ರಾಹುಲ್ ಜೊತೆ ಗಾಂಧಿ ಮರಿ ಮೊಮ್ಮಗ ಹೆಜ್ಜೆ

ಮಹಾರಾಷ್ಟ್ರ, ನ. ೧೮- ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಶೇಗಾಂವ್‌ನಲ್ಲಿ ಕೈನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರು ಹೆಜ್ಜೆಹಾಕುವ ಮೂಲಕ ಹೊಸ ಹುರುಪು ತಂದುಕೊಂಡಿದ್ದಾರೆ.
ಇಂದು ಬೆಳಗ್ಗೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ನಡೆಯುತ್ತಿದ್ದ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ. ಅವರು ಕೂಡಿಕೊಂಡರು. ಅವರ ಭಾಗವಹಿಸುವಿಕೆಯನ್ನು ಐತಿಹಾಸಿಕ ಎಂದು ಕಾಂಗ್ರೆಸ್ ಶ್ಲಾಘಿಸಿದೆ.
ಮಹಾರಾಷ್ಟ್ರದ ಮೂಲಕ ಹಾದುಹೋಗುವ ಯಾತ್ರೆಯು ಅಕೋಲಾ ಜಿಲ್ಲೆಯ ಬಾಲಾಪುರದಿಂದ ಬೆಳಿಗ್ಗೆ ೬ ರ ಸುಮಾರಿಗೆ ದಿನದ ಪ್ರಯಾಣವನ್ನು ಪುನರಾರಂಭಿಸಿತು. ಕೆಲವು ಗಂಟೆಗಳ ನಂತರ ಶೆಗಾಂವ್ ತಲುಪಿತು, ಅಲ್ಲಿ ಲೇಖಕ ಮತ್ತು ಕಾರ್ಯಕರ್ತ ತುಷಾರ್ ಗಾಂಧಿ ರಾಹುಲ್ ಜೊತೆ ಸೇರಿಕೊಂಡು ಪಾದಯಾತ್ರೆ ಮಾಡಿದರು.
ಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧಿಯವರ ಮರಿ ಮೊಮ್ಮಕ್ಕಳಾದ ರಾಹುಲ್ ಗಾಂಧಿ ಮತ್ತು ತುಷಾರ್ ಗಾಂಧಿಯನ್ನು ಪಕ್ಷವು ಇಬ್ಬರು ದಿವಂಗತ ನಾಯಕರ ಪರಂಪರೆಯ ವಾಹಕಗಳು ಎಂದು ಹಾಡಿ ಹೊಗಳಿದೆ,