
ಮುಂಬೈ, ಮಾ,17-ಕೆ.ಎಲ್. ರಾಹುಲ್ ಹಾಗೂ ಆಲ್ ರೌಂಡರ್ ಅಜೇಯ್ ಜಡೇಜಾ ಅವರ ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ವಿರುದ್ದ ಇಂದು ನಡೆದ ಏಕದಿನ ಪಂದ್ಯದಲ್ಲಿ ಭಾ
ರತ 5 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ.
ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0ಯಿಂದ ಮುನ್ನಡೆ ಸಾಧಿಸಿದೆ.
189 ರನ್ ಗಳ ಸಾಧರಣ ಮೊತ್ತವನ್ನು ಬೆನ್ನಹತ್ತಿದ ಭಾರತ ರನ್ ಗಳಿಸಲು ಸಾಕಷ್ಟು ಬೆವರಿಳಿಸ ಬೇಕಾಯಿತು. ಸೂರ್ಯಕುಮಾರ್, ವಿರಾಟ್ ಕೊಹ್ಕಿ, ಶುಭ್ ಮನ್ ಗಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲರಾದರು.
83 ರನ್ ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕಿಶನ್ 3, ಗಿಲ್ 20, ಕೊಹ್ಕಿ 4, ಸೂರ್ಯಕುಮಾರ್ ಶೂನ್ಯಕ್ಕೆ ಔಟಾದರು. ನಂತರ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್. ರಾಹುಲ್ ರನ್ ಕಲೆಹಾಕಿದರು.
ಈ ಹಂತದಲ್ಲಿ ಪಾಂಡ್ಯ 25 ರನ್ ಗಳಿಸಿ ನಿರ್ಗಮಿಸಿದರು. ನಂತರ ಜತೆಗೂಡಿದ ರಾಹುಲ್ ಮತ್ತು ಜಡೇಜಾ ತಂಡವನ್ನು ಗೆಲುವಿನ ದಡ ಸೇರಿಸಿದರು. ರಾಹುಲ್ 91 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 75 ಹಾಗೂ 69 ಎಸೆತಗಳಲ್ಲಿ 5 ಬೌಂಡರಿ ಬಾರಿಸಿ 45 ರನ್ ಗಳಿಸಿ ಅಜೇಯರಾಗುಳಿದರು.
39.5 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 191 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆಸೀಸ್ ಪರ ಸ್ಟಾರ್ಕ್ 3 ಹಾಗೂ ಮಾರ್ಕಸ್ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, ಭಾರತ ಬೌಲಿಂಗ್ ದಾಳಿಗೆ ತತ್ತರಿಸಿತು. 35.4 ಓವರ್ ಗಳಲ್ಲಿ 188 ರನ್ ಗಳಿಗೆ ಸರ್ವಪತನ ಕಂಡಿತು.
ಮಾರ್ಷ್ 81 ರನ್ ಗಳಿಸಿ ಹೊರತುಪಡಿಸಿ ಉಳಿದ ಆಟಗಾರರು ಉತ್ತಮ ಬ್ಯಾಟಿಂಗ್ ಪ್ತದರ್ಶಿಸಲು ವಿಫಲರಾದರು. ಜೋಶ್ ಲಿಂಗ್ಲಿಸ್ 26, ಸ್ಮಿತ್ 22 ರನ್ ಗಳಿಸಿದರು.
ಭಾರತದ ಶಮಿ, ಸಿರಾಜ್ ತಲಾ ಮೂರು ವಿಕೆಟ್ ಗಳಿಸಿದರೆ, ಜಡೇಜಾ 2, ಪಾಂಡ್ಯ ಹಾಗೀ ಕುಲ್ದೀಪ್ ತಲಾ ಒಂದು ವಿಕೆಟ್ ಗಳಿಸಿದರು.