ರಾಹುಲ್ ಗೆ ಮಣಿದ ರೋಹಿತ್: ಪಂಜಾಬ್ ಗೆ 9 ವಿಕೆಟ್ ಗಳ ಭರ್ಜರಿ ಜಯ

ಚೆನ್ನೈ, ಏ. 23- ಐಪಿಎಲ್ ಕ್ರಿಕೆಟ್ ನಲ್ಲಿಂದು ಮುಂಬೈ ಇಂಡಿಯನ್ಸ್ , ವಿರುದ್ಧ ಪಂಜಾಬ್ ಕಿಂಗ್ಸ್ ಒಂಬತ್ತು ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.


ಸತತ ಸೋಲಿನಿಂದ ಮುಖಭಂಗ ಅನುಭವಿಸಿದ್ದ‌ ರಾಹುಲ್ ಪಡೆ ಈ ಪಂದ್ಯದಲ್ಲಿ ಜಯಗಳಿಸುವಲ್ಲಿ ಸಫಲವಾಗಿದೆ.
ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ ಮತ್ತು ಮಯಾಂಕ್ ಮೊದಲ ವಿಕೆಟ್ ಗೆ 53 ರನ್ ಸೇರಿಸಿದರು. 25 ರನ್ ಗಳಿಸಿದ್ದಾಗ ಚಹಾರ್ ಬೌಲಿಂಗ್ ನಲ್ಲಿ ಮಯಾಂಕ್
ಔಟಾದರು.
ಬಳಿಕ ಜತೆಗೂಡಿದ ರಾಹುಲ್ ಮತ್ತು ಗೇಲ್ 17.4 ಓವರ್ ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 132 ರನ್ ಗಳಿಸಿ‌ ಗೆಲುವು ಸಾಧಿಸಿತು.
ರಾಹುಲ್ 52 ಎಸೆತಗಳಲ್ಲಿ ಮೂರು ಬೌಂಡರಿ‌ ಹಾಗೂ ಮೂರು ಸಿಕ್ಸರ್ ನಿಂದ ಅಜೇಯ 60 ಹಾಗೂ ಗೇಲ್ 35 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿ ಔಟಾಗದೆ 43 ರನ್ ಗಳಿಸಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತು.
ನಾಯಕ‌ ರೋಹಿತ್ ಶರ್ಮಾ 52 ಎಸೆತಗಳಲ್ಲಿ 62 ರನ್ ಬಾರಿಸಿದರು. ಸೂರ್ಯಕುಮಾರ್ ಯಾದವ್ 33 ರನ್ ಗಳಿಸಿದರು. ಪೊಲಾರ್ಡ್ 16 ರನ್ ಗಳಿಸಿದ್ದನ್ನು ಹೊರತುಪಡಿಸಿ ಇತರ ಆಟಗಾರರು ಉತ್ತಮ ಆಟ ಪ್ರದರ್ಶಿಸಲು ವಿಫಲರಾದರು.
ಮೊಹ್ಮದ್ ಶಮಿ ಹಾಗೂ ಮತ್ತು ರವಿ ಬಿಶ್ನೊಯಿ ತಲಾ ಎರಡು ವಿಕೆಟ್ ಪಡೆದರೆ, ಹೂಡಾ ಮತ್ತು ಅರ್ಶ್ ದೀಪ್ ಒಂದು ವಿಕೆಟ್ ಗಳಿಸಿದರು.