಿಜೆಪಿ ಪ್ರತಿಭಟನೆ

ಕೋಲಾರ,ಡಿ,೨೨-ರಾಜ್ಯಸಭಾ ಸಭಾಪತಿ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಕುರಿತು ಟಿ.ಎಂ.ಸಿ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಅವರು ವಿಪಕ್ಷಗಳ ಪ್ರತಿಭಟನೆಯ ಸಂದರ್ಭದಲ್ಲಿ ಅಣುಕು ಪ್ರದರ್ಶನ ನೀಡಿದ್ದನ್ನು ಕಾಂಗ್ರೇಸ್ ಮುಖಂಡ ರಾಹುಲ್ ಗಾಂಧಿಯವರು ವಿಡೀಯೋ ಚಿತ್ರೀಕರಿಸಿ ಸಾಮಾಜೀಕ ಜಾಲತಾಣದಲ್ಲಿ ಹರಿಯ ಬಿಡುವ ಮೂಲಕ ಅಪಮಾನ ಮಾಡಿರುವುದನ್ನು ದುರಂತದ ಘಟನೆಯಾಗಿದೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವೇಣುಗೋಪಾಲ್ ತೀವ್ರವಾಗಿ ಖಂಡಿಸಿದರು,
ನಗರದ ಕೆ.ಎಸ್.ಆರ್.ಟಿ. ಬಸ್ ನಿಲ್ದಾಣದಲ್ಲಿ ಜಿಲ್ಲಾ ಬಿಜಿಪಿ ಪಕ್ಷದ ವತಿಯಿಂದ ಆಯೋಜಿಸಿದ್ದ ರಸ್ತೆ ತಡೆ ಪ್ರತಿಭಟನೆಯಲ್ಲಿ ಅವರು ಮಾತನಾಡಿ ಸಂಸತ್ತಿನಲ್ಲಿ ಭದ್ರತಾ ಲೋಪದ ಬಗ್ಗೆ ಗೃಹ ಸಚಿವರಿಂದ ಹೇಳಿಕೆಗೆ ಒತ್ತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೧೪೧ ಮಂದಿ ಸಂಸದರು ಅಮಾನತ್ತು ಪಡೆಸಲಾಗಿತ್ತು. ಇದನ್ನು ವಿರೋಧಿಸಿ ಸಂಸತ್ ಮೆಟ್ಟಿಲುಗಳ ಮೇಲೆ ವಿಪಕ್ಷದ ಸಂಸದರು ನಡೆಸಿದ ಪ್ರತಿಭಟನೆಯಲ್ಲಿ ಕಲ್ಯಾಣ್ ಬ್ಯಾನರ್ಜಿ ಅವರು ಉಪರಾಷ್ಟ್ರಪತಿಗಳ ಅಣುಕು ಪ್ರದರ್ಶನವನ್ನು ನೀಡಿದರು, ರಾಹುಲ್ ಗಾಂಧಿಯವರು ಇದನ್ನು ಉತ್ತೇಜಿಸುವ ದೆಸೆಯಲ್ಲಿ ವಿಡಿಯೋ ಮಾಡಿರುವುದು ಸಂವಿಧಾನ ವಿರೋಧ ಚಟುವಟಿಕೆಯಾಗಿದೆ. ಇದೊಂದು ಪ್ರಜಾ ಪ್ರಭುಪ್ರಭುತ್ವ ವಿರೋಧಿ ಧೋರಣೆಯಾಗಿದೆ ಎಂದು ಆರೋಪಿಸಿದರು,
ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಹಿಂದುಳಿದ ವರ್ಗಕ್ಕೆ ಸೇರಿದ ರೈತರ ಹಿನ್ನಲೆ ಹೊಂದಿರುವ ಜಾಟ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅವರ ಸಮುದಾಯವನ್ನು ಅಪಮಾನಿಸುವ ಹಿನ್ನಲೆಯಲ್ಲಿ ಈ ಕೃತ್ಯವನ್ನು ಮಾಡಿರುವುದು ಖಂಡನೀಯವಾಗಿದೆ ಎಂದು ದೂರಿದರು,
ಕಾಂಗ್ರೇಸ್ ಪಕ್ಷವು ರಾಜ್ಯದಲ್ಲಿ ಪೊಳ್ಳು ಭರವಸೆಗಳನ್ನು ನೀಡಿ ಆಡಳಿತದ ಚುಕ್ಕಾಣಿ ಹಿಡಿದಂತೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಇದೇ ತಂತ್ರವನ್ನು ಬಳಿಸುವ ಮೂಲಕ ಮುಖಭಂಗ ಅನುಭವಿಸಿದೆ ಮೋದಿ ಅವರ ಮೇಲಿನ ಗ್ಯಾರೆಂಟಿ ಮುಂದೆ ಕಾಂಗ್ರೇಸ್ ಗ್ಯಾರೆಂಟಿಗಳು ನೆಲ ಕಚ್ಚುವಂತಾಗಿದೆ. ಇದು ಮುಂಬರಲಿರುವ ಲೋಕ ಸಭಾ ಚುನಾವಣೆಯ ದಿಕ್ಸೂಚಿಯಾಗಿದೆ ಎಂದರು,
ಮೊನ್ನೆ ಪಂಚರಾಜ್ಯಗಳ ಮ್ಯಾಚ್‌ನ ಸೆಮಿಫೈನಲ್ ಆಟದಲ್ಲಿ ಬಿಜೆಪಿ ಪಕ್ಷವು ವಿನ್ ಅಗಿದೆ. ಮುಂದೆ ಬರಲಿರುವ ಲೋಕಸಭೆಯ ಪೈನಲ್ ಆಟದಲ್ಲಿ ಇದೇ ಫಲಿತಾಂಶ ಬಿಜೆಪಿ ಬರಲಿದೆ, ಮೂರನೇ ಭಾರಿ ನರೇಂದ್ರ ಮೋದಿಯವರು ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು,
ರಾಜ್ಯ ಯುವ ಮೋರ್ಚಾ ಓಂ ಶಕ್ತಿ ಚಲಪತಿ ಮಾತನಾಡಿ ರಾಹುಲ್ ಗಾಂಧಿಯವರು ರಾಷ್ಟ್ರದ ಗೌರವನಿತರನ್ನು ಓರ್ವ ಸಂಸದ ಅಣಿಕಿಸುವ ಪ್ರದರ್ಶನ ನೀಡುತ್ತಿರುವುದನ್ನು ವಿರೋಧಿಸಿ ಅವರಿಗೆ ತಿಳಿ ಹೇಳುವ ಬದಲು ಮೊಬೈಲ್‌ನಲ್ಲಿ ಸೆರೆ ಹಿಡಿಯುವ ಮೂಲಕ ಪ್ರಚೋದನೆ ಮಾಡಿರುವುದು ಅಪರಾಧವಾಗಿದೆ. ಉಪರಾಷ್ಟ್ರ ಪತಿಗಳಿಗೆ ಅಗಿರುವ ಅವಮಾನ ರಾಷ್ಟ್ರಕ್ಕೆ ಅವಮಾನವಾದಂತೆ ಹಾಗಾಗಿ ಕಾಂಗ್ರೇಸ್ ಪಕ್ಷದ ರಾಹುಲ್ ಗಾಂಧಿ ವಿರುದ್ದ ಕ್ರಮ ಕೈಗೊಳ್ಳ ಬೇಕೆಂದು ಆಗ್ರಹ ಪಡೆಸಿದರು.
ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಭಾವಚಿತ್ರದ ಫ್ಲೆಕ್ಸಿಗೆ ಬೆಂಕಿ ಹಚ್ಚುವ ಮೂಲಕ ಅಕ್ರೋಶ ವ್ಯಕ್ತ ಪಡೆಸಿ ರಾಹುಲ್ ಗಾಂಧಿ ವಿರುದ್ದ ಘೋಷಣೆಗಳನ್ನು ಕೊಗಿದರು,
ಆಗಾ ಸ್ಥಳದಲ್ಲಿದ್ದ ಪೊಲೀಸರು ರಾಹುಲ್ ಗಾಂಧಿ ಭಾವಚಿತ್ರಕ್ಕೆ ಬೆಂಕಿ ಹಚ್ಚುವುದನ್ನು ತಡೆಯಲು ಯತ್ನಿಸಿದಾಗ ಬಿಜೆಪಿ ಮುಖಂಡರು ತೀವ್ರವಾಗಿ ವಿರೋಧಿಸುವ ಮೂಲಕ ಮಾತಿನ ಚಕಮಕಿಗಳು ನಡೆಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ಕೃಷ್ಣಮೂರ್ತಿ, ಸಿ.ಡಿ.ರಾಮಚಂದ್ರ, ವಿಜಯಕುಮಾರ್, ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್ ಓಹೀಲೇಶ್, ಸತ್ಯನಾರಾಯಣರಾವ್, ತಿಮ್ಮರಾಯಪ್ಪ, ಮಮತಮ್ಮ, ಯುವ ಮೋರ್ಚಾ ಬಾಲಾಜಿ, ಗೋವಿಂದಸ್ವಾಮಿ, ಬಾಲಾಜಿ, ಶ್ರೀನಿವಾಸಪ್ಪ ಭಾಗವಹಿಸಿದ್ದರು,