ರಾಹುಲ್ ಪಾದಯಾತ್ರೆ ಇಲ್ಲದ ರಾಜ್ಯಗಳಲ್ಲಿ ಕಾಂಗ್ರೆಸ್ ಯಾತ್ರೆ

ಹೈದರಾಬಾದ್‌ನ೨:ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ಸಂಚರಿಸಲು ಸಾಧ್ಯವಾಗದ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಯಾತ್ರೆ ನಡೆಸಲು ಕಾಂಗ್ರೆಸ್ ಮುಂದಾಗಿದೆ.
ಈ ಮೂಲಕ ಯಾತ್ರೆಯ ಆಶಯವನ್ನು ಎಲ್ಲ ರಾಜ್ಯಗಳ ಜನರಿಗೂ ತಲುಪಿಸುವುದು ಕಾಂಗ್ರೆಸ್ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಜೈರಾಂ ರಮೇಶ್ ತಿಳಿಸಿದ್ದಾರೆ.
ಯಾತ್ರೆ ಈಗಾಗಲೇ ೫೫ ದಿನ ಪೂರೈಸಿದೆ. ಹೈದರಾಬಾದ್ ಮೂಲಕ ಯಾತ್ರೆ ಸಾಗಿದೆ. ಮುಂದೆ ತೆಲಂಗಾಣವನ್ನು ದಾಟಿ ಯಾತ್ರೆ ಸಾಗಲಿದೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ೧೨ ರಾಜ್ಯಗಳ ಮೂಲಕ ಭಾರತ್ ಜೋಡೊ ಯಾತ್ರೆ ಸಾಗುತ್ತಿದೆ. ಯಾತ್ರೆಗಾಗಿ ಗೊತ್ತುಪಡಿಸಿದ ಮಾರ್ಗ ಹೊರತುಪಡಿಸಿ, ಇತರ ರಾಜ್ಯಗಳಿಗೆ ಯಾತ್ರೆ ತೆರಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಲ್ಲಿ ಪ್ರತ್ಯೇಕವಾಗಿ ಯಾತ್ರೆ ನಡೆಸಿ ಜನರನ್ನು ಸಂಘಟಿಸಲು ಉದ್ದೇಶಿಸಲಾಗಿದೆ ಎಂದು ಜೈರಾಂ ರಮೇಶ್ ಹೇಳಿದ್ದಾರೆ.