ರಾಹುಲ್ ದ್ರಾವಿಡ್ ಅನುಭವ ತಂಡಕ್ಕೆ ಸಹಕಾರಿ:ಪೂಜಾರ

ಕಾನ್ಪುರ, ನ.23-ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರಾಗಿ ನೇಮಕಗೊಂಡಿರುವ ರಾಹುಲ್ ದ್ರಾವಿಡ್ ಅವರ ಅನುಭವ ತಂಡದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಭಾರತ ತಂಡದ ಟೆಸ್ಟ್ ಕ್ರಿಕೆಟ್‌ನ ಬ್ಯಾಟರ್ ಚೇತೇಶ್ವರ ಪೂಜಾರ ಹೇಳಿದ್ದಾರೆ.
ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ನಲ್ಲಿ ಭಾರತ ಆಘಾತ ಅನುಭವಿಸಿತ್ತು. ಆದರೆ ಇಂಗ್ಲೆಂಡ್‌ನಲ್ಲಿ ಉತ್ತಮ ಪ್ತದರ್ಶನ ನೀಡುವ ಮೂಲಕ ಪ್ರಬಲ ಆಟಕ್ಕೆ ಮರಳಿದೆವು. ಈಗ ಮತ್ತೆ ಒಂದಾಗಿದ್ದೇವೆ. ಆತ್ಮವಿಶ್ವಾಸದ ಜತೆಗೆ ನೂತನ ಕೋಚ್ ದ್ರಾವಿಡ್ ನಮ್ಮೊಂದಿಗಿದ್ದಾರೆ ಎಂದು ಹೇಳಿದರು.
164 ಟೆಸ್ಟ್ ಪಂದ್ಯಗಳನ್ಬಾಡಿರುವ ದ್ರಾವಿಡ್ ಅಪಾರ ಅನುಭವ ಹೊಂದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ತಾವು ರಾಹುಲ್ ಅವರೊಂದಿಗೆ ಆಡಿದ್ದೇನೆ. ಭಾರತ ಎ ಸರಣಿಯಲ್ಲೂ ಅವರ ಜತೆ ಕೆಲಸ ಮಾಡಿದ್ದೇನೆ. ನಾವೆಲ್ಲರೂ ಅವರ ಮಾರ್ಗದರ್ಶ ನಕ್ಕಾಗಿ ಎದುರು ನೋಡುತ್ತಿದ್ದೇವೆ ಎಂದರು.
ನ್ಯೂಜಿಲೆಂಡ್ ವಿರುದ್ದ ನ.25ರಿಂದ ಆರಂಭ ವಾಗುವ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದೇವೆ. ಅದರಲ್ಲೂ ಕಿವೀಸ್ ನ ವೇಗದ ಬೌಲರ್ ನೀಲ್ ವ್ಯಾಗ್ನರ್ ವಿರುದ್ಧ ರಣತಂತ್ರಗಳನ್ನು ರೂಪಿಸಿರುವುದಾಗಿ ಮೊದಲ ಟೆಸ್ಟ್ ಪಂದ್ಯಕ್ಕೆ ನಾಯಕನಾಗಿರವ ಪೂಜಾರ ಹೇಳಿದರು.