ರಾಹುಲ್ ನ್ಯಾಯ ಯಾತ್ರೆ ತಡೆ ಬಿಜೆಪಿ ವಿರುದ್ಧ ಕೈ ಪ್ರತಿಭಟನೆ

ರಾಯಚೂರು, ಜ.೨೩-ಭಾರತ ಜೋಡೋ ನ್ಯಾಯ ಯಾತ್ರೆ ಅಸ್ಸಾಂ ರಾಜ್ಯದಲ್ಲಿ ಪ್ರವೇಶ ಮಾಡುತ್ತಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಸಂಚಾರಿಸುವ ಬಸ್ ತಡೆಹಿಡಿದ ಬಿಜೆಪಿ ಗುಂಡಾ ವರ್ತನೆ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು.
ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರ ಬಿಜೆಪಿ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟಿಸಿದರು.ಅಸ್ಸಾಂ ರಾಜ್ಯದ ಶಂಕರ
ದೇಗುಲ ಪ್ರವೇಶಕ್ಕೆ ರಾಹುಲ್ ಗಾಂಧಿಯನ್ನು ನಿರಾಕರಿಸಿದ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಬಿಜೆಪಿ ಸರಕಾರ ಪ್ರಜಾಪ್ರಭುತ್ವ ಹಕ್ಕುಗಳನ್ನು ಕಸಿದು ಸರ್ವಾಧಿಕಾರಿ ನಡೆಸುತ್ತಿದೆ ಎಂದು ದಿಕ್ಕಾರ ಕೂಗಿದರು.
ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಗುಂಡಾ ದೌರ್ಜನ್ಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಗೊಂಡಿತು.
ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ನ್ಯಾಯ ಯಾತ್ರೆಯನ್ನು ಅಸ್ಸಾಂನ ಪೊಲೀಸರು ಸುಮಾರು ಎರಡು ಗಂಟೆ ತಡೆಹಿಡಿದಿದ್ದರು.೧೫ನೇ ಶತಮಾನದ ಸಂತ, ಸಮಾಜ ಸುಧಾರಕ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳವಾದ ಬರ್ದೋವಾದಿಂದ ಕೆಲವೇ ಕಿ.ಮೀ ದೂರದಲ್ಲಿ ಪೊಲೀಸರು ನ್ಯಾಯಯಾತ್ರೆಯನ್ನು ತಡೆಹಿಡಿದ ಬಿಜೆಪಿ ಗುಂಡಾ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.
ಮಣಿಪುರದಿಂದ ಜನವರಿ ೧೪ರಂದು ಆರಂಭವಾಗಿದ್ದ, ೬೭ ದಿನದ ಈ ನ್ಯಾಯ ಯಾತ್ರೆಯು ಎರಡು ದಿನದ ಅರುಣಾಚಲ ಪ್ರದೇಶದ ಭೇಟಿ ಬಳಿಕ ಭಾನುವಾರವಷ್ಟೇ ಅಸ್ಸಾಂ ರಾಜ್ಯವನ್ನು ಪ್ರವೇಶಿಸಿತ್ತು. ಈ ವೇಳೆ ಬಿಜೆಪಿ ಗುಂಡಾಗಳು ರಾಹುಲ್ ಗಾಂಧಿಯನ್ನು ದೇಗುಲ ಪ್ರವೇಶ ಮಾಡದಂತೆ ತಡೆಹಿಡಿಯಲಾಗಿದೆ ಎಂದು ಬಿಜೆಪಿ ಗುಂಡಾ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಾರಸ್ಮಲ್ ಸುಖಾಣಿ, ಜಯಣ್ಣ, ಶಾಂತಪ್ಪ, ದರೂರ್ ಬಸವರಾಜ್ ಪಾಟೀಲ್, ಅಮರೇಗೌಡ ಹಂಚಿನಾಳ, ಅಂಜನೇಯ ಕುರುಬದೊಡ್ಡಿ, ತಾಯಣ್ಣ ನಾಯಕ, ಜಯಂತ್‌ರಾವ್ ಪತಂಗೆ, ಜಿ.ಶಿವಮೂರ್ತಿ, ಅರುಣ್ ದೋತರಬಂಡಿ, ರಾಣಿ ರಿಚರ್ಡ್, ಸುಧಾಮ, ಬಸವರಜ ಪಾಟೀಲ್ ಅತ್ತನೂರು, ರಮೇಶ ಯಾದವ್, ನಾಗವೇಣಿ ಸೇರಿದಂತೆ ಇನ್ನಿತರ ಕಾರ್ಯಕರ್ತರು ಇದ್ದರು.